ಬ್ರೇಕಿಂಗ್ ನ್ಯೂಸ್
19-09-24 08:42 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.19: ಜಾತಿ ನಿಂದನೆ, ಗುತ್ತಿಗೆದಾರನಿಗೆ ಲಂಚಕ್ಕಾಗಿ ಬೆದರಿಕೆ ಹಾಕಿ ಜೈಲು ಪಾಲಾಗಿರುವ ಶಾಸಕ ಮುನಿರತ್ನ ಮಹಿಳೆಯರನ್ನು ಮುಂದಿಟ್ಟು ತನಗೆ ಆಗದವರನ್ನು ಸದ್ದಿಲ್ಲದೆ ಮುಗಿಸುತ್ತಿದ್ದ. ಯುವತಿಯರನ್ನು ಕಳಿಸಿಕೊಟ್ಟು ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದ. ಅಷ್ಟೇ ಅಲ್ಲದೆ, ಎಚ್ಐವಿ ಪೀಡಿತ ಮಹಿಳೆಯರನ್ನು ಕಳಿಸಿಕೊಟ್ಟು ಏಡ್ಸ್ ರೋಗ ಅಂಟಿಸುವ ಕೆಲಸವನ್ನೂ ಮಾಡುತ್ತಿದ್ದ ಎಂಬ ಬೆಚ್ಚುಬೀಳಿಸುವ ಕೃತ್ಯ ಬೆಳಕಿಗೆ ಬಂದಿದೆ.
ಮುನಿರತ್ನನ ಕರಾಳ ಕೃತ್ಯಕ್ಕೆ ಹಲವರು ಬಲಿಯಾಗಿದ್ದಾರೆ. ತನ್ನ ಎದುರಾಳಿ ಸ್ಥಳೀಯ ಕಾರ್ಪೋರೇಟರ್‌ಗಳನ್ನು ಸೈಲೆಂಟ್ ಆಗಿ ಮುಗಿಸಿದ್ದಾನೆ. ಅದರಲ್ಲಿ ಮಾಗಡಿ ಕ್ಷೇತ್ರದ ಎಂಎಲ್‌ಎ ಸಹ ಒಬ್ಬರಿದ್ದಾರೆ ಎಂಬುದನ್ನು ದೂರು ನೀಡಿರುವ ಮಹಿಳೆ ತಿಳಿಸಿದ್ದಾರೆ. ಹನಿಟ್ರ್ಯಾಪ್, ಏಡ್ಸ್ ಹರಡಿಸುವ ಕೃತ್ಯ, ಡ್ರಗ್ಸ್ ದಂಧೆಯ ಬಗ್ಗೆ ರಾಮನಗರದಲ್ಲಿ ದಾಖಲಾದ ಎಫ್ಐಆರ್‌ನಲ್ಲಿದೆ.
ಎಫ್‌ಐಆರ್‌ನಲ್ಲಿದೆ ಫುಲ್ ಡಿಟೈಲ್ಸ್
ನಾನು (ಸಂತ್ರಸ್ತೆ) ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುತ್ತೇನೆ. ಕೋವಿಡ್ ಸಂದರ್ಭದಲ್ಲಿ ನಮ್ಮ ಏರಿಯಾದ ಕಾರ್ಪೋರೇಟರ್ ನನಗೆ ಪರಿಚಯವಿದ್ದು, ಕೋವಿಡ್‌ನಿಂದ ಬಳಲುತ್ತಿರುವ ಜನರಿಗಾಗಿ ಮಾಸ್ಕ್ ವಿತರಣೆ ಮಾಡಲು 5,000 ಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಕಾರ್ಪೋರೇಟರ್‌ಗೆ ನೀಡಿದ್ದೆ. ಇದನ್ನು ತಿಳಿದ ಶಾಸಕ ಮುನಿರತ್ನಂ ನಾಯ್ದು ನನಗೆ ವಾಟ್ಸ್ ಆಪ್ ಮುಖಾಂತರ ಕರೆ ಮಾಡಿ, ನಾನು ಈ ಭಾಗದ ಶಾಸಕ ನಮ್ಮ ಕ್ಷೇತ್ರದಲ್ಲಿ, ನೀವು ಮಾಸ್ಕ್ ವಿತರಣೆ ಮಾಡುತ್ತೀರಿ, ನಿಮ್ಮ ಬಗ್ಗೆ ಕೇಳಿದ್ದೀನಿ. ನನ್ನನ್ನು ಭೇಟಿ ಮಾಡಿ ಎಂದು ತಿಳಿಸಿರುತ್ತಾರೆ. ಅದರಂತೆ ನಾನು ಮರುದಿನ ಸಂಜೆಯ ವರೆಗೆ ವಾಟ್ಸ್ ಆಪ್ ಮೂಲಕ ಕರೆ ಮಾಡಿ ಸಿಗುವುದಾಗಿ ತಿಳಿಸಿದಾಗ, ನಾನು ಕ್ಷೇತ್ರದ ಕೆಲಸದಲ್ಲಿ ತೊಡಗಿರುತ್ತೇನೆ. ಇದನ್ನು ಮುಗಿಸಿ 20 ನಿಮಿಷಗಳ ನಂತರ ರಾಮಯ್ಯ ಸಮಾಧಿ ಹತ್ತಿರವಿರುವ ಅವರ ಆಫೀಸ್ ಹತ್ತಿರ ಬರಲು ತಿಳಿಸಿದರು. ಅದರಂತೆ ನಾನು ಅವರ ಹೇಳಿದ ಸಮಯಕ್ಕೆ ಅವರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡೆನು. ಆ ಸಮಯದಲ್ಲಿ, ನನಗೆ ಪರಿಚಯವಿರುವ ಕಾರ್ಪೋರೇಟರ್ ಅವರ ಗಂಡ 3-4 ಬಾರಿ ಕರೆ ಮಾಡಿರುತ್ತಾರೆ. ನಾನು ಅದನ್ನು ಸೈಲೆಂಟ್ ಮಾಡಲು ಹೋದಾಗ ಇದು ಯಾರು ಎಂದು ಮುನಿರತ್ನಂ ಪ್ರಶ್ನಿಸುತ್ತಾರೆ. ಅದಕ್ಕೆ ನಾನು ಸ್ಥಳೀಯ ಕಾರ್ಪೋರೇಟರ್ ಗಂಡ ಎಂದು ಹೇಳಿದೆ.
ಅದಕ್ಕೆ ಮುನಿರತ್ನ ಮೇಡಮ್ ನಾನು ನಿಮಗೆ ಒಂದು ಸಹಾಯ ಕೇಳುತ್ತೇನೆ, ನೀವು ಸಹಾಯ ಮಾಡುತ್ತೀರೆಂದು ನಂಬಿರುತ್ತೇನೆ, ಈಗ ಬೇಡ ಮುಂದೊಂದು ದಿನ ಕೇಳುವುದಾಗಿ ತಿಳಿಸಿರುತ್ತಾರೆ. ಹಾಗೂ ನನ್ನನ್ನು ತುಂಬಾ ಹತ್ತಿರದಿಂದ ಸ್ನೇಹ ಬಳಸಿ ಗುಡ್ ಮಾರ್ನೀಂಗ್, ಗುಡ್ ನೈಟ್ ಹಾಗೂ ಪ್ರೇಮಗೀತೆ ಕಳುಹಿಸುತ್ತಿದ್ದ, ಹಾಗೂ ವಿಡಿಯೋ ಕಾಲ್ ಮುಖಾಂತರ ನನಗೆ ಕರೆ ಮಾಡಿ ವಿಚಾರಿಸುತ್ತ ನನ್ನ ಬಳಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದ.
ಒಂದು ದಿನಕ್ಕೆ 10ಕ್ಕೂ ಹೆಚ್ಚು ಬಾರಿ ವಿಡಿಯೋ ಕಾಲ್ ಮಾಡುತ್ತಿದ್ದ. ಆಗ ನಾನು ಆ ದಿನ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ವಿಡಿಯೋ ಕಾಲ್ ಮಾಡಿದ್ದ. ಸ್ನಾನದ ನಂತರ ನನ್ನ ಮೊಬೈಲ್ ಗಮನಿಸಿದಾಗ ಮುನಿರತ್ನ ಕಾಲ್ ಮಾಡಿರುವ ಬಗ್ಗೆ ತಿಳಿದು ಮತ್ತೆ ನಾನು ವಾಟ್ಸ್ ಆಫ್ ಕಾಲ್ ಮಾಡಿದಾಗ ಮುನಿರತ್ನ ಏಕೆ ಕಾಲ್ ರಿಸೀವ್ ಮಾಡಿಲ್ಲ ಎಂದಾಗ ಸರ್ ನಾನು ಸ್ನಾನಕ್ಕೆ ಹೋಗಿದ್ದೆ. ಈಗ ನನ್ನ ಮೊಬೈಲ್ ಗಮನಿಸಿದಾಗ ನೀವು ಕಾಲ್ ಮಾಡಿರುವ ಬಗ್ಗೆ, ತಿಳಿಯಿತು. ಅದಕ್ಕೆ ಈಗ ಕಾಲ್ ಮಾಡಿದೆ ಎಂದೆ. ಆಗ ಮುನಿರತ್ನ, ಈಗ ನೀನು ಎಲ್ಲಿರುವೆ ಎಂದು ಕೇಳಿದಾಗ, ನಾನು ರೂಮ್‌ನಲ್ಲಿ ಇದ್ದೀನಿ ಎಂದು ತಿಳಿಸಿರುತ್ತೇನೆ. ಆಗ ಮುನಿರತ್ನ ನೀನು ನನಗೆ ವಿಡಿಯೋ ಕಾಲ್ ಮಾಡಿ ನನಗೆ ನಗ್ನವಾಗಿ ದೇಹವನ್ನು ತೋರಿಸು ಎಂದು ಹೇಳುತ್ತಾರೆ. ಇದಕ್ಕೆ ನಾನು ಒಪ್ಪುವುದಿಲ್ಲ.
ನಂತರ ಮುನಿರತ್ನ ರವರು ನನ್ನನ್ನು ಗೋಡನ್ ಹತ್ತಿರ ಬಾ ಎಂದು ಕರೆಯುತ್ತಾನೆ. 3-4 ದಿನಗಳ ನಂತರ ಅದರಂತೆ ನಾನು ಆ ಗೋಡನ್‌ಗೆ ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಗನ್ ಮ್ಯಾನ್ ವಿಜಯಕುಮಾರ ಮತ್ತು ಮುನಿರತ್ನ ನನಗಾಗಿ ಕಾಯುತ್ತಿರುತ್ತಾರೆ. ನಾನು ದ್ವಿಚಿಕ್ರ ವಾಹನದಲ್ಲಿ ಅವರಿರುವ ಸ್ಥಳಕ್ಕೆ ಭೇಟಿ ನೀಡಿದಾಗ ಮುನಿರತ್ನ ಸ್ವತಃ ತನ್ನ 2ನೇ ಫ್ಲೋರ್‌ಗೆ ಕರೆದುಕೊಂಡು ಹೋಗುತ್ತಾರೆ. ನಿಮ್ಮನ್ನು ನೋಡಿದರೆ ನನ್ನ ಮೈ ಜುಂ ಎನಿಸುತ್ತದೆ ಎಂದು ಕಾಮುಕನಾಗಿ ವರ್ತಿಸುತ್ತಾರೆ. ನಿಮ್ಮನ್ನು ಒಂದು ಬಾರಿ ತಬ್ಬಿಕೊಳ್ಳಲಾ ಎಂದು ಕೇಳುತ್ತಾರೆ. ಅದಕ್ಕೆ ನಾನು ವಿರೋಧ ಮಾಡಿದಾಗ, ರಾಜಕೀಯಕ್ಕೆ ಬರಬೇಕಾದರೆ ಇವೆಲ್ಲ ಕಾಮನ್ ಎಂದು ಹೇಳುತ್ತಾ ತನ್ನ ಗನ್ ಮ್ಯಾನ್ ವಿಜಯಕುಮಾರನನ್ನು ಹೊರಗೆ ಹೋಗಲು ಸನ್ನೆಯ ಮುಖಾಂತರ ತಿಳಿಸುತ್ತಾನೆ. ಮತ್ತು ಅವನಿಗೆ ಯಾರನ್ನು ಮೇಲಕ್ಕೆ ಬಿಡಬೇಡ ಎಂದು ಹೇಳುತ್ತಾನೆ. ನಂತರ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ನೀನಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ತಿಳಿಸುತ್ತಾನೆ. ಆತನ ವರ್ತನೆಯಿಂದ ಗಾಬರಿಗೊಂಡು ಕಿರುಚುತ್ತೇನೆಂದು ಹೇಳುತ್ತೇನೆ, ಅದಕ್ಕೆ ಮುನಿರತ್ನ ನಾನು ಶಾಸಕ. ನನಗೆ ಅಪಾರ ಜನ ಸಮೂಹ ಬೆಂಬಲವಿದೆ. ನಿನ್ನ ವಿರುದ್ಧವೇ ಕಂಪ್ಲೇಂಟ್ ಮಾಡಿಸುತ್ತೇನೆ, ಸುಮ್ಮನಿದ್ದರೆ ಸರಿ ಎಂದು ನನ್ನ ಮೇಲೆ ಅತ್ಯಾಚಾರ ಮಾಡುತ್ತಾನೆ.
ಆನಂತರ 3ನೇ ದಿನ ರಾತ್ರಿ ಮುನಿರತ್ನ ಗನ್ ಮ್ಯಾನ್ ವಿಜಯ ಕುಮಾರ್ ಬಂದು ಬ್ಯಾಗ್ ಅಲ್ಲಿ ಡ್ರಗ್ಸ್ ಎಲ್ಲವನ್ನು ಕಿರಣ್ ಕೈಯಲ್ಲಿ ತಂದುಕೊಟ್ಟು ಅದನ್ನು ವಿದ್ಯಾ ಹಿರೇಮಠ ರೂಮ್ ಅಲ್ಲಿ ಇಡುವಂತೆ ಹೇಳುತ್ತಾರೆ, ಮತ್ತು ನಮ್ಮನ್ನೆಲ್ಲ ಅವಳೊಂದಿಗೆ ಜಗಳ ಮಾಡಿ ಅವಳನ್ನು ಅಲ್ಲಿಯೇ ಬಿಟ್ಟು ಹೊರಡಲು ಮುನಿರತ್ನ ಹೇಳುತ್ತಾರೆ, ನಾವು ಹೊರಡಲು ನಮಗೆ ಹೊಯ್ಸಳದಲ್ಲಿ ಎಸ್ಕಾರ್ಟ್ ಮಾಡುತ್ತಾರೆ ಪೊಲೀಸ್‌ನವರು. ಬೆಂಗಳೂರಿಗೆ ತೆರಳಿದ ನಂತರ ಲೋಕಿಯಿಂದ ಅನ್ನಪೂರ್ಣೇಶ್ವರಿ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ವಿದ್ಯಾ ಮೇಲೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆಂದು ಕಂಪ್ಲೆಂಟ್ ಕೊಡಿಸಿ ಅವಳನ್ನು ಅರೆಸ್ಟ್ ಮಾಡಿಸಿ ರೇಡ್ ಮಾಡಿಸಿ ನಂತರ ಕಂಪ್ಲೇಂಟ್ ವಾಪಸ್ ತಗೋತಾರೆ, ಈ ವಿಷಯವಾಗಿ ರಾಮನಗರ ಕಮಿಷನರ್ ಆಫೀಸ್‌ನಲ್ಲಿ ದೂರು ಸಹ ಸಲ್ಲಿಸಿರುತ್ತೇನೆ.
ಇದನ್ನು ತಿಳಿದ ಮುನಿರತ್ನ ರವರು ನನಗೆ ನೀನು ಇದನ್ನು ಮುಂದುವರಿಸಿದರೆ, ನಿನಗೂ ಮತ್ತು ಕುಟುಂಬದವರ ಜೀವ ಹಾಗೂ ಮಾನ ಮಾರ್ಯದೆ ಕಳೆಯುವುದಾಗಿ ಹಾಗೂ ನನ್ನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇನೆಂದು ಬೆದರಿಕೆ ಹಾಕಿದರು. ಅದರಿಂದ ನಾನು ನಿಮ್ಮ ನೊಟೀಸ್ ಗೆ ಹಾಜರು ಆಗಿರುವುದಿಲ್ಲ,. ಈಗ ಮುನಿರತ್ನ ಕಾನೂನಿನ ಬಂಧನದಲ್ಲಿರುವುದರಿಂದ ಮತ್ತೆ ಹೊರಗೆ ಬಂದು ನನಗೆ ಮತ್ತು ನನ್ನ ಕುಟುಂಬಕ್ಕೆ ತೊಂದರೆ ಮಾಡಬಹುದೆಂದು ತಿಳಿದು ನಿಮಗೆ ಈ ಮೂಲಕ ನನ್ನನ್ನು ಅನೇಕ ಬಾರಿ ಗೋಡೌನ್, ಕಾರ್ ಗಳಲ್ಲಿ, ಅತ್ಯಾಚಾರಗೈದು ಅವನ ದುಷ್ಕೃತ್ಯಗಳಿಗೆ, ಜೀವ ಬೆದರಿಕೆ ಹಾಕಲು ನನ್ನನ್ನು ಬಳಸಿಕೊಂಡಿರುತ್ತಾನೆ. ತಾವು ನನಗೆ ಮುನಿರತ್ನರಿಂದ ಆದ ಅನ್ಯಾಯಕ್ಕೆ ಕಾನೂನಿನ ಮೂಲಕ ನ್ಯಾಯ ಮತ್ತು ರಕ್ಷಣೆ ಕೊಡಬೇಕೆಂದು ಮಹಿಳೆ ಮನವಿ ಮಾಡಿದ್ದಾರೆ.
BJP MLA Munirathna alleged of honeytrap, Blackmail, MLA exposed in chargesheet by police. According to the FIR, Munirathna allegedly asked the victim to strip on a video call, but the latter refused to do it. A few days later, he called the woman to his godown in Muthyalanagar, where he allegedly made a sexual advance.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm