ಬ್ರೇಕಿಂಗ್ ನ್ಯೂಸ್
06-09-24 04:19 pm Bangalore Correspondent ಕರ್ನಾಟಕ
ಬೆಂಗಳೂರು, ಸೆ 06: ಬೆಂಗಳೂರಿನಲ್ಲಿ ಆಟೋ, ಕ್ಯಾಬ್ ಚಾಲಕರು ಮತ್ತು ಸವಾರರ ನಡುವೆ ಆಗಾಗ್ಗೆ ಸಣ್ಣ ಪುಟ್ಟ ಜಗಳ, ವಾಗ್ವಾದಗಳು ಸಾಮಾನ್ಯವಾಗಿರುತ್ತವೆ. ಇನ್ನೂ ಕೆಲವು ಬಾರಿ ಸಂಕಷ್ಟದಲ್ಲಿ ಆಸರೆಯಾದ ಕ್ಯಾಬ್, ಆಟೋ ಚಾಲಕರ ಬಗ್ಗೆ ಕೂಡ ವರದಿಯಾಗುತ್ತವೆ. ಈಗ ಆಟೋ ಚಾಲಕನೊಬ್ಬ ಓಲಾ ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಕ್ಕೆ ಮಹಿಳೆ ಜೊತೆ ಜಗಳ ಆಡಿದ್ದಲ್ಲದೆ ಕಪಾಳಕ್ಕೆ ಬಾರಿಸಿದ್ದು, ವಿಡಿಯೋ ವೈರಲ್ ಆಗಿದೆ.
ನಿತಿ ಎನ್ನುವ ಮಹಿಳೆ ಈ ಬಗ್ಗೆ ವಿಡಿಯೊ ಹಂಚಿಕೊಂಡಿದ್ದು ಸದ್ಯ ವೈರಲ್ ಆಗಿದೆ. ನಿತಿ ಮತ್ತು ಆಕೆಯ ಸ್ನೇಹಿತೆ ಇಬ್ಬರೂ ಕೂಡ ಓಲಾ ಅಪ್ಲಿಕೇಷನ್‌ನಲ್ಲಿ ಎರಡು ಆಟೋ ಬುಕ್ ಮಾಡಿದ್ದಾರೆ. ನಿತಿ ಬುಕ್ ಮಾಡಿದ್ದ ಆಟೋ ಮೊದಲು ಬಂದ ಕಾರಣ, ಆಕೆಯ ಸ್ನೇಹಿತೆ ತಾನು ಆಟೋ ಬುಕ್ ಮಾಡಿದ್ದು ಕ್ಯಾನ್ಸಲ್ ಮಾಡಿ, ನಿಧಿ ಜೊತೆ ಆಟೋ ಹತ್ತಿದ್ದಾರೆ. ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಸಿಟ್ಟಾದ ಆಟೋ ಡ್ರೈವರ್, ಆಕೆಯನ್ನು ಹಿಂಬಾಲಿಸಿಕೊಂಡಿ ಬಂದು ಜಗಳ ಆಡಿದ್ದಾರೆ
ನಿತಿ ತಮ್ಮ ಎಕ್ಸ್ ಖಾತೆಯಲ್ಲಿ ಜಗಳದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಚಾಲಕ ಕೋಪಗೊಂಡು ಮಹಿಳೆಯರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾನೆ. ಬುಕಿಂಗ್ ಕ್ಯಾನ್ಸಲ್ ಯಾಕೆ ಮಾಡಿದ್ರಿ, ಗ್ಯಾಸ್ ದುಡ್ಡು ಏನು ನಿಮ್ಮಪ್ಪ ಕೊಡ್ತಾನಾ ಎಂದು ಆಟೋ ಚಾಲಕ ಮಹಿಳೆಯರಿಗೆ ನಿಂದಿಸಿದ್ದಾನೆ. ಆಟೋ ಚಾಲಕ ಬೈಯುತ್ತಿರುವಾಗಲೇ ನಿಧಿ ನನಗೆ ಯಾಕೆ ಕಪಾಳಕ್ಕೆ ಹೊಡೆದಿರಿ ಎಂದು ಪ್ರಶ್ನೆ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ಪೊಲೀಸ್ ಸ್ಟೇಷನ್‌ಗೆ ಬನ್ನಿ ಎಂದ ಚಾಲಕ;
ಇಷ್ಟಕ್ಕೆ ಆಟೋ ಚಾಲಕ ಸುಮ್ಮನಾಗದೆ, ನಿತಿಗೆ ಚಪ್ಪಲಿಯಿಂದ ಥಳಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ನಿತಿ ಹತ್ತಿದ್ದ ಆಟೋ ಚಾಲಕ ಸಂಧಾನಕ್ಕೆ ಪ್ರಯತ್ನ ಮಾಡಿದರೂ, ಪರಿಸ್ಥಿತಿ ಸುಧಾರಣೆಯಾಗಲಿಲ್ಲ. ನೋಡುವವರು ಕೂಡ ಅಸಹಾಯಕರಾಗಿದ್ದರು. ಬಳಿಕ ಮಹಿಳೆ ಆಟ್ರೋ ಡ್ರೈವರ್ ಗೆ ಪೊಲೀಸ್ ಸ್ಟೇಷನ್‌ಗೆ ಹೋಗೋಣ ಎಂದು ಕರೆದರು, ಆಟೋ ಡ್ರೈವರ್ ಬನ್ನಿ ಹೋಗೋಣ ಎಂದರು. ಅಲ್ಲದೆ ಅಶ್ಲೀಲವಾಗಿ ನಿಂದಿಸುವುದನ್ನು ಕೂಡ ನೋಡಬಹುದು. ಇದರ ಬೆನ್ನಲ್ಲೇ ಮಾಗಡಿ ರಸ್ತೆ ಠಾಣೆ ಪೊಲೀಸರು ಆಟೋ ಚಾಲಕ ಮುತ್ತುರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ.
ಓಲಾ ಪ್ರತಿಕ್ರಿಯೆ ;
ಘಟನೆಗೆ ಸಂಬಂಧಪಟ್ಟಂತೆ ಓಲಾ ಪ್ರತಿಕ್ರಿಯೆ ನೀಡಿದ್ದು, ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ. ಪ್ರಯಾಣಿಕರ ಸುರಕ್ಷತೆ ತಮ್ಮ ಆದ್ಯತೆಯಾಗಿದ್ದು, ಅದಕ್ಕಾಗಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.
ದೂರು ನೀಡಿದ ಬಳಿಕ ಕ್ರಮ ;
ಆಟೋ ಚಾಲಕನ ದುರ್ವರ್ತನೆ ಕ್ರಮವನ್ನು ಎಡಿಜಿಪಿ ಅಲೋಕ್‌ಕುಮಾರ್ ಕೂಡ ಖಂಡಿಸಿದ್ದಾರೆ. ಜತೆಗೆ, ಇಂತಹ ಆಟೋ ಚಾಲಕನಿಂದ ಇಡೀ ಆಟೋ ಚಾಲಕರಿಗೆ ಕೆಟ್ಟ ಹೆಸರು ಬರುತ್ತದೆ. ಸಂಬಂಧಪಟ್ಟ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.
Yesterday I faced severe harassment and was physically assaulted by your auto driver in Bangalore after a simple ride cancellation. Despite reporting, your customer support has been unresponsive. Immediate action is needed! @Olacabs @ola_supports @BlrCityPolice pic.twitter.com/iTkXFKDMS7
— Niti (@nihihiti) September 4, 2024
Bengaluru police have detained auto driver R Muthuraj for verbally abusing and slapping a woman after she cancelled her ride and opted for another auto to reach her destination. The 46-year-old Ola auto driver was apprehended by the Magadi Road Police, with legal action underway.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm