Oman car accident, Gokak: ಓಮನ್‌ ನಲ್ಲಿ ಕಾರು ಅಪಘಾತ ; ಪ್ರವಾಸಕ್ಕೆ ಹೋದ ಗೋಕಾಕ್‌ ಮೂಲದ ನಾಲ್ವರು ಸಜೀವ ದಹನ

30-08-24 10:03 pm       HK News Desk   ಕರ್ನಾಟಕ

ಒಮಾನ್ ದೇಶದಲ್ಲಿ ಈಚೆಗೆ ಸಂಭವಿಸಿದ ಕಾರು ಅಪಘಾತದಲ್ಲಿ ಗೋಕಾಕ‌ ಮೂಲದ‌ ನಾಲ್ವರು ಸಜೀವ ದಹನವಾಗಿದ್ದಾರೆ.

ಬೆಳಗಾವಿ, ಆ 30: ಒಮಾನ್ ದೇಶದಲ್ಲಿ ಈಚೆಗೆ ಸಂಭವಿಸಿದ ಕಾರು ಅಪಘಾತದಲ್ಲಿ ಗೋಕಾಕ‌ ಮೂಲದ‌ ನಾಲ್ವರು ಸಜೀವ ದಹನವಾಗಿದ್ದಾರೆ.

ಗೋಕಾಕ್​ನ​ ವಿಜಯಾ ಮಾಯಪ್ಪ ತಹಶೀಲ್ದಾರ (58), ಪುತ್ರ ಪವನ್‌ ಕುಮಾರ್ (33), ಪುತ್ರಿ ಪೂಜಾ (30) ಮತ್ತು ಅಳಿಯ ರಾಯಚೂರಿನ ದೇವದುರ್ಗದ ಆದಿಶೇಷ ಬಸವರಾಜ (36) ಮೃತ ದುರ್ದೈವಿಗಳು. 

ಒಮಾನಿನ ಸಲಾಲಾ ನಗರದಿಂದ ಮುಸ್ಕತ್‌ಗೆ ತೆರಳುತ್ತಿದ್ದ ವೇಳೆ ಹೈಮಾ ಪ್ರದೇಶದ ಹತ್ತಿರ ಕಾರ್ ಅಪಘಾತಕ್ಕೀಡಾಯಿತು. ಮೊದಲು ಇವರೆಲ್ಲ ಕೇರಳದವರು ಎಂಬ ತಪ್ಪು ಮಾಹಿತಿ‌ ರವಾನೆಯಾಗಿತ್ತು. ನಾಲ್ವರೂ ಗೋಕಾಕ ಮೂಲದವರು ಎಂದು ಭಾರತೀಯ ರಾಯಭಾರ ಕಚೇರಿ‌ ಮೂಲಗಳು ಖಚಿತಪಡಿಸಿವೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ‌ ತಿಳಿಸಿದ್ದಾರೆ.

ಶವಗಳನ್ನು ಹೈಮಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತದೇಹಗಳನ್ನು ಭಾರತಕ್ಕೆ ತರಲು ಈಗಾಗಲೇ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಭಾರತೀಯ ರಾಯಭಾರ ಕಚೇರಿಯಿಂದ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲು ಮನವಿ ಮಾಡಲಾಗಿದೆ' ಎಂದರು.

ನಾಲ್ವರು ಕಾರಿನಲ್ಲಿ ಸಲಾಲಾ ನಗರದಿಂದ ಮಸ್ಕತ್‌ಗೆ ತೆರಳುತ್ತಿದ್ದರು. ಮಧ್ಯದಲ್ಲಿ ಪೆಟ್ರೋಲ್‌ ಖಾಲಿಯಾಗಿದ್ದರಿಂದ ರಸ್ತೆ ಬದಿ ಕಾರ್‌ ನಿಲ್ಲಿಸಿದ್ದರು. ಆಗ ಸ್ಥಳಕ್ಕೆ ಬಂದ ಪೊಲೀಸರು ಇವರ ಸಂಪೂರ್ಣ ಮಾಹಿತಿ ಕಲೆಹಾಕಿದರು. ಪೊಲೀಸರು ಪೆಟ್ರೋಲ್‌ ತರಿಸಿಕೊಟ್ಟ ಬಳಿಕ ಮತ್ತೆ ಕಾರು ಹತ್ತಿಕೊಂಡು ನಾಲ್ವರೂ ಹೊರಟಿದ್ದರು. ಈ ವೇಳೆ 15 ಕಿ.ಮೀ ಮುಂದೆ ಹೋಗುತ್ತಿದ್ದಂತೆ ಕಾರಿನ ಮುಂದೆ ಹೋಗುತ್ತಿದ್ದ ತೈಲ ಸಾಗಣೆಯ ಟ್ಯಾಂಕರ್ ಗೆ ಬೆಂಕಿ ತಾಗಿ ಅದು ಸ್ಫೋಟಗೊಂಡಿದೆ. ಬಳಿಕ ಇವರ ಕಾರಿನ ಮೇಲೆಯೂ ತೈಲ ಚೆಲ್ಲಿದ್ದರಿಂದ ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣ ಸುಟ್ಟು ಕರಕಲಾಯಿತು. ಮೃತರ ವಿವರವನ್ನು ಸ್ಥಳೀಯ ಪೊಲೀಸರು ಕಲೆ ಹಾಕಿದ್ದಾರೆ.

Four members of a family with origins in Gokak were killed in a road accident in the Sultanate of Oman recently. The deceased have been identified as Pavankumar Mayappa Tahsildar, Vijaya Mayappa Tahsildar, Pooja Mayappa Tahsildar and Adishesh Basavaraj. The accident occurred when they were travelling from Salalah in Oman to Muscat.