ಬ್ರೇಕಿಂಗ್ ನ್ಯೂಸ್
20-09-24 11:59 am HK News Desk ಕರ್ನಾಟಕ
ದಾವಣಗೆರೆ, ಸೆ 20: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ನಗರದಲ್ಲಿ ಗುರುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಹಲವಾರು ಮನೆಗಳು ಮತ್ತು ವಾಹನಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿ, ''ಗಣೇಶನ ಮೆರವಣಿಗೆಯು ನಗರದ ಅರಳಿಮರ ಸರ್ಕಲ್ ದಾಟಿ ಚಾಮರಾಜಪೇಟೆ ಸರ್ಕಲ್ ಬಳಿ ಹೋಗುವಾಗ ಕಲ್ಲು ತೂರಾಟ ನಡೆದಿದೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಗಣಪತಿ ನಿಮಜ್ಜನಕ್ಕೆ ಮೆರವಣಿಗೆಯು ಮುಂದೆ ತೆರಳಿದೆ'' ಎಂದು ತಿಳಿಸಿದರು.
''ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗುವುದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತಾಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು. ನಿನ್ನೆ ನಡೆದ ಪ್ರಚೋದನಾತ್ಮಕ ಭಾಷಣವೇ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದವರ ಮೇಲೆಯೂ ಕ್ರಮ ಜರುಗಿಸಲಾಗುವುದು. ಪ್ರಚೋದನಾತ್ಮಕ ಭಾಷಣಗಳ ಕುರಿತಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದು ಮಾಹಿತಿ ನೀಡಿದರು.
ಅಂಗಡಿ ಮುಗ್ಗಟ್ಟು ಬಂದ್:
ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದರಿಂದ ಬೇತೂರ್ ವೃತ್ತ, ಅರಳಿಮರ ವೃತ್ತ, ಎನ್ಆರ್ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪೋಲಿಸರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದ್ದಾರೆ. ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಇನ್ನೂ ಮೆರವಣಿಗೆ ಉದ್ದಕ್ಕೂ ಕ್ರಾಸ್ ಬಳಿ ನಿಂತು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿದೆ. ಸ್ವತಃ ಎಸ್ಪಿ ಉಮಾ ಪ್ರಶಾಂತ್ ಲಾಠಿ ಹಿಡಿದು ಜನರನ್ನೂ ಚದುರಿಸಿಲು ಮುಂದಾದರು. ಪರಿಸ್ಥಿತಿ ಈಗ ಶಾಂತವಾಗಿದೆ. ಕಲ್ಲು ತೂರಿದ ಕಿಡಿಗೇಡಿಗಳನ್ನೂ ಬಂಧಿಸಿ ಎಂದು ಹಿಂದೂ ಪರ ಕಾರ್ಯಕರ್ತರು ಪಟ್ಟು ಹಿಡಿದು ಕೂತಿದ್ದಾರೆ.
ಧ್ವಜ ವಿಚಾರದಲ್ಲಿ ಶುರುವಾದ ಗಲಾಟೆ ಐದು ದಿನ ಹಿಂದಷ್ಟೇ ಮೊಹರಂ ಹಬ್ಬದ ವೇಳೆ ಧ್ವಜ ಕಟ್ಟುವ ವಿಚಾರದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂಬಂಧ ಹಿಂದೂ ಪರ ಸಂಘಟನೆ ಮುಖಂಡ ಸತೀಶ್ ಪೂಜಾರಿ ಪ್ರಚೋದನೆಕಾರಿ ಹೇಳಿಕೆ ನೀಡಿದ್ದರು. ಈ ವೇಳೆ ಬೇತೂರು ರಸ್ತೆಗೆ ಬರುವಂತೆ ಮುಸ್ಲಿಂ ಸಮುದಾಯದವರು ಸವಾಲು ಹಾಕಿದ್ದರು. ಅದರಂತೆ ಗುರುವಾರ ಸಂಜೆ ಸತೀಶ್ ಪೂಜಾರಿ ಬೇತೂರು ರಸ್ತೆಗೆ ಬಂದಿದ್ದಾರೆ.
ಈ ವಿಷಯ ತಿಳಿದು ಮುಸ್ಲಿಂ ಸಮುದಾಯದ ಸಾವಿರಾರು ಜನ ಬೇತೂರು ರಸ್ತೆಯಲ್ಲಿ ಸೇರಿದ್ದಾರೆ. ಇದೆ ವೇಳೆ ಹಿಂದೂ ಸಮುದಾಯದವರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಇದೇ ಸಮಯಕ್ಕೆ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಿಂದ ಗಣೇಶೋತ್ಸವ ಮೆರವಣಿಗೆ ಬಂದಿದೆ.
ಧ್ವಜ ಕಟ್ಟುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಬಂದೋಬಸ್ತ್ ನಡುವೆಯೂ ಕೆಲ ಕಿಡಿಗೇಡಿಗಳು ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲುತೂರಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಮೆರವಣಿಗೆ ಮುಂದೆ ಸಾಗಿದ್ದು, ಅರಳಿ ಮರ ತಲುಪುತ್ತಿದ್ದಂತೆ ಮತ್ತೊಮ್ಮೆ ಕಲ್ಲುತೂರಾಟ ನಡೆದಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ.
Davanagere experienced heightened tensions after stones were thrown at the immersion procession of a Ganesh idol installed at Venka Bhovi Colony on Thursday. The situation escalated rapidly as news of the attack spread. Four police personnel, including one police inspector and a sub-inspector, sustained injuries, while several window panes of houses and vehicles were damaged in the ensuing skirmishes.
04-10-24 09:18 pm
HK News Desk
ಬೆಂಗಳೂರು ; 3 ಪ್ರತಿಷ್ಠಿತ ಕಾಲೇಜುಗಳಿಗೆ ಹುಸಿ ಬಾಂ...
04-10-24 08:25 pm
Dinesh Gundu Rao, Savarkar: ಸಾವರ್ಕರ್ ಮಾಂಸಾಹಾರ...
04-10-24 12:38 pm
Vijay Tata, HD Kumaraswamy, Ramesh Gowda: ಚನ್...
04-10-24 12:02 pm
Lawyer Jagadish, Big Boss Kannada: ಬಿಗ್ ಬಾಸ್...
03-10-24 08:37 pm
05-10-24 06:40 pm
HK News Desk
Tirupati laddu row, CBI: ತಿರುಪತಿ ಲಡ್ಡಿನಲ್ಲಿ ಕ...
04-10-24 07:10 pm
Isha foundation raid, Court: ಇಶಾ ಫೌಂಡೇಶನ್ ಆಶ್...
02-10-24 02:10 pm
Israel-Iran war: ಇಸ್ರೇಲ್ ಮೇಲೆ ಮುಗಿಬಿದ್ದ ಇರಾನ್...
02-10-24 11:43 am
Fire in Thailand: ಥಾಯ್ಲೆಂಡ್ ; ಸ್ಕೂಲ್ ಬಸ್ ಟಯರ...
01-10-24 07:36 pm
05-10-24 10:54 pm
Mangalore Correspondent
Mangalore crime, Arun Ullal: ಬೇರೆಯವರ ಹಾಲ್ ಗಳಲ...
05-10-24 10:06 pm
Mangalore Pradeep Acharya, powerlifting: ಕಾಮನ...
05-10-24 07:11 pm
Mangalore News, Israel Travels Bus: ಇಸ್ರೇಲ್ ಟ...
05-10-24 04:42 pm
Nalin Kateel, Mangalore: ನಮ್ಮನ್ನು 40 ಪರ್ಸೆಂಟ್...
05-10-24 03:54 pm
05-10-24 08:26 pm
Mangalore Correspondent
ಬೆಂಗಳೂರು ಏರ್ಪೋರ್ಟಲ್ಲಿ ಸಿಕ್ಕಿಬಿದ್ದಿದ್ದೇನೆ, ದೊಡ...
03-10-24 10:49 pm
BMTC Conductor Stabbed, Bangalore crime; ಫುಟ್...
02-10-24 05:44 pm
CCB Mangalore Police, Drugs: ತಲಪಾಡಿ ಗಡಿಭಾಗದಲ್...
02-10-24 04:45 pm
Vardhman Group, Digital Arrest, Fraud; ವರ್ಧಮಾ...
02-10-24 04:03 pm