ಬ್ರೇಕಿಂಗ್ ನ್ಯೂಸ್
13-11-24 12:37 pm HK News Desk ಕರ್ನಾಟಕ
ಚಿಕ್ಕಮಗಳೂರು, ನ.13: ಕಾಫಿನಾಡು ಚಿಕ್ಕಮಗಳೂರಿನಲ್ಲಿ ದಶಕದ ಬಳಿಕ ನಕ್ಸಲರ ಹೆಜ್ಜೆ ಗುರುತು ಕಂಡುಬಂದಿದೆ. ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದ ಒಂಟಿ ಮನೆಗೆ ನಕ್ಸಲ್ ನಾಯಕರಾದ ಮುಂಡಗಾರು ಲತಾ ಮತ್ತು ಜಯಣ್ಣ ಅವರಿದ್ದ ನಾಲ್ವರು ನಕ್ಸಲರು ಭೇಟಿ ಕೊಟ್ಟಿದ್ದನ್ನು ತಿಳಿದ ಎಎನ್ಎಫ್ ಪಡೆ ದಾಳಿ ನಡೆಸಿದ್ದು ನಕ್ಸಲರು ಕಾಡಿನಲ್ಲಿ ಪರಾರಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪ್ರವೇಶದ ಗಡಿಗಳಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ, ಕಾಡಂಚಿನ ಗ್ರಾಮಗಳಲ್ಲಿ ಎಎನ್ಎಫ್ ಪಡೆಗಳಿಂದ ಕಾರ್ಯಾಚರಣೆ ತೀವ್ರಗೊಂಡಿದೆ. ಕುದುರೆಮುಖ ಮುಖ, ಆಗುಂಬೆ, ಕೆರೆಕಟ್ಟೆ, ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಎಲ್ಲ ಮಾದರಿಯ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾರೆ.

ಶೃಂಗೇರಿ ಮತ್ತು ಕೊಪ್ಪ ತಾಲೂಕಿನ ಗಡಿಯಲ್ಲಿರುವ ಸುಬ್ಬಗೌಡ ಎಂಬವರ ಮನೆಗೆ ನಾಲ್ವರು ನಕ್ಸಲರು ಬಂದಿದ್ದಾರೆಂಬ ಮಾಹಿತಿ ಮೇರೆಗೆ ಎಎನ್ಎಫ್ ಪೊಲೀಸರು ದಾಳಿ ನಡೆಸಿದ್ದಾರೆ. ಇದಕ್ಕೂ ಮೊದಲೇ ನಕ್ಸಲರು ಕಾಡಿನೊಳಗೆ ಪರಾರಿಯಾಗಿದ್ದಾರೆ. ಮನೆಯಲ್ಲಿ ಮೂರು ಬಂದೂಕು, ಮದ್ದುಗುಂಡು, ಮಾಂಸ ಪತ್ತೆಯಾಗಿದೆ. ಮನೆಯಲ್ಲಿ ನೇತು ಹಾಕಿದ್ದ ಕ್ಯಾಲೆಂಡರ್ ಗೆ ನಕ್ಷತ್ರ ಮಾದರಿಯ ಗುರುತು ಹಾಕಿದ್ದು ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಮುಂಡಗಾರು ಲತಾ ನೇತೃತ್ವದ ನಾಲ್ವರು ಬಂದಿದ್ದರೆಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಯಪುರ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಲಾಗಿದೆ.
ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ, ನಕ್ಸಲ್ ನಿಗ್ರಹ ಪಡೆಯ ಎಸ್ಪಿ ಜಿತೇಂದ್ರ ಕುಮಾರ್ ಭೇಟಿ ನೀಡಿದ್ದು ಕಾರ್ಯಾಚರಣೆ ಚುರುಕುಗೊಳಿಸಲು ಸೂಚಿಸಿದ್ದಾರೆ. ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಪ್ರಣಬ್ ಮೊಹಂತಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿದ್ದಾರೆ.
The anti-naxal force (ANF) has launched an extensive combing operation in the Sringeri and Koppa taluks of Chikkamagaluru district on the basis of intelligence reports suggesting renewed Maoist activity in the area, officials familiar with the matter said, adding that two have been detained for questioning.
10-04-26 06:53 pm
HK News Desk
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
10-04-26 11:05 pm
HK News Staffer
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
10-04-26 10:12 pm
Mangalore Correspondent
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
Puc 2026, Result, Mangalore: ಮೂವರು ಮಕ್ಕಳಾದರೂ...
10-04-26 12:35 pm
Besant Evening College, BPL Cricket: ಬೆಸೆಂಟ್...
07-04-26 01:22 pm
10-04-26 11:06 pm
HK News Staffer
Red Corner Notice, Mangalore crime: ದೇರಳಕಟ್ಟೆ...
09-04-26 09:16 pm
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm