ಬ್ರೇಕಿಂಗ್ ನ್ಯೂಸ್
13-12-20 11:28 pm Mangaluru Correspondent ಕರ್ನಾಟಕ
ಬೆಂಗಳೂರು, ಡಿ.13: ಒಂದೆಡೆ ಸಾರಿಗೆ ನೌಕರರ ಸಂಘದ ಮುಖಂಡರ ಜೊತೆ ಸಾರಿಗೆ ಸಚಿವರು ಮಾತುಕತೆ ನಡೆಸಿ, ಸಂಧಾನ ಸಫಲ ಎಂದು ಘೋಷಣೆ ಮಾಡಿದರೆ, ಇತ್ತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತ್ರ ಮಾತುಕತೆ ವಿಫಲ, ಮುಷ್ಕರ ಮುಂದುವರಿಯುತ್ತೆ ಎಂದಯ ಘೋಷಣೆ ಮಾಡಿದ್ದಾರೆ. ಆಮೂಲಕ ಸಾರಿಗೆ ನೌಕರರ ಇಡೀ ಮುಷ್ಕರವನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೈಜಾಕ್ ಮಾಡಿದ್ದಾರೋ ಅನ್ನುವ ಅನುಮಾನ ಮೂಡಿದೆ.
ಸತತ ಮುಷ್ಕರದಿಂದಾಗಿ ಸಿಬಂದಿ ಮತ್ತು ಸಾರ್ವಜನಿಕರು ಬಸವಳಿದಿದ್ದರು. ರಾಜ್ಯ ಸರಕಾರರನ್ನಾಗಿ ಮಾಡುವ ವಿಚಾರ ಬಿಟ್ಟು ಉಳಿದೆಲ್ಲ ಎಂಟು ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಪಡುತ್ತೇವೆಂದು ಸರಕಾರದಿಂದ ಭರವಸೆ ನೀಡಲಾಗಿತ್ತು. ಈ ವಿಚಾರದಲ್ಲಿ ಸಾರಿಗೆ ನೌಕರರ ಸಂಘದ ಮುಖಂಡರು ಕೂಡ ಒಪ್ಪಿದ್ದರು. ಇದರಂತೆ, ಮುಷ್ಕರ ಕೈಬಿಟ್ಟು ಬೆಂಗಳೂರು ಕೇಂದ್ರ ನಿಲ್ದಾಣದಿಂದ ಬಸ್ ಆರಂಭಿಸಲು ತಯಾರಿ ನಡೆದಿತ್ತು. ಕೆಲವರು ಜಿಲ್ಲೆಗಳತ್ತ ಬಸ್ ಚಾಲೂ ಮಾಡಿಯೂ ಆಗಿತ್ತು. ಪ್ರಯಾಣಿಕರು ಕೂಡ ಬಸ್ ಆರಂಭಗೊಳ್ತು ಎಂದು ಬಸ್ ನಿಲ್ದಾಣದತ್ತ ದಾಂಗುಡಿ ಇಟ್ಟಿದ್ದರು.
ಆದರೆ, ಸಂಧಾನ ಮಾತುಕತೆ ನಡೆದ ಬಳಿಕ ಫ್ರೀಡಂ ಪಾರ್ಕ್ ತಲುಪಿದ ಮುಖಂಡರು, ಅಲ್ಲಿ ಉಲ್ಟಾ ಹೊಡೆದಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಸೇರಿ ಮುಷ್ಕರ ಮತ್ತೆ ಮುಂದುವರಿಯಲಿದೆ. ಯಾರು ಕೂಡ ಬಸ್ ಬಿಡಬಾರದು ಎಂದು ಹೇಳಿಕೆ ನೀಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಉದ್ದೇಶಪೂರ್ವಕವಾಗಿ ಸಾರಿಗೆ ನೌಕರರನ್ನು ಎತ್ತಿಕಟ್ಡುತ್ತಿದ್ದಾರೆಯೇ ಅನ್ನುವ ಅನುಮಾನ ಕೇಳಿಬಂದಿದೆ. ಈ ಬಗ್ಗೆ ಸರಕಾರದ ಸಚಿವರು ಕೂಡ ಕೋಡಿಹಳ್ಳಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಂದ್ ಮಾಡುವಂತೆ ನೌಕರರನ್ನು ಎತ್ತಿ ಕಟ್ಟುವುದು ಕುಹಕ ಬುದ್ಧಿ. ಅವರಿಗೆ ನೌಕರರ ಸಮಸ್ಯೆ ಗೊತ್ತಿದೆಯೇ.. ಮಾತುಕತೆಗೆ ಬಂದಿದ್ದವರು ಸಂಘದ ಮುಖಂಡರು 9 ಬೇಡಿಕೆ ಈಡೇರಿಕೆಯನ್ನು ಒಪ್ಪಿ ತೆರಳಿದ್ದರು. ಆದರೆ, ಒಂದು ಬೇಡಿಕೆ ಮಾತ್ರ ನಿರಾಕರಿಸಲಾಗಿತ್ತು. ಆದರೆ, ಕೋಡಿಹಳ್ಳಿ ಮುಷ್ಕರ ನಿರತರನ್ನು ಉಲ್ಟಾ ಹೊಡೆಯುವಂತೆ ಮಾಡಿದ್ದಾರೆ. ಒಬ್ಬ ವ್ಯಕ್ತಿಗಾಗಿ ಇಂಥ ಗತಿ ಆಗಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ. ಕೋವಿಡ್ ಇರುವ ಕಷ್ಟದಲ್ಲಿರ ಬೇಕಿದ್ದರೆ ಬಂದ್ ಮಾಡುವಂತೆ ಒತ್ತಾಯ ಮಾಡುತ್ತಾರೆಯೇ.. ಇವರಿಗೆ ಮಾನವೀಯತೆ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಖಾಸಗಿ ಬಸ್ ಓಡಿಸಲು ಅವಕಾಶ
ನಾಳೆ, ಖಾಸಗಿ ಬಸ್ ಓಡಿಸಲು ಎಲ್ಲ ಅನುಮತಿ ನೀಡುತ್ತೇವೆ. ಯಾವುದೇ ಪರವಾಗಿ ಕೇಳುವುದಿಲ್ಲ. ಎಲ್ಲ ಖಾಸಗಿ ಬಸ್ ಗಳೂ ಯಾವುದೇ ಜಿಲ್ಲೆಗೂ ಹೋಗಬಹುದು. ಯಾವುದೇ ಪ್ರಯಾಣಿಕನಿಗೂ ತೊಂದರೆ ಆಗಬಾರದು. ತೊಟ್ಟು ರಕ್ತ ಬಂದರೆ ಅದಕ್ಕೆ ಕಾರಣರಾದವರನ್ನು ಜೈಲಿಗಟ್ಡುತ್ತೇವೆ ಎಂದು ಸಚಿವ ಅಶೋಕ್ ಗುಡುಗಿದ್ದಾರೆ.
Karnataka's road transport employees on Sunday called off their 4-day strike after the state government responded to some of their demands, enabling resumption of bus services across the southern state.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm