BJP MLA Munirathna, Rape Case; ಜಾತಿ ನಿಂದನೆ ಕೇಸ್ ಬೆನ್ನಲ್ಲೇ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸು ; ಬಿಜೆಪಿ ಶಾಸಕನಿಗೆ ಮತ್ತೊಂದು ಸಂಕಷ್ಟ 

19-09-24 11:37 am       HK News Desk   ಕರ್ನಾಟಕ

ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ ನೀಡಿ ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸು ದಾಖಲಾಗಿದ್ದು ಜಾಮೀನು ಸಿಗೋದು ಕಷ್ಟವಾಗಲಿದೆ.  

ಬೆಂಗಳೂರು, ಸೆ.19: ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ ನೀಡಿ ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸು ದಾಖಲಾಗಿದ್ದು ಜಾಮೀನು ಸಿಗೋದು ಕಷ್ಟವಾಗಲಿದೆ.  

ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ‌ಶಾಸಕ ಮುನಿರತ್ನ ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 354ಎ, 354ಸಿ, 376, 506, 504, 120(ಬಿ), 149, 384, 406, 308 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮುನಿರತ್ನ ನಾಯ್ಡು (ಎ1), ವಿಜಯ್‌ ಕುಮಾರ್‌ (ಎ2), ಸುಧಾಕರ (ಎ3), ಕಿರಣ್‌ ಕುಮಾರ್‌ (ಎ4), ಲೋಹಿತ್‌ ಗೌಡ (ಎ5), ಮಂಜುನಾಥ (ಎ6), ಲೋಕಿ (ಎ7) ಎಂಬವರ ವಿರುದ್ಧ ಎಫ್‌ಐಆರ್‌ ನಲ್ಲಿ ಆರೋಪ ಹೊರಿಸಲಾಗಿದೆ. 

ಕಗ್ಗಲೀಪುರದ ಖಾಸಗಿ ರೆಸಾರ್ಟ್‌ನಲ್ಲಿ ಅತ್ಯಾಚಾರ ನಡೆದಿರುವುದಾಗಿ ಯುವತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ ನೀಡಿ ಜಾತಿ ನಿಂದನೆ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಾಸಕ ಮುನಿರತ್ನ ಅವರ ಜಾಮೀನು ಅರ್ಜಿ ಆದೇಶವನ್ನು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರಕ್ಕೆ (ಸೆ.19) ಕಾಯ್ದಿರಿಸಿದೆ. ಇದರ ನಡುವಲ್ಲೇ ಅತ್ಯಾಚಾರ ಪ್ರಕರಣ ಎದುರಾಗಿದ್ದು ಜಾಮೀನು ಸಿಗುತ್ತಾ ಎಂಬುದು ನಿರ್ಧಾರವಾಗಲಿದೆ.

A case has been registered against Karnataka BJP MLA Munirathna and six others over allegations of raping a woman at a private resort near Bengaluru. The Karnataka Police confirmed that a case of rape, honey trapping and sexual harassment has been filed against Munirathna at the Kaggalipura police station in Ramanagara district.