ಬ್ರೇಕಿಂಗ್ ನ್ಯೂಸ್
24-10-24 12:12 pm Bangalore Correspondent ಕರ್ನಾಟಕ
ಬೆಂಗಳೂರು, ಅ 24: ಕಟ್ಟಡವೊಂದರ ಲಿಫ್ಟ್ಗೆ ಅಳವಡಿಸಲು ತೆರೆದಿದ್ದ ಗುಂಡಿಗೆ ಬಿದ್ದು 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲೀಕ ಹಾಗೂ ಉಸ್ತುವಾರಿ ವಹಿಸಿಕೊಂಡಿದ್ದ ಸುನಿಲ್ ಎಂಬಾತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕನ್ನಮಂಗಲ ಗ್ರಾಮ ಪಂಚಾಯತ್ ಮುಂಭಾಗದ ಮಿಲ್ಕ್ ಡೈರಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು 5 ಅಡಿ ಆಳ, ಅಗಲದ ಗುಂಡಿ ತೋಡಲಾಗಿತ್ತು. ಗುಂಡಿ ಸುತ್ತಮುತ್ತಲು ಸುರಕ್ಷಿತ ಕ್ರಮ ಅನುಸರಿಸುವಲ್ಲಿ ಮಾಲೀಕರು ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪ ಕೇಳಿಬಂದಿದೆ.
ಬುಧವಾರ ಬೆಳಗ್ಗೆ ಬಾಲಕ ಸ್ನೇಹಿತರ ಜೊತೆ ಆಟವಾಡುವಾಗ ಆಚಾನಕ್ಕಾಗಿ ಗುಂಡಿಗೆ ಬಿದ್ದಿದ್ದ. ಐದು ಅಡಿ ಆಳದ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿದ್ದರಿಂದ ನೀರಿನಲ್ಲಿ ಬಾಲಕ ಮುಳುಗಿದ್ದ. ಅಲ್ಲೇ ಇದ್ದ ಸ್ನೇಹಿತರು ತಕ್ಷಣವೇ ನೀಡಿದ ಮಾಹಿತಿ ಮೇರೆಗೆ ಸ್ಥಳೀಯರು, ಬಾಲಕನನ್ನ ರಕ್ಷಿಸಿ ಆಸ್ಪತ್ರೆ ಸೇರಿಸಿದ್ದರು. ಆದರೆ, ಬಾಲಕ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ
ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಮಾಲೀಕ ಹಾಗೂ ಕಟ್ಟಡ ಕಾಮಗಾರಿ ವಹಿಸಿಕೊಂಡಿದ್ದ ಸುನಿಲ್ ಎಂಬುವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಬರುವಂತೆ ನೊಟೀಸ್ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
A seven-year-old boy drowned in a water-filled lift pit of an under-construction building at Kannamangala in Bengaluru on Wednesday.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
26-01-26 05:05 pm
HK News Desk
ರೌಡಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ; ಪೊಲೀಸರ ಕೈಗೆ...
24-01-26 11:23 pm
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
26-01-26 03:03 pm
HK News Desk
ಅಮಾನ್ಯ ನೋಟಿನ 400 ಕೋಟಿ ದರೋಡೆ ಪ್ರಕರಣ ; ಗುಜರಾತ್...
25-01-26 10:11 pm
Indias Biggest Robbery in Belagavi: ಇಡೀ ದೇಶದಲ...
25-01-26 09:48 am
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm