ಬ್ರೇಕಿಂಗ್ ನ್ಯೂಸ್
05-12-24 11:02 am HK News Desk ಕರ್ನಾಟಕ
ಹಾಸನ, ಡಿ 5: ಉಪಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಕಾಂಗ್ರೆಸ್ ಈಗ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಮೂಲಕ ಜೆಡಿಎಸ್-ಬಿಜೆಪಿ ಎರಡಕ್ಕೂ ಟಕ್ಕರ್ ಕೊಡಲು ‘ಕೈ’ ತಂತ್ರ ಹೂಡಿದ್ದು, ಎಲ್ಲರ ಚಿತ್ತ ಅತ್ತ ನೆಟ್ಟಿದೆ.
ಬೆಳಗ್ಗೆ 11.30ಕ್ಕೆ ಹಾಸನದಲ್ಲಿ ಜನಕಲ್ಯಾಣ ಸಮಾವೇಶ ಉದ್ಘಾಟನೆ ಆಗಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಇಡೀ ಸಚಿವ ಸಂಪುಟ ದಂಡೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. 480 ಅಡಿ ಅಗಲ ಮತ್ತು 600 ಅಡಿ ಉದ್ದದ ಬೃಹತ್ ಟೆಂಟ್ ಹಾಕಲಾಗಿದೆ. ಸುಮಾರು 70 ಸಾವಿರ ಜನರು ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಬಿಗಿ ಭದ್ರತೆ, ಹೆಚ್ಚುವರಿ ಪೊಲೀಸ್ ನಿಯೋಜನೆ ;
ಲಕ್ಷಾಂತರ ಜನರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ, ಪೊಲೀಸ್ ಇಲಾಖೆ ಸಾಕಷ್ಟು ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಐವರು ಎಸ್ಪಿಗಳು, ಆರು ಎಎಸ್ಪಿಗಳು, 12 ಡಿವೈಎಸ್ಪಿ, 50ಕ್ಕೂಹೆಚ್ಚು ಸಿಪಿಐ, 80ಕ್ಕೂ ಹೆಚ್ಚು ಪಿಎಸ್ಐಗಳು ಸೇರಿ ಎರಡು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಈ ಇಡೀ ಸಮಾವೇಶದ ಪ್ರಮುಖ ಗುರಿಯೇ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಎನ್ನಲಾಗುತ್ತಿದೆ. ಇದಕ್ಕಾಗಿ ದೊಡ್ಡಗೌಡರ ತವರು ಜಿಲ್ಲೆ, ಕರ್ಮಭೂಮಿ, ಜೆಡಿಎಸ್ ಭದ್ರಕೋಟೆ ಹಾಸನದಿಂದಲೇ ಸಮಾವೇಶ ಏರ್ಪಡಿಸಲಾಗಿದೆ. ಹಳೆ ಮೈಸೂರಿನಲ್ಲಿ ಜೆಡಿಎಸ್ ಜೊತೆ ನೈತ್ರಿ ಮಾಡಿಕೊಂಡು ಬಿಜೆಪಿ ನೆಲೆಯೂರುತ್ತಿರುವುದನ್ನು ತಡೆದು ತಮ್ಮ ಪಕ್ಷದ ಹಿಡಿತ ಸಾಧಿಸುವುದು ಈ ಸಮಾವೇಶದ ಹಿಡನ್ ಅಜೆಂಡಾ ಎಂಬ ಚರ್ಚೆ ಇದೆ. ಅಹಿಂದ ವರ್ಗವನ್ನು ಒಗ್ಗೂಡಿಸಿ ಹಳೆ ಮೈಸೂರು ಭಾಗವನ್ನ ಕಬ್ಜ ಮಾಡುವ ರಣತಂತ್ರ ಎನ್ನಲಾಗುತ್ತಿದೆ.
ಉಪಚುನಾವಣೆ ಗೆಲುವಿನ ರಣೋತ್ಸಾಹದಲ್ಲಿರುವ ಕಾಂಗ್ರೆಸ್, ವಿಪಕ್ಷಗಳ ಮೇಲೆ ಸವಾರಿ ಮಾಡಲು ಹೊರಟಿದೆ. ತನ್ನ ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಹಾಸನದಲ್ಲಿ ಎಲ್ಲೆಡೆ ಕೈ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಕಾಂಗ್ರೆಸ್ ಬಾವುಟಗಳು ಹಾರಾಡುತ್ತಿವೆ
ಇನ್ನು ಜೆಡಿಎಸ್ ಭದ್ರಕೋಟೆಯಲ್ಲಿ ನಡೆಯುತ್ತಿರುವ ಸಮಾವೇಶದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಹೆಚ್ಡಿ ರೇವಣ್ಣ, ಇಂತಹ ಎಷ್ಟು ಸಮಾವೇಶ ನೋಡಿಲ್ಲ, ಸಮಾವೇಶ ಮಾಡಲಿ ನಾವೇನು ಹೆದರಲ್ಲ. ನಮ್ಮನ್ನ ಮುಗಿಸುವುದು ದೇವರು ಮಾತ್ರ, ಅಭಿವೃದ್ಧಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಒಟ್ಟಿನಲ್ಲಿ ಜೆಡಿಎಸ್ ಭದ್ರಕೋಟೆಯಲ್ಲಿ ಕೈ ಶಕ್ತಿ ಪ್ರದರ್ಶನಕ್ಕೆ ಹಾಸನ ಸಜ್ಜಾಗಿದೆ. ವಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಲೆಂದೇ ನಡೆಯುತ್ತಿರುವ ಸಮಾವೇಶದಲ್ಲಿ ನಾಯಕರ ತಿರುಗೇಟು ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.
Congress rally in Hassan, lakhs of congress members to join the rally. The Congress has planned a rally in Karnataka’s Hassan on Thursday, with a two-pronged strategy – it marks an attempt to build on a strong performance in the recently held bypolls and signals a strategic move by Karnataka Chief Minister Siddaramaiah and his deputy DK Shivakumar to train their guns at their political rivals and settle some old scores.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am