ಬ್ರೇಕಿಂಗ್ ನ್ಯೂಸ್
06-11-24 06:31 pm HK News Desk ಕರ್ನಾಟಕ
ಹುಬ್ಬಳ್ಳಿ, ನ.6: ದೇಶದಲ್ಲಿ ದೇವಸ್ಥಾನ, ರೈತರ ಜಮೀನು ಹೋಗತಿದೆ. ವಕ್ಫ್ ಬೋರ್ಡ್ ವೈರಸ್ ಹರಡ್ತಾ ಇದೆ. ಸರ್ಕಾರಿ ರಸ್ತೆ, ಆಫೀಸ್ ಗಳು ಹೋಗತಿವೆ. ವಕ್ಫ್ ಬೋರ್ಡ್ ಗೂಳಿ ತರಹ ನುಗ್ಗುತ್ತಿದೆ. ಇದಕ್ಕೆಲ್ಲ ಜಮೀರ್ ಅಹ್ಮದ್ ಕಾರಣ. ಆತನನ್ನು ಗಡೀಪಾರು ಮಾಡಬಾರದು, ಗಲ್ಲಿಗೇರಿಸಬೇಕು. ಹೀಗೆಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಸಚಿವ ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದ್ದಾರೆ.
ದೇಶಕ್ಕೆ ದೊಡ್ಡ ಗಂಡಾಂತರ ಬಂದಿದೆ. ಇಸ್ಲಾಂ ಜನಸಂಖ್ಯೆ, ಭೂಮಿ ಜಾಸ್ತಿ ಮಾಡಿದ್ರೆ, ಇಸ್ಲಾಂ ದೇಶ ಮಾಡಿ ಬಿಡಬಹುದು. ಇಲ್ಲಿವರೆಗೂ ಇಸ್ಲಾಂ ಮಾಡಿದ್ದು ಇದನ್ನೇ. ಇದೀಗ ನಮ್ಮ ದೇಶದಲ್ಲೂ ಇದೇ ಆಗತಿದೆ. ಇವತ್ತು ಕೇಂದ್ರ ಸರ್ಕಾರ ವಕ್ಫ್ ಕಾನೂನು ತಿದ್ದುಪಡಿ ಮಾಡೋದಾಗಿ ಹೇಳಿದೆ. ತಿದ್ದುಪಡಿ ಅಂದ ತಕ್ಷಣ ಇಡೀ ದೇಶದಲ್ಲಿ ಮುಸ್ಲಿಮರು ಗಲಾಟೆ ಮಾಡಿದ್ರು. ಇಲ್ಲಿ ನಮ್ಮ ದೇಶದ ಅಸ್ತಿತ್ವದ ಪ್ರಶ್ನೆ ಇದೆ. 2006 ರಲ್ಲಿ ಒಂದು ಲಕ್ಷ 20 ಎಕರೆ ಭೂಮಿ ವಕ್ಫ್ ನಲ್ಲಿ ಇತ್ತು. ಇವತ್ತು 9 ಲಕ್ಷ 40 ಸಾವಿರ ಎಕರೆ ಭೂಮಿಯಾಗಿದೆ. ನಾಲ್ಕು ಮುಸ್ಲಿಂ ರಾಷ್ಟ್ರಗಳು ಸೇರಿದರೂ ಇಷ್ಟು ಜಮೀನು ಇಲ್ಲ. ಆದ್ರೆ ವಕ್ಪ್ ಬೋರ್ಡ್ ನಮ್ಮ ದೇಶದಲ್ಲಿ ಇಷ್ಟು ಜಮೀನು ಅತಿಕ್ರಮಣ ಮಾಡಿಕೊಂಡಿದೆ.
2047 ರಲ್ಲಿ ಈ ದೇಶವನ್ನ ಇಸ್ಲಾಂ ದೇಶ ಮಾಡೋದಾಗಿ ಸಂಚು ಹೂಡಿದ್ದಾರೆ. ಇನ್ನು ಹದಿನೈದು ಲಕ್ಷ ಎಕರೆ ಇದೇ ರೀತಿ ಅತಿಕ್ರಮಣ ಮಾಡಿದ್ರೆ ಇಸ್ಲಾಂ ರಾಷ್ಟ ಆಗತ್ತೆ. ಈ ಅಪಾಯ ಕಂಡು ಹಿಡಿದು ಮೋದಿ ಕ್ರಮ ಕೈಗೊಳ್ಳತಿದಾರೆ. ಹಿಂದೂ ಧರ್ಮದ ರಕ್ಷಣೆಗಾಗಿ ಅವರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ವಕ್ಪ್ ಹೆಸರಲ್ಲಿ ಅಪಾಯಕಾರಿ ಬೆಳವಣಿಗೆ 1974 ರಿಂದ ಆರಂಭವಾಗಿದೆ. ಸರ್ಕಾರದ ಗೆಜೆಟ್ ಆಗಿದೆ ಅಂತಾರೆ, ಇದಕ್ಕೆ ಯಾವ ಆಧಾರವೂ ಇಲ್ಲ. ಇದಕ್ಕೆಲ್ಲ ಕಾರಣ ಅಧಿಕಾರ ದುಡ್ಡಿನ ದಾಹ. ಕಾಂಗ್ರೆಸ್ ಮಾಡಿರೋದು ದೇಶದ್ರೋಹ ಕೆಲಸ, ಮೋದಿ ದೇಶ ಉಳಿಸೋ ಕೆಲಸ ಮಾಡತೀದಾರೆ. ಇಡೀ ಹಳ್ಳಿಗೆ ಹಳ್ಳಿ ನುಂಗತಿದಾರೆ. ವಕ್ಫ್ ಅನ್ನೋ ವೈರಸ್ ಭಯಾನಕವಾಗಿದೆ.
ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿಯಲ್ಲಿ ಜಮೀನು ದಾಖಲೆಯಲ್ಲಿ ರೈತರ ಹೆಸರು ತೆಗೆದು ಹಾಕಿದ್ದಾರೆ. ಧಾರವಾಡ ಜಿಲ್ಲೆಯ ಗರಗದಲ್ಲೂ ಹಾಗೇ ಆಗಿದೆ. ಪ್ರಾಚ್ಯ ವಸ್ತು ಇಲಾಖೆಯ ಕಟ್ಟಡಗಳು ವಕ್ಫ್ ಗೆ ಸೇರಿವೆ ಅಂತಿದಾರೆ. ಕಟ್ಟಡದ ಮೇಲೆ ಬೋರ್ಡ್ ಇದ್ರು, ಒಳಗಡೆ ಮಸೀದಿ, ಮದರಸಾ ಆಗಿವೆ. ಹೊನಗೋಡು ಗ್ರಾಮದಲ್ಲಿ ಅಂಧಾ ದಂಧೆ ನಡೀತಿದೆ. ಇದಕ್ಕೆ ಕಾರಣ ಕಾಂಗ್ರೆಸ್, ಕಾಂಗ್ರೆಸಿಗರು ಇಡೀ ದೇಶದ ಕ್ಷಮೆ ಕೇಳಬೇಕು.
ಸುಪ್ರೀಂ ಕೋರ್ಟ್ ಅಧಿಕಾರ ಮೀರಿ, ಇವರಿಗೆ ಅಧಿಕಾರ ಕೊಟ್ಟವರು ಯಾರು..? ವಕ್ಫ್ ಬೋರ್ಡ್ ಗೆ ಅಧಿಕಾರ ಕೊಟ್ಟವರು ಯಾರು.? ನಮ್ಮಲ್ಲಿ ಬಾಬರ್, ಔರಂಗಜೇಬ್ ಆಡಳಿತ ಇದೆಯಾ.? ಜಮೀರ್ ಅಹಮ್ಮದ್ ಒಬ್ಬ ದೇಶದ್ರೋಹಿ. ಇಡೀ ರಾಜ್ಯದಲ್ಲಿ ವಕ್ಫ್ ಅದಾಲತ್ ನಡೆಸಿ ಆರ್ಡರ್ ಮಾಡಿದ್ದೇನೆ, ಸಿಎಮ್ ಆದೇಶದಂತೆ ಬಂದಿದ್ದೇನೆಂದು ಜಮೀರ್ ಹೇಳ್ತಾನೆ. ಜಮೀರ್ ಅಹಮ್ಮದ್ ನನ್ನು ಗಡೀಪಾರು ಮಾಡಬಾರದು. ಜಮೀರ್ ನನ್ನ ಗಲ್ಲಿಗೇರಿಸಬೇಕು. ಜಮೀರ್ ನಿಂದಾಗಿ ಸಾವಿರಾರು ರೈತರು ಅತಂತ್ರ ಆಗತಿದಾರೆ. ಅಧಿಕಾರದ ಮದ ಏರಿದೆ ಅವನಿಗೆ, ಮದರಸಾಗೆ ಹಸಿರು ಬಣ್ಣ ಹಚ್ಚಿ ಅಂತಾರೆ. ಹಿಂದೂಗಳಿಗೆ ಸೈತಾನ್ ಅಂತಾನೆ. ಚಾಮರಾಜನಗರದಲ್ಲಿ 25 ಸಾವಿರ ಬಾಂಗ್ಲಾ ಮುಸ್ಲಿಂ ಗಳನ್ನ ಜಮೀರ್ ಸಾಕಿದ್ದಾನೆ. ಸಿಎಮ್ ಗೆ ತಾಕತ್ತಿದ್ರೆ ಅವನನ್ನು ಒದ್ದು ಒಳಗೆ ಹಾಕಿ.
ಕರ್ನಾಟಕದಲ್ಲಿ ಆಗ್ತಿರೋ ಬೆಳವಣಿಗೆಗೆ ಜಮೀರ್ ಕಾರಣ. ಕೆಲವು ಮುಸ್ಲಿಂ ಡಿಸಿ ತಹಶೀಲ್ದಾರ್ ಇದರ ಜೊತೆ ಕೈಜೋಡಿಸಿದ್ದಾರೆ. ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿಯಲ್ಲಿ ಮುಸ್ಲಿಂ ಪಿಡಿಓ ಇದ್ದಾನೆ. ಮುಸ್ಲಿಂ ಅಧಿಕಾರಿಗಳ ವಿರುದ್ಧ ತನಿಖೆ ಆಗಬೇಕು. ಅವರಿಗೆ ಶಿಕ್ಷೆಯಾಗಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
Hindu Sri Ram sene chief Pramod Muthalik says to hang Zameer Ahmed over waqf row. Waqf property is more than four muslim countries in India he added
26-12-24 11:39 pm
Bangalore Correspondent
Bidar Contractor Suicide, Priyank Kharge: ಪ್ರ...
26-12-24 08:03 pm
ಹೆಚ್ಚು ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದ ತಾಯ...
26-12-24 05:11 pm
Bangalore Case, Advocate Dhahina Bhanu, Fraud...
26-12-24 04:45 pm
MLA Munirathna Egg Attack: ಶಾಸಕ ಮುನಿರತ್ನ ಮೇಲೆ...
25-12-24 10:50 pm
26-12-24 11:15 pm
HK News Desk
Ajay Bhalla, Arif Khan: ಗಲಭೆ ಪೀಡಿತ ಮಣಿಪುರಕ್ಕೆ...
25-12-24 04:21 pm
Mohan Bhagwat: ಮೋಹನ್ ಭಾಗವತ್ ಸಂಘವನ್ನು ನಡೆಸುತ್ತ...
24-12-24 09:17 pm
ಕಾಸರಗೋಡಿನಲ್ಲಿ ಅಲ್ ಖೈದಾ ಉಗ್ರರ ಸ್ಲೀಪರ್ ಸೆಲ್ ರಚಿ...
23-12-24 05:23 pm
ರಾಮ ಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟು...
20-12-24 05:01 pm
26-12-24 11:18 pm
Mangalore Correspondent
Mangalore Kambala 2024, MP Brijesh Chowta: ಡಿ...
26-12-24 09:39 pm
Anoop Poojary, Udupi: ಹವಾಲ್ದಾರ್ ಅನೂಪ್ ಪೂಜಾರಿ...
26-12-24 07:07 pm
Mangalore, Martyr Anoop Poojary, Mp Brijesh C...
26-12-24 11:57 am
DJ artist Sajanka, Mangalore, New Year Party:...
25-12-24 10:55 pm
26-12-24 07:41 pm
Bangalore Correspondent
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm
Bangalore cyber fraud, Crime: ಬೆಂಗಳೂರಿನ ಸಾಫ್ಟ...
22-12-24 07:23 pm
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm