ಬ್ರೇಕಿಂಗ್ ನ್ಯೂಸ್
15-08-24 01:16 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 15: ಒಂದಷ್ಟು ಮುಸ್ಲಿಂ ಪ್ರಯಾಣಿಕರು ಚಲಿಸುತ್ತಿರುವ ರೈಲಿನಲ್ಲಿಯೇ ನಮಾಜ್ ಮಾಡಲು ಮುಂದಾಗಿದ್ದು ಈ ವೇಳೆ, ಅಲ್ಲಿಗೆ ಬಂದ ಟಿಟಿಇ ಅಧಿಕಾರಿಯೊಬ್ಬರು ಹೀಗೆ ಪ್ರಯಾಣಿಕರು ಓಡಾಡುವ ಸ್ಥಳದಲ್ಲಿ ಏಕೆ ನಮಾಜ್ ಮಾಡ್ತಿರಾ? ಅಷ್ಟಕ್ಕೂ ನಮಾಜ್ ಮಾಡ್ಲೇಬೇಕು ಅಂತಿದ್ರೆ ನಿಮ್ಮ ಸೀಟಿನಲ್ಲೇ ಕುಳಿತು ನಮಾಜ್ ಮಾಡಿ. ಅದು ಬಿಟ್ಟು ಇತರರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅಧಿಕಾರಿ ಮಾತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು ಅಭಿಜಿತ್ (abhijithmajumder) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲದೆ, “ಈ ಧೈರ್ಯವಂತ ಟಿಕೆಟ್ ಕಲೆಕ್ಟರ್‌ಗೆ ಪದಕ ನೀಡಿ ಗೌರವಿಸಿ” ಎಂಬ ಶೀರ್ಷಿಕೆ ಬರೆದಿದ್ದಾರೆ. ವೈರಲ್ ವಿಡಿಯೋದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಒಂದಷ್ಟು ಮುಸ್ಲಿಂ ಪ್ರಯಾಣಿಕರು ಪ್ಲಾಸ್ಟಿಕ್ ಹಾಸಿ ನಮಾಜ್ ಮಾಡಲು ತಯಾರಿ ನಡೆಸುತ್ತಿರುವ ದೃಶ್ಯ ಇದೆ. ಹೀಗೆ ನಮಾಜ್ ಮಾಡಲು ಮುಂದಾದಾಗ ಅಲ್ಲಿಗೆ ಬಂದ ಟಿಕೆಟ್ ಚೆಕ್ಕಿಂಗ್ ಅಧಿಕಾರಿ, ಇದು ರೈಲು. ನಮಾಜ್ ಮಾಡುವ ವಾಹನವಲ್ಲ, ಅಷ್ಟಕ್ಕೂ ನಿಮಗೆ ನಮಾಜ್ ಮಾಡಲೇಬೇಕು ಅಂತಿದ್ರೆ ನಿಮ್ಮ ಸೀಟ್ ಅಲ್ಲಿ ಕುಳಿತು ನಮಾಜ್ ಮಾಡಿ. ಇಲ್ಲವೇ ಸೀಟ್ ಪಕ್ಕದಲ್ಲಿರುವ ಸ್ಥಳದಲ್ಲಿ ನಮಾಜ್ ಮಾಡಿ, ಅದು ಬಿಟ್ಟು ಹೀಗೆ ಎಲ್ಲರೂ ಓಡಾಡುವ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದಲ್ಲ. ನಮಾಜ್ ಮಾಡಿ ಇತರರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಬುದ್ಧಿ ಮಾತು ಹೇಳಿದ್ದಾರೆ.
ಆಗಸ್ಟ್ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಜಾಲತಾಣದಲ್ಲಿ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು ಜನರು ಹಲವಾರು ಕಾಮೆಂಟ್ಸ್‌ಗಳನ್ನು ಹಾಕಿದ್ದಾರೆ. ಒಬ್ಬ ಬಳಕೆದಾರರು ʼನಾನೊಬ್ಬ ಮುಸ್ಲಿಂ ಆಗಿ ಹೇಳುತ್ತಿದ್ದೇನೆ, ಟಿಟಿಇ ಮಾಡಿದ ಕೆಲಸ ತುಂಬಾನೇ ಸರಿಯಾಗಿದೆʼ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ಧೈರ್ಯವಂತ ವ್ಯಕ್ತಿಗೆ ನನ್ನದೊಂದು ಸಲಾಂʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
Dear @AshwiniVaishnaw, please give this ticket collector a medal, certificate, and a cheque. pic.twitter.com/mERCeoIfrN
— Abhijit Majumder (@abhijitmajumder) August 13, 2024
A viral video shared on social medial platform X claimed and showed an Indian Railway TTE scolding passengers who were reading namaz and blocking the aisle in a train coach.
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm