ಬ್ರೇಕಿಂಗ್ ನ್ಯೂಸ್
04-10-24 09:18 pm HK News Desk ಕರ್ನಾಟಕ
ಬಳ್ಳಾರಿ, ಅ.04: ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಮಾನ, ಮರ್ಯಾದೆ ಇಲ್ಲದ ರಾಜಕಾರಣಿ. ನೀಚ ರಾಜಕಾರಣದ ಪರಮಾವಧಿಯನ್ನು ಸಿದ್ದರಾಮಯ್ಯ ಮೀರಿದ್ದಾರೆ. ಬಳ್ಳಾರಿ ಜನರ ಶಾಪದಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ, ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
"ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರು ಮಾಡಿದ ಒಂದು ಕರೆಗೆ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂದು ನನ್ನ ಬಗ್ಗೆ ಏನೆಲ್ಲಾ ಕೆಟ್ಟದನ್ನು ಮಾತಾನಾಡಿದರು. ಈಗ ಅವರು ಅನುಭವಿಸುತ್ತಿದ್ದಾರೆ, ಕರ್ಮ ಎನ್ನುವುದು ಯಾರನ್ನೂ ಬಿಡುವುದಿಲ್ಲ" ಎಂದು ಜನಾರ್ಧನ ರೆಡ್ಡಿ, ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಗಣಿ ಉದ್ಯಮಿಯೂ ಆಗಿರುವ ಜನಾರ್ಧನ ರೆಡ್ಡಿ, ಬಹುಕೋಟಿ ಹಗರಣವೊಂದರಲ್ಲಿ ಸೆಪ್ಟಂಬರ್ 2011ರಂದು ಬಂಧನಕ್ಕೆ ಒಳಗಾಗಿದ್ದರು. ಜೊತೆಗೆ, ಬಳ್ಳಾರಿ, ಅನಂತಪುರ, ಕರ್ನೂಲ್ ಜಿಲ್ಲೆ ಪ್ರವೇಶಿಸದಂತೇ ನಿರ್ಬಂಧವನ್ನೂ ಹೇರಲಾಗಿತ್ತು. ಈಗ, ಸರ್ವೋಚ್ಚ ನ್ಯಾಯಾಲಯ ಈ ನಿರ್ಬಂಧವನ್ನು ತೆರವುಗೊಳಿಸಿದೆ
ಬಳ್ಳಾರಿಗೆ ನಿರ್ಬಂಧ ಹೇರಿದ್ದರೂ, ಅಲ್ಲಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ, ಅಕ್ಕಿ ಉತ್ಪಾದನೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರಮುಖ ನಗರ ಗಂಗಾವತಿ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಹೊಸ ಪಾರ್ಟಿಯನ್ನು (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಕಟ್ಟಿ, ವಿಜೇತರಾಗಿದ್ದರು.
ಸಿದ್ದರಾಮಯ್ಯ ಊರು ಬಿಡುವಂತ ಸಮಯ ಸದ್ಯದಲ್ಲೇ ಬರಲಿದೆ ;
ಹೆಲಿಕಾಪ್ಟರ್ ಖರೀದಿಸಿದ್ದಕ್ಕೆ ಸಿದ್ದರಾಮಯ್ಯ ನನ್ನನ್ನು ಖಳನಾಯಕನಂತೆ ಬಿಂಬಿಸಿದ್ದರು. ಈಗ ಅವರ ಪರಿಸ್ಥಿತಿ ಏನಾಗಿದೆ, ಕರ್ಮ ಎನ್ನುವುದು ಯಾರನ್ನೂ ಬಿಡುವುದಿಲ್ಲ ಎನ್ನುವುದಕ್ಕೆ ಇದೇ ಉದಾಹರಣೆ. ನನ್ನ ಊರಿಗೆ ನಾನು ಬಂದಿದ್ದೇನೆ, ಅವರ ಊರನ್ನು ಅವರು ಬಿಡುವಂತಹ ಸಮಯ ಸದ್ಯದಲ್ಲೇ ಬರಲಿದೆ ಎಂದು ಜನಾರ್ಧನ ರೆಡ್ಡಿ, ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
Mining baron and BJP MLA Gali Janardhan Reddy Thursday entered his hometown of Ballari after 14 years, holding a roadshow to mark his return. The Supreme Court had barred Reddy from entering Ballari after his arrest in 2011 over illegal export of iron ore, estimated to be worth more than Rs 12,000 crore. The court had recently lifted the ban.
09-11-24 02:34 pm
HK News Desk
Waqf dispute, BBMP: ವಕ್ಫ್ ವಿವಾದ ನಡುವಲ್ಲೇ ಮತ್ತ...
09-11-24 01:19 pm
ಸೋಮಶೇಖರ್ ಪಾರ್ಟಿ ಯಾವುದಪ್ಪ..? ಅವ್ರು ತ್ರಿಶಂಕು ಸ್...
08-11-24 09:43 pm
HC Mahadevappa: ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ...
08-11-24 01:58 pm
ಜಂಟಿ ಸದನ ಸಮಿತಿ ಭೇಟಿ ಬೆನ್ನಲ್ಲೇ ರಾಜ್ಯ ಸರ್ಕಾರ ಎಲ...
07-11-24 06:49 pm
09-11-24 02:19 pm
HK News Desk
ಲಾರೆನ್ಸ್ ಬಿಷ್ಣೋಯಿ, ದಾವೂದ್ ಇಬ್ರಾಹಿಂ ಚಿತ್ರವುಳ್ಳ...
08-11-24 10:49 pm
ಭಾರತದ ಕಮಲಕ್ಕ ಬೌಲ್ಡ್ ; ಅಮೆರಿಕಕ್ಕೆ ಮತ್ತೆ ಡೋನಾಲ್...
06-11-24 03:35 pm
ತಮಿಳುನಾಡಿನಲ್ಲಿ ಇಡೀ ಗ್ರಾಮವನ್ನೇ ತನ್ನದೆಂದ ವಕ್ಫ್...
05-11-24 03:30 pm
Edneer Math Swamiji, Attack, Kasaragod: ಎಡನೀರ...
05-11-24 11:41 am
09-11-24 06:52 pm
Mangalore Correspondent
ಚಾರ್ಮಾಡಿ ಘಾಟ್ ಹೆದ್ದಾರಿ ದ್ವಿಪಥಕ್ಕಾಗಿ ಕೇಂದ್ರ ಸ...
09-11-24 05:10 pm
Mangalore Journalist Srinivas Nayak: ಶ್ರೀನಿವಾ...
09-11-24 01:52 pm
Brijesh Chowta, Mangalore: ದಕ್ಷಿಣ ಕನ್ನಡದಲ್ಲಿ...
08-11-24 09:46 pm
Mangalore Ullal News: ಗ್ರಂಥಾಲಯಕ್ಕಾಗಿ ಹಳೆಯ ಕಟ್...
08-11-24 08:19 pm
09-11-24 05:14 pm
Mangaluru Correspondent
Uppinangady, Murder, Crime Mangalore: ಉಪ್ಪಿನಂ...
08-11-24 10:46 pm
Mangalore crime, Pocso, Rape: ಉಳಾಯಿಬೆಟ್ಟು ಟೈಲ...
08-11-24 04:25 pm
Mangalore cyber fraud, Mangalore: ಮುಂಬೈ ಪೊಲೀಸ...
08-11-24 02:00 pm
Hassan Murder, Police constable, crime: ಹಾಸನ...
06-11-24 09:11 pm