ಬ್ರೇಕಿಂಗ್ ನ್ಯೂಸ್
08-12-24 09:45 pm HK News Desk ಕರ್ನಾಟಕ
ಬೆಳಗಾವಿ, ಡಿ.8: ಬಳ್ಳಾರಿಯಲ್ಲಿ ಆರು ಬಾಣಂತಿಯರ ಸಾವು ಸುದ್ದಿಯ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಣಂತಿಯರು ಮತ್ತು ಶಿಶುಗಳು ಸಾವನ್ನಪ್ಪಿದ ವಿಚಾರ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 29 ಬಾಣಂತಿಯರು ಮತ್ತು 372 ಶಿಶುಗಳು ಮರಣವನ್ನಪ್ಪಿದ್ದಾಗಿ ಆರೋಗ್ಯ ಇಲಾಖೆ ಮಾಹಿತಿ ಹೇಳುತ್ತಿದ್ದು ಇದಕ್ಕೆ ಅಪೌಷ್ಟಿಕತೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಇದರ ಬೆನ್ನಲ್ಲೇ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಭೇಟಿ ನೀಡಿದ್ದು ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಾರ್ಡ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಮ್ಸ್ ವೈದ್ಯಕೀಯ ಕಾಲೇಜು ನಿರ್ದೇಶಕ ಅಶೋಕ ಶೆಟ್ಟಿ, ಬಿಮ್ಸ್ ಆಸ್ಪತ್ರೆ ಜಿಲ್ಲಾ ಸರ್ಜನ್ ವಿಠ್ಠಲ್ ಶಿಂಧೆ ಮತ್ತು ಇತರ ವೈದ್ಯರಿಂದ ಅಶೋಕ್ ಮಾಹಿತಿ ಪಡೆದಿದ್ದಾರೆ. ಬೆಳಗಾವಿಯಲ್ಲಿ ಡಿ.9ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಇದೇ ವಿಚಾರ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಲಿದೆ.
ಪೌಷ್ಠಿಕ ಆಹಾರ ಸಿಗದೇ ಶಿಶುಗಳ ಸಾವು
ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದು ಪೌಷ್ಠಿಕ ಆಹಾರ ಸಿಗದೇ ಇದ್ದುದ್ದಕ್ಕೆ ಮಕ್ಕಳ ಬೆಳವಣಿಗೆ ಆಗ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಇರುವ ಜಿಲ್ಲೆಯಲ್ಲಿಯೇ ಪೌಷ್ಟಿಕ ಆಹಾರದ ಸಮಸ್ಯೆ ಇದೆ. ಬಳ್ಳಾರಿ ಮಾದರಿಯಲ್ಲಿ ಇಲ್ಲಿಯೂ ತನಿಖೆ ಆಗಬೇಕು. ಬಾಣಂತಿಯರ ಸಾವು ಪ್ರಕರಣ ರಾಜ್ಯದಲ್ಲಿ ಆತಂಕಕಾರಿ ಸಂಗತಿ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಇದ್ದಾಗಿನಿಂದಲೂ ಬ್ಲಾಕ್ ಲಿಸ್ಟ್ ಗೆ ಸೇರಿದ ಕಂಪನಿ ಜೊತೆಗೆ ಹೊಂದಾಣಿಕೆ ಆಗಿದೆ. ಅಂದಿನಿಂದಲೂ ಆ ಕಂಪನಿಗೆ ಐವಿ ದ್ರಾವಣ ಸಪ್ಲೈ ಮಾಡಲು ಕೊಡ್ತಿದಾರೆ. ಚೆನ್ನೈನಲ್ಲಿರುವ ಕಂಪನಿಗೆ ಪೌಷ್ಟಿಕ ಆಹಾರದ ಟೆಂಡರ್ ಕೊಟ್ಟಿದ್ದಾರೆ. ಪೌಷ್ಠಿಕ ಆಹಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ. ಇದರಲ್ಲಿ ಸಿಎಂ ಗಳೇ ದೊಡ್ಡ ಡೀಲ್ ಮಾಡಿಕೊಳ್ತಾರೆ ಎಂದು ಹೇಳಿದರು.
ಲಕ್ಷ್ಮೀ ಅಕ್ಕವರು ಇದಕ್ಕೆ ಉತ್ತರ ಕೊಡಬೇಕಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು, ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು. ಈ ವಿಷಯದ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡುತ್ತೇನೆ. 372 ಮಕ್ಕಳು ಆರು ತಿಂಗಳಲ್ಲಿ ಮೃತಪಟ್ಟಿರುವುದು ದೊಡ್ಡ ದುರಂತ. ಡಿಎಚ್ಒ ಅವರೇ ಪೌಷ್ಠಿಕ ಕೊರತೆಯಿಂದ ಸಾವಾಗಿದೆ ಅಂತಾ ಹೇಳಿದ್ದಾರೆ. ಆರೋಗ್ಯ ಸಚಿವರಿಗೆ ಇದರ ಬಗ್ಗೆ ಗಂಭೀರತೆ ಇಲ್ಲ. ಉತ್ಸವದಲ್ಲಿ ಇವರು ಕಾಲಹರಣ ಮಾಡುತ್ತಿದ್ದಾರೆ. ಬೆಂಗಳೂರು ಬಿಟ್ಟು ಕೆಲವು ಮಂತ್ರಿಗಳು ಬೇರೆ ಜಿಲ್ಲೆಗಳತ್ತ ಬರುವುದಿಲ್ಲ ಎಂದರು.
The State government will order an inquiry into the death of newborn babies and pregnant mothers in various hospitals in the district, including Belagavi Institute of Medical Sciences Hospital, according to Minister for Women and Child Welfare Lakshmi Hebbalkar.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am