ಬ್ರೇಕಿಂಗ್ ನ್ಯೂಸ್
11-09-24 01:30 pm HK News Desk ಕರ್ನಾಟಕ
ಮಂಡ್ಯ, ಸೆ.11: ದುಡ್ಡೆಲ್ಲ ಗ್ಯಾರಂಟಿ ಯೋಜನೆಗೆ ಹೋಗ್ತಿದೆ. ಹಾಗಾಗಿ ಅಭಿವೃದ್ಧಿ ಕೆಲಸ ಆಗ್ತಿಲ್ಲ. ಸರ್ಕಾರದ ಬಳಿ ಹಣ ಇಲ್ಲ. ಜನರು ಅಭಿವೃದ್ಧಿ ಬಗ್ಗೆ ಕೇಳುತ್ತಿದ್ದಾರೆ. ಈ ಕಾರಣದಿಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಪುನರ್ ಪರಿಶೀಲನೆ ಅಗತ್ಯವಿದೆ. ಗ್ಯಾರಂಟಿ ಯೋಜನೆ ವರ್ಕ್ ಆಗ್ತಿದ್ಯಾ? ಸೇರಬೇಕಾದವರಿಗೆ ಸೇರ್ತಾ ಇದೆಯಾ ಅನ್ನೋದರ ಬಗ್ಗೆ ಅಧ್ಯಯನ ಆಗಬೇಕು ಎಂದು ಕಾಂಗ್ರೆಸ್ ಸರ್ಕಾರದ ಬೆಂಬಲಿತ ಶಾಸಕ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಅಭಿವೃದ್ಧಿಗೆ ಹಣ ಬರ್ತಿಲ್ಲ, ದೊಡ್ಡ ಮಟ್ಟದ ಫಂಡ್ ಬರ್ತಿಲ್ಲ. ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ಎಷ್ಟಿದೆ, ಅದರಲ್ಲಿ ಸರ್ಕಾರ ಮ್ಯಾನೇಜ್ ಮಾಡ್ತಿದ್ದಾರೆ. ಹಿಂದಿನ ಪೇಮೆಂಟ್ ಮಾಡೋದೆ ಸಾವಿರಾರು ಕೋಟಿ ಪೆಂಡಿಂಗ್ ಇದೆ. ಜನರ ಬಳಿ ಹೋದ ಸಂದರ್ಭದಲ್ಲಿ ಮುಜುಗರವಾಗುತ್ತಿದೆ. ನಾವು ಹೋದಾಗ ಅಭಿವೃದ್ಧಿ ಬಗ್ಗೆಯೇ ಕೇಳ್ತಾರೆ. ರಸ್ತೆಯಾಗಿಲ್ಲ, ಚರಂಡಿ ಆಗಲಿಲ್ಲ ಎಂದು ಪ್ರಶ್ನೆ ಮಾಡ್ತಾರೆ. ಅಭಿವೃದ್ಧಿ ಮಾಡುವಷ್ಟು ಹಣ ನಮಗೆ ಬರ್ತಿಲ್ಲ.
ಗ್ಯಾರಂಟಿ ನಮ್ಮ ರಾಜ್ಯದಲ್ಲಿ ಒಂದೇ ಅಲ್ಲ. ಬೇರೆ ಕಡೆಯಲ್ಲು ಮಾಡಿದ್ದಾರೆ. ಆರ್ಥಿಕವಾಗಿ ಕಾಣಿಸಲು ಹೆಚ್ಚು ಕಾಲ ಹಿಡಿಯುತ್ತದೆ. ಡೆವಲಪ್ಮೆಂಟ್ ಅಂದ್ರೆ ಏನು ಅನ್ನೋದನ್ನ ಪ್ರಶ್ನೆ ಮಾಡಬೇಕಿದೆ. ಮೂರೊತ್ತು ಊಟ ಮಾಡೋದು ಡೆವಲಪ್ಮೆಂಟಾ? ಅಥವಾ ಅಭಿವೃದ್ಧಿ ಕಡೆ ಫೋಕಸ್ ಮಾಡಬೇಕಾ.? ಮಳೆ ಸಂದರ್ಭದಲ್ಲಿ ರಸ್ತೆ, ಚರಂಡಿ ಸಮಸ್ಯೆ ಇದೆ. ಇದನ್ನೆಲ್ಲ ಮಾಡೋದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಗ್ಯಾರಂಟಿ ಬಗ್ಗೆ ಕೆಲವರು ಬೇಕು ಅಂದರೆ ಮತ್ತೆ ಕೆಲವರು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಕೆಲವರ ಜೀವನ ಗ್ಯಾರಂಟಿ ಸ್ಕೀಮ್ ನಿಂದ ನಡೆಯುತ್ತಿದೆ ಎನ್ನುತ್ತಾರೆ. ಕೆಲವರು ಗ್ಯಾರಂಟಿ ಸ್ಕೀಮ್ ಬೇಡ, ರಸ್ತೆ ಅಭಿವೃದ್ಧಿ ಮಾಡಿ ಅಂತಿದ್ದಾರೆ. ಮೊದಲು ಆಗಬೇಕಿರೋದು ಅಭಿವೃದ್ಧಿ ಕೆಲಸ. ಗ್ಯಾರಂಟಿ ಯೋಜನೆಯಲ್ಲಿ ಎಲ್ಲೆಲ್ಲಿ ಬದಲಾವಣೆ ತರಬಹುದು, ಅದರ ಮೇಲೆ ನಿಗಾ ವಹಿಸಬೇಕು. ರಾಜ್ಯ ಸರ್ಕಾರ ತಜ್ಞರೊಂದಿಗೆ ಕುಳಿತು ಚರ್ಚೆ ಮಾಡಬೇಕಿದೆ. ಕಳೆದ ಸೆಷನ್ನಲ್ಲೇ ಈ ವಿಚಾರ ಪ್ರಸ್ತಾಪ ಮಾಡಬೇಕು ಅನ್ಕೊಂಡಿದ್ದೆ. ಗ್ಯಾರಂಟಿ ಯಾರು ಯಾರಿಗೆ ತಲುಪುತ್ತಿದೆ, ಯಾರಿಗೆ ತಲುಪುತ್ತಿಲ್ಲ, ಆರ್ಥಿಕತೆ ಬಗ್ಗೆ ಮಾಹಿತಿ ಪಡೆಯಬೇಕು. ಅವಶ್ಯಕತೆ ಇಲ್ಲದ ಗ್ಯಾರಂಟಿ ಯೋಜನೆ ತೆಗೆಯುವುದು ಒಳ್ಳೆಯದು. ಸರಿಯಾಗಿ ಅಸೆಸ್ ಮಾಡುತ್ತಾ ಹೋದರೇ ಸರಿ ದಾರಿಯಲ್ಲಿ ಹೋಗಬಹುದು. ವರ್ಕ್ ಆಗುತ್ತಿರುವುದನ್ನ ಸರ್ವೆ ಮಾಡಿ ಪರಿಶೀಲನೆ ನಡೆಸಿ. ಜೊತೆಗೆ ರಾಜ್ಯದ ಅರ್ಥಿಕತೆ ಬಗ್ಗೆಯೂ ಅರ್ಥ ಮಾಡಿಕೊಳ್ಳಬೇಕು ಎಂದು ದರ್ಶನ್ ಪುಟ್ಟಣ್ಣಯ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
Government money is only used for free bees no development, feeling ashamed says MLA Darshan Puttannaiah, says unable to face our voters as we aren’t In a place to provide them any development he added.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm