ಬ್ರೇಕಿಂಗ್ ನ್ಯೂಸ್
03-09-24 04:54 pm Bangalore Correspondent ಕರ್ನಾಟಕ
ಬೆಂಗಳೂರು, ಸೆ 03: ಯಶವಂತಪುರ ಸರ್ಕಲ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಫ್ಲೈಓವರ್ ಮೇಲಿಂದ ಕಾರೊಂದು ಕೆಳಗೆ ಬಿದ್ದಿದೆ. ಪರಿಣಾಮ ಕಾರು ಛಿದ್ರ ಛಿದ್ರಗೊಂಡಿದೆ. ಬೆಳಗಿನ ಜಾವ 3.45 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಓರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ತಮಿಳುನಾಡು ರಿಜಿಸ್ಟ್ರೇಷನ್ ವೋಲ್ಕ್ ಸ್ವಾಗನ್ ಕಾರು ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ಬರುತ್ತಿತ್ತು. ಫ್ಲೈ ಓವರ್ ಮೇಲ್ಭಾಗದಲ್ಲಿ ಒಂದು ಬೈಕ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ ಕಾರು ಕೆಳಗೆ ಬಿದ್ದಿದೆ. ಕಾರಿನಲ್ಲಿದ್ದ ಮೂವರು ಮತ್ತು ಬೈಕ್‌ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಮಹಿಳೆಯೂ ಸೇರಿದಂತೆ ಐವರಿಗೆ ಗಂಭೀರ ಗಾಯವಾಗಿದೆ.
ಫ್ಲೈ ಓವರ್ ಮೇಲಿನ ಡಿವೈಡರ್‌ಗೆ ಬಡಿದು, ಬೈಕ್‌ಗೆ ಗುದ್ದಿ, ಫ್ಲೈ ಓವರ್ ಮೇಲಿನಿಂದ ಕೆಳಗೆ ಕಾರು ಬಿದ್ದಿದೆ. ಸ್ಥಳದಲ್ಲಿದ್ದ ಹೊಯ್ಸಳ ಪೊಲೀಸರಿಂದ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಐವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯರು ಮತ್ತು ಪೊಲೀಸರಿಂದ ಅಪಘಾತಕ್ಕೊಳಗಾದವರ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೊಯ್ಸಳ ಪೊಲೀಸರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಯಶವಂತಪುರದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶಬರೀಷ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.
One person was killed and four persons severely injured when a speeding car rammed into a bike and plunged down from the Yeshwantpur flyover in Bangaluru on September 3. There were no vehicles below the flyover at the time of the accident, said the police.
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm