Zameer Ahmed, Palestinian flag: ಪ್ಯಾಲೆಸ್ತೀನ್ ಧ್ವಜ ಹಿಡಿದು ಮೆರವಣಿಗೆ ಮಾಡಿದರೆ ತಪ್ಪೇನಿಲ್ಲ ; ಸಚಿವ ಜಮೀರ್ ಅಹ್ಮದ್ ಸಮರ್ಥನೆ

19-09-24 08:03 pm       HK News Desk   ಕರ್ನಾಟಕ

ಪ್ಯಾಲೆಸ್ತೀನ್ ಧ್ವಜ ಹಿಡಿದು ಮೆರವಣಿಗೆ ಮಾಡಿದರೆ ತಪ್ಪೇನಿಲ್ಲ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ ಪ್ಯಾಲೆಸ್ತೀನ್ ಧ್ವಜ ಮೆರವಣಿಗೆಯನ್ನು ಸಮರ್ಥಿಸಿಕೊಂಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಲಬುರಗಿ, ಸೆ.19: ಪ್ಯಾಲೆಸ್ತೀನ್ ಧ್ವಜ ಹಿಡಿದು ಮೆರವಣಿಗೆ ಮಾಡಿದರೆ ತಪ್ಪೇನಿಲ್ಲ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ ಪ್ಯಾಲೆಸ್ತೀನ್ ಧ್ವಜ ಮೆರವಣಿಗೆಯನ್ನು ಸಮರ್ಥಿಸಿಕೊಂಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಹಲವಡೆ ಕಿಡಗೇಡಿಗಳಿಂದ ಪ್ಯಾಲೆಸ್ತೀನ್ ಧ್ವಜ ಹಾರಾಟ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಲೆಸ್ತೀನ್‌ಗೆ ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದೆ. ಕೇಂದ್ರವೇ ‘ವಿ ಆರ್ ವಿತ್ ಪ್ಯಾಲೆಸ್ತೀನ್’ ಅಂದಿದೆ. ಕೇಂದ್ರ ಸರ್ಕಾರ ಹೇಳಿದ ಮೇಲೆ ತಾನೇ ಯಾರೋ ಧ್ವಜ ಹಿಡಿದು ಮೆರವಣಿಗೆ ಮಾಡಿದ್ದು. ಧ್ವಜ ಹಿಡಿದರೆ ತಪ್ಪೇನು ಇಲ್ಲ ಅನ್ನಿಸುತ್ತೆ ಎಂದರು. 

ಬೇರೆ ದೇಶದ ಪರ ಘೋಷಣೆ ಕೂಗಬಾರದು. ಘೋಷಣೆ ಕೂಗಿದರೆ ಅಂಥವರು ದೇಶದ್ರೋಹಿ ಕೆಲಸ ಮಾಡಿದಂತೆ ಆಗುತ್ತದೆ. ಘೋಷಣೆ ಕೂಗಿದವರು ಯಾರೇ ಇರಲಿ ಗಲ್ಲು ಶಿಕ್ಷೆಯಾಗಬೇಕು. ನಾನು ಮೊದಲು ಹಿಂದೂಸ್ತಾನಿ, ಆಮೇಲೆ ಕನ್ನಡಿಗ. ಅದಾದ ಮೇಲೆ ಮುಸ್ಲಿಂ. ಯಾರೇ ಆದರೂ ಬೇರೆ ದೇಶದ ಪರ ಘೋಷಣೆ ಕೂಗಬಾರದು ಎಂದು ತಿಳಿಸಿದರು.

Minister Zameer Ahmed has defended the palestinian flag march, saying there is nothing wrong in holding the Palestinian flag.