DV in Kannada, Deepak Arrest: 'ರೌಡಿ ನಂಬರ್ ಬೇಕಿದ್ರೆ ಕೇಳು' ಅಂತ ಬೆದರಿಕೆ ಹಾಕಿದ್ದ ಯೂಟ್ಯೂಬರ್ ವಶಕ್ಕೆ ಪಡೆದು ಡ್ರಿಲ್ ಮಾಡಿದ ಕಾಡುಗೋಡಿ ಪೊಲೀಸರು

09-09-24 10:55 pm       Bangalore Correspondent   ಕರ್ನಾಟಕ

ಸಾಮಾಜಿಕ ಜಾಲತಾಣದಲ್ಲಿ ಸಹ ಯೂಟ್ಯೂಬರ್ ಗೆ ಬೆದರಿಕೆ ಹಾಕುವ ನೆಪದಲ್ಲಿ ರೌಡಿಗಳ ನಂಬರ್ ಬೇಕಿದ್ದರೆ ನನಗೆ ಕೇಳು, ನಾನೇ ಕಳಿಸ್ತೀನಿ ಎಂದು ಹೇಳಿ ವಿಡಿಯೋ ಹಾಕಿದ್ದ ಕನ್ನಡ ಯೂಟ್ಯೂಬರ್ ದೀಪಕ್ (@DVINKANNADA) ಎಂಬವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು, ಸೆ.9: ಸಾಮಾಜಿಕ ಜಾಲತಾಣದಲ್ಲಿ ಸಹ ಯೂಟ್ಯೂಬರ್ ಗೆ ಬೆದರಿಕೆ ಹಾಕುವ ನೆಪದಲ್ಲಿ ರೌಡಿಗಳ ನಂಬರ್ ಬೇಕಿದ್ದರೆ ನನಗೆ ಕೇಳು, ನಾನೇ ಕಳಿಸ್ತೀನಿ ಎಂದು ಹೇಳಿ ವಿಡಿಯೋ ಹಾಕಿದ್ದ ಕನ್ನಡ ಯೂಟ್ಯೂಬರ್ ದೀಪಕ್ (@DVINKANNADA) ಎಂಬವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೇರೊಬ್ಬ ಯೂಟ್ಯೂಬರ್ ಗೆ ದೀಪಕ್ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಹಾಕಿದ್ದ. ಈ ಕುರಿತು ದೀಪಕ್ ಮಾತಾಡಿದ್ದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ವಿಚಾರದಲ್ಲಿ ಬೆಂಗಳೂರಿನ ಕಾಡುಗೋಡಿ ಪೊಲೀಸರು ದೀಪಕ್ ನನ್ನು ವಶಕ್ಕೆ ಪಡೆದು ಬಾರೀ ರೌಡಿ ನಂಬರ್ ಇಟ್ಕೊಂಡಿದ್ದೀಯಾ, ನಂಬರ್ ಇದ್ರೆ ಕೊಡು ಅಂತ ವಾರ್ನ್ ಮಾಡಿದ್ದಾರೆ. 

ಈ ಕುರಿತು ಎಕ್ಸ್ ನಲ್ಲಿ ಸ್ಪಷ್ಟನೆ ನೀಡಿರುವ ಪೊಲೀಸರು (@dcpwhitefield) ‘ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಾಕಿ ಸಾರ್ವಜನಿಕರಲ್ಲಿ ಭಯವನ್ನು ಉಂಟುಮಾಡಿರುವ ದೀಪಕ್‌ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು, ಕಾಡುಗೋಡಿ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿರುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.

ಜಗಳಕ್ಕೆ ಕಾರಣ ಏನು?:

ಕೆಲ ಯುಟ್ಯೂಬರ್‌ಗಳು ಹಾಗೂ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ತಮ್ಮ ರೀಲ್ಸ್‌, ವಿಡಿಯೋ ಜೊತೆಗೆ ಬೆಟ್ಟಿಂಗ್‌ ಆಪ್‌ಗಳ ಬಗ್ಗೆಯೂ ಜಾಹೀರಾತು ನೀಡುತ್ತಿದ್ದಾರೆ. ದೀಪಕ್‌ ಕೂಡ ಈ ಹಿಂದೆ ಬೆಟ್ಟಿಂಗ್‌ ಆಪ್‌ ಪ್ರಮೋಟ್‌ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ, ಕನ್ನಡದ ಯುಟ್ಯೂಬರ್‌ಗಳಲ್ಲಿ ಈ ಬೆಟ್ಟಿಂಗ್‌ ಪ್ರಮೋಷನ್‌ಗೆ ವಿರೋಧ ಕೂಡ ಇದೆ. ‌

ಇದೇ ವಿಚಾರವಾಗಿ ದೀಪಕ್‌ ಅವರಿಗೂ ಬೇರೆ ಯುಟ್ಯೂಬರ್‌ಗಳ ನಡುವೆ ಜಗಳ ನಡೆದಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಬೇರೆ ಯುಟ್ಯೂಬರ್‌ವೊಬ್ಬರು ತನ್ನ ವಿಡಿಯೋದಲ್ಲಿ ಆಡಿರುವ ಮಾತುಗಳು ಕೂಡ ದೀಪಕ್‌ ಅವರ ವೈಯಕ್ತಿಕ ವಿಚಾರಗಳಿಗೆ ಹೋಲುವಂತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ದೀಪಕ್ ಅವರು ವಿಡಿಯೋದಲ್ಲಿ ಖಾರವಾಗಿ ಮಾತನಾಡಿದ್ದರು, ಆದರೆ ಅದು ಅವರನ್ನು ಪೊಲೀಸ್‌ ಠಾಣೆವರೆಗೂ ಕರೆತಂದಿದೆ. ಕಾಮೆಂಟ್‌ಗಳಲ್ಲಿ ಕನ್ನಡದ ಮತ್ತೊಬ್ಬ ಖ್ಯಾತ ಯೂಟ್ಯೂಬರ್‌ "ಟಿಪಿಕಲ್‌ ಕನ್ನಡಿಗ" ಅವರೊಂದಿಗೆ ಈ ಗಲಾಟೆ ನಡೆದಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ.

Dv in Kannada Youtuber Deepak arrested after threatening video went viral on social media. Bangalore Adugodi police have arrested Deepak. Deepak had threatened some youtuber on live stating that he's the biggest rowdy in Bangalore.