ಬ್ರೇಕಿಂಗ್ ನ್ಯೂಸ್
27-09-24 06:19 pm HK News Desk ಕರ್ನಾಟಕ
ಹುಬ್ಬಳ್ಳಿ , ಸೆ 27: ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ಪೋಲಿಸ್ ರಿಗೆ ಎಫ್‌ಐಆರ್ ದಾಖಲಿಸುವಂತೆ ಹೇಳಿದ್ದರೂ ಸಹ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದಿದ್ದೇ ಆದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ ಅವರು, ಈ ಹಿಂದೆ ಬಹಳಷ್ಟು ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ ನಿಮಗೆ ಮಾನ ಮರ್ಯಾದೆ ಇದೇಯಾ ಎಂದು ವಿರೋಧ ಪಕ್ಷದವರನ್ನು ಟೀಕಿಸಿದ್ದಾರೆ. ಅದನ್ನೇ ನಾವು ಈಗ ಹೇಳುತ್ತಿದ್ದೇವೆ. ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದಲ್ಲಿ ನ್ಯಾಯಾಲಯದ ತೀರ್ಪಿಗೆ ತಲೆ ಬಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಮುಂದೆ ಅವರು ಸತ್ಯ ಹರಿಶ್ಚಂದ್ರ ಎಂದು ಸಾಬೀತಾದ ಮೇಲೆ ಪುನಃ ಸಿಎಂ ಆಗಲಿ. ನಮ್ಮದೇನೂ ಅಭ್ಯಂತರವಿಲ್ಲ ಎಂದರು.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತಿದೆ ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಧಾರ. ರಾಜ್ಯಪಾಲರು ಕೇಳಿರುವ ಮಾಹಿತಿ, ದಾಖಲೆ ನೀಡಲು ಈ ಸರ್ಕಾರಕ್ಕೆ ಸಮಸ್ಯೆ ಏನಿದೆ? ಈ ಸರ್ಕಾರದಲ್ಲಿ ಸಾಕಷ್ಟು ಲೋಪದೋಷಗಳು ಆಗಿವೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ದಾಖಲೆಗಳು ಹೊರಗೆ ಬಂದಿದ್ದರಿಂದಲೇ ಮುಡಾ ಹಗರಣ, ವಾಲ್ಮೀಕಿ ನಿಗಮದ ಅಕ್ರಮ ಹೊರಗೆ ಬಂದಿದ್ದು. ಇಂಥವುದನ್ಸಂಸ್ಥೆಗಳ ಮುಚ್ಚಿಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಬಾಗಿಲ ಮೂಲಕ ಪ್ರಯತ್ನ ಮಾಡುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದರು.
ರಾಜ್ಯದಲ್ಲಿ ಹೊಸ ಪ್ರಕರಣಗಳಲ್ಲಿ ಸಿಬಿಐ ತನಿಖೆ ಕೈಗೊಳ್ಳಬೇಕಾದರೆ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕೆಂಬ ಷರತ್ತು ವಿಧಿಸಿರುವುದು ಸರಿಯಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರ ಅವರಿಗೆ ಸದನದಲ್ಲಿ ಕ್ಲೀನ್ ಚಿಟ್ ನೀಡಿದ್ದರು. ಇಡಿ, ಸಿಬಿಐ ತನಿಖೆ ನಾಗೇಂದ್ರ ಅವರು ತಪ್ಪಿತಸ್ಥರು ಎಂಬುದು ಬಹಿರಂಗಗೊಂಡಿದೆ. ಇದರಿಂದ ನಾಗೇಂದ್ರ ಬಳಿಕ ತಮ್ಮದೇ ಪಾಳಿ ಎಂದು ಸಿದ್ದರಾಮಯ್ಯ ಅವರಿಗೆ ಭಯ ಶುರುವಾಗಿದೆ. ಹಾಗಾಗಿ ಕೇಂದ್ರೀಯ ತನಿಖಾ ಸಂಸ್ಥೆಗಳ ವಿರುದ್ಧ ನಿರ್ಣಯ ಕೈಗೊಂಡಿದೆ ಎಂದರು.
Bjp MLA Mahesh Tenginakai slams CM Siddaramaiah, says he must resign after FIR. If he's proved innocent in muda case then let him again be the CM of Karnataka he added.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm