ಬ್ರೇಕಿಂಗ್ ನ್ಯೂಸ್
25-09-24 10:48 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.25: ತಾನು ಕಾಂಗ್ರೆಸ್ ನಾಯಕಿ, ಡಿಕೆಶಿ- ಸಿದ್ದರಾಮಯ್ಯ ಖಾಸಾ ದೋಸ್ತ್ ಇದ್ದಾರೆಂದು ಹಲವರಿಗೆ ಉದ್ಯೋಗ ದೊರಕಿಸುವ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದ ಬೆಂಗಳೂರಿನ ಸಂಧ್ಯಾ ಅಲಿಯಾಸ್ ಪವಿತ್ರಾ ನಾಗರಾಜ್ ವಿರುದ್ಧ ಈಗ ಶಿವಾಜಿ ನಗರ ಠಾಣೆಯಲ್ಲಿ ಹನಿಟ್ರಾಪ್ ಕೇಸು ದಾಖಲಾಗಿದೆ. ಎಸ್ಡಿಪಿಐ ಮುಖಂಡ ಬಿ.ಆರ್. ಭಾಸ್ಕರ ಪ್ರಸಾದ್, ತನ್ನ ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾರೆಂದು ಪವಿತ್ರಾ ನಾಗರಾಜ್ ಮತ್ತು ಪವಿತ್ರಾ ಎಂಬಿಬ್ಬರು ಮಹಿಳೆಯರ ವಿರುದ್ಧ ದೂರು ನೀಡಿದ್ದಾರೆ.
ಭಾಸ್ಕರ ಪ್ರಸಾದ್ ನೀಡಿರುವ ದೂರಿನ ಪ್ರಕಾರ, ಹೋರಾಟ- ಚಳವಳಿಗಳ ಸಂದರ್ಭದಲ್ಲಿ ಪರಿಚಯವಾಗಿದ್ದ ಪವಿತ್ರಾ ನಾಗರಾಜ್ ಜೊತೆಗೆ ಎರಡು ವರ್ಷಗಳಿಂದ ಸಂಪರ್ಕ ಹೊಂದಿದ್ದೇನೆ. 2024ರ ಆಗಸ್ಟ್ 28ರಿಂದ ತನ್ನೊಂದಿಗೆ ವಾಟ್ಸಪ್ ಸಂಪರ್ಕ ಮಾಡಿ, ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದು, ಬಳಿಕ ಮಾನಹರಣ ಮಾಡುವ ಉದ್ದೇಶದಿಂದ ಬೆದರಿಕೆ ಹಾಕಿದ್ದಾಳೆ. ಆನಂತರ ತನ್ನಲ್ಲಿ ಬಂದು ಹತ್ತು ಲಕ್ಷ ಹಣಕ್ಕಾಗಿ ಪೀಡಿಸಿದ್ದಾಳೆ. ಇದೇ ಸೆ.23ರಂದು ಸಂಜೆ 3.30 ಗಂಟೆಗೆ ಶಿವಾಜಿನಗರದ ಚಿನ್ನಸ್ವಾಮಿ ಮೊದಲಿಯಾರ್ ರಸ್ತೆಯಲ್ಲಿರುವ ಕನ್ನಡ ಒನ್ ನ್ಯೂಸ್ ಚಾನೆಲ್ ಬಳಿ ಸ್ನೇಹಿತರಾದ ಪ್ರೊ.ಹರಿರಾಮ್, ರಮೇಶ್, ಪಿ.ಮೂರ್ತಿ, ಮಂಜುಳಾ ಮಹೇಶ್ ಎಂಬವರು ಬಂದಿದ್ದಾಗ ತನ್ನ ಬಗ್ಗೆ ಅಪಪ್ರಚಾರ ಮಾಡಿ, ಅವಾಚ್ಯವಾಗಿ ಮಾತನಾಡಿದ್ದಾಳೆ. ಹತ್ತು ಲಕ್ಷ ಹಣ ಕೊಡದೇ ಇದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಟ್ಟು ಮಾನಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಭಾಸ್ಕರ ಪ್ರಸಾದ್ ಶಿವಾಜಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಭಾಸ್ಕರ ಪ್ರಸಾದ್ ಎಸ್ಡಿಪಿಐ ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿಯಾಗಿದ್ದು, ಮುಂಚೂಣಿ ಹೋರಾಟಗಳಲ್ಲಿ ಭಾಷಣಕಾರನಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷದಿಂದ ಪುಲಕೇಶಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪವಿತ್ರಾ ನಾಗರಾಜ್ ವಿರುದ್ಧ ಇತ್ತೀಚೆಗೆ ಜ್ಞಾನ ಭಾರತಿ ಠಾಣೆಯಲ್ಲಿ ವೀಣಾ ಎಂಬ ಮಹಿಳೆ ದೂರು ನೀಡಿ, ವಂಚನೆ ಕೇಸು ದಾಖಲಿಸಿದ್ದರು. ಕಂಪನಿಗಳಲ್ಲಿ ಉದ್ಯೋಗ ತೆಗೆಸಿಕೊಡುತ್ತೇನೆಂದು ಲಕ್ಷಾಂತರ ರೂ. ಹಣ ಪಡೆದು ಹಲವರಿಗೆ ವಂಚಿಸಿರುವ ಬಗ್ಗೆ ಆರೋಪಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕಿಯೆಂದು ಹೇಳಿಕೊಂಡು ಮೋಸ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದ್ದರು. ಇದೀಗ ಅದೇ ಮಹಿಳೆಯ ವಿರುದ್ಧ ಹನಿಟ್ರ್ಯಾಪ್ ದೂರು ಕೇಳಿಬಂದಿದೆ.
Congress leader Sandhya Pavitra Nagaraj booked in honeytrap case against SDPI Bhaskar Prasad. Sandhya Pavitra also demanded 10 lakhs blackmailing Bhaskar of upaloading the video on social media.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm