ಬ್ರೇಕಿಂಗ್ ನ್ಯೂಸ್
15-09-24 01:53 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.15: ಪಕ್ಷದಲ್ಲಿ ಬಣ ರಾಜಕಾರಣ ಪ್ರಾಬಲ್ಯ ಪಡೆಯುತ್ತಿರುವ ಹಿನ್ನೆಲೆಯಲ್ಲಿ ನಾಯಕರಿಗೆ ಮೂಗುದಾರ ಹಾಕಲು ಆರೆಸ್ಸೆಸ್ ಮುಂದಾಗಿದೆ. ಪಕ್ಷ ಮತ್ತು ಸಂಘಟನೆಯನ್ನು ಹಿಡಿತಕ್ಕೆ ತರಲು ರಾಜ್ಯ ಬಿಜೆಪಿಗೆ ಮತ್ತೆ ಸಂಘಟನಾ ಕಾರ್ಯದರ್ಶಿಯನ್ನು ನಿಯೋಜನೆ ಮಾಡುವುದಕ್ಕೆ ಆರ್‌ಎಸ್ ಎಸ್ ಚಿಂತನೆ ನಡೆಸಿದೆ.
ಒಂದು ವರ್ಷದ ಹಿಂದಷ್ಟೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಕಗೊಂಡಿದ್ದ ಪುತ್ತೂರು ಮೂಲದ ಜಿ.ವಿ.ರಾಜೇಶ್ ಅವರನ್ನು ಸಂಘ ಪರಿವಾರ ಅನಿರೀಕ್ಷಿತ ಎನ್ನುವಂತೆ ವಾಪಸ್ ಕರೆಸಿಕೊಂಡಿತ್ತು. ಅವರನ್ನು ನಿಯೋಜಿಸಿದಷ್ಟೇ ವೇಗವಾಗಿ ವಾಪಸ್ ಕರೆಸಿಕೊಂಡಿದ್ದು ಬಿಜೆಪಿ ಒಳಗಡೆ ತೀವ್ರ ಚರ್ಚೆಗೂ ಕಾರಣವಾಗಿತ್ತು. ಅದಾಗಿ ಎರಡು ತಿಂಗಳು ಕಳೆದರೂ ಆ ಸ್ಥಾನ ತುಂಬುವ ಸುಳಿವು ಇರಲಿಲ್ಲ. ಅಲ್ಲದೆ, ಪಕ್ಷದ ಸಂಘಟನಾತ್ಮಕ ನೆಲೆಯಲ್ಲಿ ಮಾಡಿಕೊಂಡಿದ್ದ ವಿಭಾಗೀಯ ಕಾರ್ಯದರ್ಶಿ ಹುದ್ದೆಯನ್ನೂ ಖಾಲಿ ಬಿಡಲಾಗಿತ್ತು.
ಬಿಜೆಪಿ ಉನ್ನತ ಮೂಲಗಳ ಪ್ರಕಾರ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸದ್ಯಕ್ಕೆ ಹೊಸತಾಗಿ ನೇಮಕ ಮಾಡದಿರಲು ಸಂಘದ ಹಿರಿಯರು ತೀರ್ಮಾನ ತೆಗೆದುಕೊಂಡಿದ್ದರು. ಪಕ್ಷದ ನಾಯಕರ ಮಧ್ಯೆ ಎದ್ದಿರುವ ಭಿನ್ನಮತ, ವಿರೋಧಿ ಹೇಳಿಕೆಗಳ ಕಾರಣದಿಂದ ಪಕ್ಷಕ್ಕೆ ಮುಜುಗರ ಆಗುತ್ತಿರುವುದು ಮತ್ತು ಪಕ್ಷದ ಒಳಗಡೆ ಎಡವಟ್ಟು ಆಗಿರುವುದು ಇವನ್ನೆಲ್ಲ ನಿಗಾ ಇಡಲು ಹಿರಿಯರೊಬ್ಬರ ಅಗತ್ಯವಿದೆ ಎಂಬ ನಿಲುವಿಗೆ ಸಂಘದ ಪ್ರಮುಖರು ಬಂದಿದ್ದಾರೆ. ಜತೆಗೆ ಸಂಘಟನಾತ್ಮಕ ನೆಲೆಯಲ್ಲೂ ಬಿಜೆಪಿ ಬಲ ಕುಸಿತ ಆಗುತ್ತಿರುವುದರಿಂದ ಆರೆಸ್ಸೆಸ್ ಆತಂಕಗೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಂಘದ ಹಿರಿಯರು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ನಾಯಕರ ಸಮನ್ವಯ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ನಾಯಕರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದರು. ಬಹಿರಂಗವಾಗಿಯೇ ಮಾತನಾಡುತ್ತಿರುವ ಯತ್ನಾಳ್, ರಮೇಶ್ ಜಾರಕಿಹೊಳಿ ವಿಜಯೇಂದ್ರ ಬಗ್ಗೆ ಆರೋಪಗಳ ಸುರಿಮಳೆ ಮಾಡಿದ್ದರು. ಇದರ ಬೆನ್ನಲ್ಲೇ ವಿಜಯೇಂದ್ರ ದೆಹಲಿಗೆ ತೆರಳಿದ್ದು ರಾಜ್ಯದ ಬೆಳವಣಿಗೆ ಬಗ್ಗೆ ದೆಹಲಿ ನಾಯಕರಿಗೆ ಮನವರಿಕೆ ಮಾಡುವ ಪ್ರಯತ್ನಪಟ್ಟಿದ್ದರು.
Possibility of appointment of organizing secretary again for state BJP, RSS thought to avoid factionalism.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm