ಬ್ರೇಕಿಂಗ್ ನ್ಯೂಸ್
18-09-24 07:16 pm HK News Desk ಕರ್ನಾಟಕ
ಮಂಡ್ಯ, ಸೆ.18: ನಾಗಮಂಗಲದಲ್ಲಿ ಸುಮಾರು ಎರಡು ಸಾವಿರ ಬಾಂಗ್ಲಾ ದೇಶಿಗರು ಇದ್ದಾರೆ. ಸರಿಯಾದ ತನಿಖೆಯಾದ್ರೆ ಎಲ್ಲವೂ ಆಚೆ ಬರುತ್ತೆ. ರಾಜ್ಯ ಸರ್ಕಾರಕ್ಕೆ ನಿಷ್ಪಕ್ಷಪಾತವಾಗಿ ತನಿಖೆ ಮಾಡುವ ಶಕ್ತಿ ಇದ್ಯಾ ಎಂದು ಮಾಜಿ ಶಾಸಕ ಸುರೇಶ್ ಗೌಡ ಪ್ರಶ್ನಿಸಿದ್ದಾರೆ.
ನಾಗಮಂಗಲದಲ್ಲಿ ಕೆಲವು ತೋಟದ ಮನೆಗಳು, ಕೋಳಿ ಫಾರಂ, ಫೀಡ್ಸ್ ಕಾರ್ಖಾನೆ ಮೇಲೆ ರೇಡ್ ಮಾಡುದ್ರೆ ಯಾವ ಊರಿನವರು ಅಂತ ಗೊತ್ತಾಗುತ್ತೆ. ಸ್ಟಾರ್ ಫಾರಂನವರು ಅವರ ಜೊತೆ ಇರುವವರೆಲ್ಲ ಬಾಂಗ್ಲಾ ದೇಶದವರು. ನಮ್ಮ ದೇಶಕ್ಕೆ ಹೇಗೆ ಬಂದ್ರು? ಲೀಗಲ್ ಅಥವಾ ಇಲ್ಲೀಗಲ್ಲಾ? ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡಿದಾಗ ಮಾತ್ರ ನೋಡುವುದಲ್ಲ. ಮೊದಲಿನಿಂದಲೂ ಎಚ್ಚರಿಕೆ ವಹಿಸಬೇಕು. ರೇಷನ್ ಕಾರ್ಡ್, ಆಧಾರ್ ಮಾಡಿಸೋದು ತುಂಬಾ ಸುಲಭ, ಅದಕ್ಕೆ ಮಾಡಿಸಿಕೊಂಡಿರುತ್ತಾರೆ. ಬಾಂಗ್ಲಾ ದೇಶದವರ ವಿಚಾರ ಎಲ್ಲಾ ಸಭೆಯಲ್ಲಿ ಗಮನಕ್ಕೆ ತಂದಿದ್ದೇನೆ. ಯಾರು ಸಹ ತನಿಖೆ ಮಾಡಲ್ಲ, ನಿರ್ಲಕ್ಷ್ಯ ತೋರಿದ್ದಾರೆ. ಗೃಹ ಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ನಮ್ಮಲ್ಲಿಯ ಅಧಿಕಾರಿಗಳ ಬಳಿಯೂ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ನಾಗಮಂಗಲದಲ್ಲಿ ಸುಮಾರು ಎರಡು ಸಾವಿರ ಬಾಂಗ್ಲಿಗರು ಇದ್ದಾರೆ. ಎಲ್ಲರು ಬಾಂಗ್ಲಾದೇಶದವರು ತೋಟ ಬಿಟ್ಟು ಹೊರಗೆ ಬರಲ್ಲ. ಅದರ ಬಗ್ಗೆ ತನಿಖೆ ಮಾಡಬೇಕು. ನಮ್ಮ ದೇಶದ ಒಳಗೆ ಬಂದು ಹೇಗಿದ್ದಾರೆ? ನಮ್ಮನ್ನ ಬೇರೆ ದೇಶಕ್ಕೆ ಬಿಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೆ, ನಾಗಮಂಗಲಕ್ಕೆ ಮೊನ್ನೆ ಘಟನೆಯಾದಾಗ ಬಾಂಬೆಯಿಂದ ಪಠಾಣ್ ಸಂಘದವರು ಬಂದಿದ್ದಾರೆ. ಕೇರಳದಿಂದ 20 ಜನರು ಬಂದು ಹೋಗಿದ್ದಾರೆ. ಪ್ರಾರ್ಥನಾ ಮಂದಿರಕ್ಕೆ ಹೋಗ್ತಾರೆ, ಮಾತನಾಡಿಕೊಳ್ತಾರೆ. ಪೊಲೀಸರು ಅಲ್ಲಿಗೆ ಹೋಗುವಾಗಿಲ್ಲ. ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ನಾಗಮಂಗಲ ಬೂದಿ ಮುಚ್ಚಿದ ಕೆಂಡದಂತಿದೆ, ಯಾವಾಗ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ.
ಚಲುವರಾಯಸ್ವಾಮಿ ಸಚಿವರಾಗಿರಲು ಅನ್ ಫಿಟ್. ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಅಮಾಯಕರನ್ನ ಬಂಧಿಸಿದ್ದೇವೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಸಚಿವರು ಒಪ್ಪಿಕೊಂಡ್ರೆ ಸರ್ಕಾರವೇ ಒಪ್ಪಿಕೊಂಡಂತೆ. ಸಿದ್ದರಾಮಯ್ಯ ಇಷ್ಟೊಂದು ದುರ್ಬಲರಾಗುತ್ತಾರೆ ಅಂದುಕೊಂಡಿರಲಿಲ್ಲ. ಇನೋಸೆಂಟ್ ಅಂತ ಗೊತ್ತಾದ ಮೇಲೆ ಜೈಲಿಗೆ ಹಾಕಿದ್ದೇಕೆ ? ಒಮ್ಮೆ ಜೈಲಿಗೆ ಹೋಗಿ ಬಂದ್ರೆ ಮತ್ತೆ ಭಯ ಇರೋದಿಲ್ಲ. ಅಮಾಯಕನನ್ನ ಬಂಧಿಸಿದವರಿಗೆ ಏನು ಶಿಕ್ಷೆ ಕೊಟ್ರಿ ಎಂದು ಸುರೇಶ್ ಗೌಡ ಪ್ರಶ್ನೆ ಮಾಡಿದ್ದಾರೆ.
ಅಧಿಕಾರ, ದುಡ್ಡಿನ ಅಮಲಿನಲ್ಲಿ ಮೆರೆಯುತ್ತಿದ್ದಾರೆ. ಪಾಪದ ಕೊಡ ತುಂಬಿದೆ, ಇದಕ್ಕೆಲ್ಲ ಟೈಮ್ ಬರುತ್ತೆ. ಮಾನ ಮರ್ಯಾದೆ ಇದ್ರೆ ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು. ಗಲಭೆ ತಡೆಯೋದು ಬಿಟ್ಟು ಪೊಲೀಸರು ಆದೇಶಕ್ಕಾಗಿ ಕಾಯುತ್ತಿದ್ರು. ಗಲಾಟೆ ನಡೆಯುವ 10 ನಿಮಿಷದ ಮುನ್ನ ರಿಸರ್ವ್ ವ್ಯಾನ್ ಏಕೆ ಹೋಯ್ತು.? ಸಸ್ಪೆಂಡ್ ಆದ ಇನ್ಸ್ ಪೆಕ್ಟರ್ ಮೊಬೈಲ್ ಕಾಲ್ ಲೀಸ್ಟ್ ಚೆಕ್ ಮಾಡಿದ್ರೆ ಎಲ್ಲವೂ ಬಹಿರಂಗ ಆಗುತ್ತೆ ಎಂದು ಪರೋಕ್ಷವಾಗಿ ಸಚಿವ ಚಲುವರಾಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Former MLA Suresh gowda says nagamangala has two thousand Bangladeshi residents leaving there, says home minister knows all this but still he's quite he slammed.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm