ಬ್ರೇಕಿಂಗ್ ನ್ಯೂಸ್
09-12-24 02:51 pm HK News Desk ಕರ್ನಾಟಕ
ಹಾಸನ, ಡಿ.9: ಎತ್ತಿನಹೊಳೆ ಯೋಜನೆಯ ಭೂಸ್ವಾಧೀನಕ್ಕೆ ಪರಿಹಾರ ವಿಳಂಬವಾಗಿದ್ದರಿಂದ ಮನನೊಂದ ರೈತನೊಬ್ಬ ಎತ್ತಿನಹೊಳೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಂಗಸ್ವಾಮಿ (64) ಆತ್ಮಹತ್ಯೆ ಮಾಡಿಕೊಂಡ ರೈತ. ಪರಿಹಾರದ ಹಣ ನೀಡುವಂತೆ ಎರಡು ದಿನಗಳ ಹಿಂದೆ ಎತ್ತಿನಹೊಳೆ ಇಂಜಿನಿಯರ್ ಜೊತೆ ರಂಗಸ್ವಾಮಿ ಜಗಳವಾಡಿದ್ದು ಅಧಿಕಾರಿ ಬೈದು ಹಿಂದಕ್ಕೆ ಕಳಿಸಿದ್ದ ಎನ್ನಲಾಗಿದೆ. ಎತ್ತಿನಹೊಳೆ ಯೋಜನೆಗೆ ರಂಗಸ್ವಾಮಿ ಅವರು 1 ಎಕರೆ 32 ಗುಂಟೆ ಜಮೀನು ಕಳೆದುಕೊಂಡಿದ್ದರು. ಆದರೆ ಇದುವರೆಗೂ ನಯಾಪೈಸೆ ಪರಿಹಾರ ನೀಡದೇ ಸತಾಯಿಸಿದ್ದರಿಂದ ಮನನೊಂದಿದ್ದರು. ಪರಿಹಾರದ ಹಣ ನಂಬಿ ಸಾಲವನ್ನೂ ಮಾಡಿಕೊಂಡಿದ್ದರು. ಸಾಲದ ಹಣ ಕೊಟ್ಟವರು ಹಣ ಹಿಂತಿರುಗಿಸುವಂತೆ ಒತ್ತಾಯ ಮಾಡುತ್ತಿದ್ದರು.
ಇದೇ ವೇಳೆ, ಎತ್ತಿನಹೊಳೆ ಇಂಜಿನಿಯರ್ ಪರಿಹಾರದ ಹಣ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಇಂದು ಬೆಳಗ್ಗೆ ಎತ್ತಿನಹೊಳೆ ಯೋಜನೆ ಕಾಲುವೆಯಲ್ಲಿ ರಂಗಸ್ವಾಮಿ ಮೃತದೇಹ ತೇಲುತ್ತಿರುವುದು ಪತ್ತೆಯಾಗಿತ್ತು. ಸ್ಥಳಕ್ಕೆ ಪೊಲೀಸರು, ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿತ ಎತ್ತಿನಹೊಳೆ ಯೋಜನೆ ಇಂಜಿನಿಯರ್ ಸ್ಥಳಕ್ಕೆ ಆಗಮಿಸಬೇಕೆಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರ ಪಟ್ಟು ಹಿಡಿದಿದ್ದಾರೆ. ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Yettinahole project, 64 year old farmer commits suicide after no compensation on land, demand for bribe by enginner in Hassan. The deceased has been identified as Rangaswami.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm