ಬ್ರೇಕಿಂಗ್ ನ್ಯೂಸ್
03-10-24 08:37 pm Bangalore Correspondent ಕರ್ನಾಟಕ
ಬೆಂಗಳೂರು, ಅ.3: ಬಿಗ್ ಬಾಸ್ ಶೋನಲ್ಲಿ ಎರ್ರಾಬಿರ್ರಿ ವರ್ತಿಸುತ್ತಿರುವ ವಕೀಲ ಜಗದೀಶ್ ಹಣೆ ಬರಹವನ್ನು ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರಗಿ ತೆರದಿಟ್ಟಿದ್ದು, ನಕಲಿ ಪಿಯುಸಿ ಸರ್ಟಿಫಿಕೇಟ್ ಅಡಿ ಪದವಿ, ಎಲ್ಎಲ್ ಬಿ ಪಡೆದಿದ್ದಾರೆಂದು ವಕೀಲಿಕೆ ಪರವಾನಗಿಯನ್ನೇ ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ ಎಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಜಗದೀಶ್ ಅವರು ನಕಲಿ ಪಿಯು ಮಾರ್ಕ್ಸ್ ಕಾರ್ಡ್ ಕೊಟ್ಟು ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಮಾಡಿ ದೆಹಲಿಯ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದರು. ಇದೀಗ ನಕಲಿ ಮಾರ್ಕ್ಸ್ ಕಾರ್ಡ್ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲಿಕೆ ಸನ್ನದು (ಅಡ್ವೋಕೇಟ್ ಲೈಸೆನ್ಸ್) ಅನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿದೆ.


ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ, ಅದನ್ನು ಪದವಿ ಕಾಲೇಜಿಗೆ ಕೊಟ್ಟು ಡಿಗ್ರಿ ಮಾಡಿದ್ದಾರೆ. ನಂತರ, ಪದವಿ ಮೇಲೆ ಎಲ್‌ಎಲ್‌ಬಿ ಮಾಡಿದ್ದಾರೆ. ಬೆಂಗಳೂರಿನ ಬದಲು ದೆಹಲಿಗೆ ಹೋಗಿ ಅಲ್ಲಿನ ಬಾರ್ ಕೌನ್ಸಿಲ್‌ನಲ್ಲಿ ವಕೀಲಿಕೆ ಸನ್ನದು ಪಡೆದಿದ್ದಾರೆ. ಇವರದ್ದು ನಕಲಿ ಸರ್ಟಿಫಿಕೇಟ್ ಎಂದು ಲೈಸೆನ್ಸ್ ರದ್ದತಿಗೆ ಕೋರಿ ಹಿಮಾಂಶು ಭಾಟಿ ಎನ್ನುವವರು ಬಾರ್ ಕೌನ್ಸಿಲ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಸಹಿತ ಪ್ರಶಾಂತ್ ಸಂಬರಗಿ ಮಾಹಿತಿ ಹಂಚಿಕೊಂಡಿದ್ದಾರೆ.
ತಾನು ಲಾಯರ್ ಆಗಿದ್ದು ಶೋನಿಂದ ಹೊರ ಹೋದ ಕೂಡಲೇ ಬಿಗ್ ಬಾಸ್ ಶೋ ನಿಲ್ಲಿಸುತ್ತೇನೆಂದು ಜಗದೀಶ್ ಇತರ ಸ್ಪರ್ಧಿಗಳ ಹೇಳುತ್ತಿರುವುದನ್ನು ಬಿಗ್ ಬಾಸ್ ಶೋ ಪ್ರೊಮೋದಲ್ಲಿ ಕೊಡಲಾಗಿತ್ತು.
ಯಾರು ತಿಳಿಯರು ಲಾಯರ್ ಜಗದೀಶ್ ಪರಾಕ್ರಮ!
— Colors Kannada (@ColorsKannada) October 3, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/84xuWaEJVq
Lawyer Jagadish threatens Big boss kannada show, bar counsil suspends license, Prashanth Sambargi posts fake PU markscard on his social media. Lawyer Jagadish threatend big boss show of exposing their secrets to the state of Karnataka.
20-09-26 03:32 pm
HK News Staffer
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 02:16 pm
HK News Staffer
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm