ಬ್ರೇಕಿಂಗ್ ನ್ಯೂಸ್
11-12-24 01:51 pm Bangalore Correspondent ಕರ್ನಾಟಕ
ಬೆಂಗಳೂರು, ಡಿ 11: ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಟೆಕ್ಕಿಯೊಬ್ಬರು ಪತ್ನಿ ನೀಡಿದ ಕಿರುಕುಳದಿಂದ ಬೇಸತ್ತು ಜೀವ ಕಳೆದುಕೊಂಡಿದ್ದಾರೆ. ನೇಣಿಗೆ ಶರಣಾಗುವ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು ಪತ್ನಿ ಕೊಟ್ಟಿರುವ ಕಿರುಕುಳದ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಈ ದೇಶದಲ್ಲಿ ಗಂಡಸರನ್ನು ಕಾಪಾಡಲು ಕಾನೂನೇ ಇಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಟೆಕ್ ಉದ್ಯಮಿ 34 ವರ್ಷದ ಅತುಲ್ ಸುಭಾಷ್ ಬೆಂಗಳೂರಿನ ಮಾರತ್ತಹಳ್ಳಿಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ನೇಣಿಗೆ ಶರಣಾಗುವ ಮುನ್ನ ಎಕ್ಸ್‌ನಲ್ಲಿ (ಟ್ವಿಟ್ಟರ್) "ಭಾರತದಲ್ಲಿ ಪುರುಷರ ಮೇಲೆ ಕಾನೂನುಬದ್ಧ ನರಮೇಧ ನಡೆಯುತ್ತಿದೆ" ಎಂದು ಬರೆದಿದ್ದಾರೆ. ಬಳಿಕ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
24 ಪುಟಗಳ ಡೆತ್‌ನೋಟ್ ;
ಖಾಸಗಿ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ಅತುಲ್ ಸುಭಾಷ್, ಪತ್ನಿಯ ಕಿರುಕುಳದಿಂದ ಬೇಸತ್ತಿದ್ದರು. ತನ್ನ ಪತ್ನಿ ಮತ್ತು ಆಕೆಯ ಕುಟುಂಬ ನೀಡಿದ ಕಿರುಕುಳದ ಬಗ್ಗೆ ಅತುಲ್ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಪತ್ನಿಯಿಂದ ದೂರವಾಗಿ ಒಂಟಿಯಾಗಿದ್ದ ಅತುಲ್ ಸುಭಾಷ್, ವೈವಾಹಿಕ ಜೀವನದಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಇತ್ತೀಚೆಗೆ ಆತನ ಪತ್ನಿ ಉತ್ತರ ಪ್ರದೇಶದಲ್ಲಿ ಸುಭಾಷ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಇದರಿಂದ ಸುಭಾಷ್ ತುಂಬಾ ನೊಂದಿದ್ದರು ಎಂದು 'ದಿ ಹಿಂದೂ' ಪತ್ರಿಕೆ ವರದಿ ಮಾಡಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಅತುಲ್, ತನಗಾದ ಅನ್ಯಾಯದ ಬಗ್ಗೆ ಜಗತ್ತಿಗೆ ತಿಳಿಸಲು ಪ್ರಯತ್ನ ಮಾಡಿದ್ದಾರೆ. ತಾನು ಬರೆದಿದ್ದ ಡೆತ್ ನೋಟ್ ಅನ್ನು ಹಲವು ವ್ಯಕ್ತಿಗಳಿಗೆ ಇಮೇಲ್ ಮಾಡಿದ್ದಾರೆ. ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ತಮಗೆ ಪರಿಚಯವಿದ್ದ ಎನ್‌ಜಿಒನ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡು, ನ್ಯಾಯ ಸಿಗಬೇಕು ಎನ್ನುವ ಫಲಕ ನೇತುಹಾಕಿದ್ದಾರೆ.
ಮಗನಿಗಾಗಿ ರೆಡಿ ಮಾಡಿದ್ದ ಗಿಫ್ಟ್ ಬಾಕ್ಸ್ ಒಂದನ್ನು ಮನೆಯಲ್ಲಿಟ್ಟು, ತನ್ನ ನಾಲ್ಕು ವರ್ಷದ ಪುತ್ರನಿಗೆ ಇದನ್ನು ತಲುಪಿಸುವಂತೆ ಉಲ್ಲೇಖಿಸಿದ್ದರು. ನಂತರ 'JUSTICE IS DUE' ಎಂಬ ಬರಹವಿರುವ ಪೋಸ್ಟರ್ ಹಾಗೂ ಪೂರ್ಣಗೊಳಿಸಿರುವ ತನ್ನ ಕೆಲಸಗಳ ಪಟ್ಟಿಯನ್ನ ಗೋಡೆಗೆ ಅಂಟಿಸಿ ತನ್ನ ಬದುಕಿಗೆ ಕೊನೆಹಾಡಿದ್ದರು. ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಟೆಕ್ಕಿ ಅತ್ಮಹತ್ಯೆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಈ ದೇಶದಲ್ಲಿ ಗಂಡಸರನ್ನು ಕಾಪಾಡಲು ಕಾನೂನುಗಳೇ ಇಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಇಡೀ ಸಮಾಜ ಖಂಡಿಸುತ್ತದೆ, ಪೊಲೀಸರು ಕೂಡಲೇ ಸಂಬಂಧಪಟ್ಟವರನ್ನು ಬಂಧಿಸುತ್ತಾರೆ. ಆದರೆ ಗಂಡಸರು ಶೋಷಣೆಗೆ ಒಳಗಾಗಿ ಜೀವ ಕಳೆದುಕೊಂಡರೆ ಅದರ ಬಗ್ಗೆ ಸಮಾಜ ಕೂಡ ಹೆಚ್ಚಾಗಿ ಗಮನ ಹರಿಸುವುದಿಲ್ಲ ಎಂದು ಬೇಸರ ವ್ಯಕ್ತವಾಗಿದೆ.
ಆತ್ಮಹತ್ಯೆ ಪರಿಹಾರವಲ್ಲ; ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದರೆ, ಅಥವಾ ಸ್ನೇಹಿತರ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಯಾರಾದರೂ ನಿಮ್ಮ ನೋವನ್ನು ಕೇಳಲು ಇರುತ್ತಾರೆ. ಅದಕ್ಕಾಗಿ ಸ್ನೇಹ ಫೌಂಡೇಶನ್‌ಗೆ ಕರೆ ಮಾಡಿ - 04424640050 (24x7 ಲಭ್ಯವಿದೆ) ಅಥವಾ iCall, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಸಹಾಯವಾಣಿ - 9152987821, ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10ರ ವರೆಗೆ ಲಭ್ಯವಿರುತ್ತದೆ).
Atul Subhash, a 34-year-old tech professional from Bengaluru, died by suicide in his home after months of meticulous planning. Subhash, who specialised in Artificial Intelligence, left behind a 24-page suicide note, a 90-minute video, and a checklist outlining his final days. His death has triggered debates about the alleged misuse of laws, systemic corruption, and the societal pressures faced by men in family disputes.
18-01-25 05:05 pm
Bangalore Correspondent
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
18-01-25 06:20 pm
HK News Desk
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
18-01-25 09:27 pm
Mangalore Correspondent
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
Mangalore court, Rape, Crime: ಇನ್ಸ್ಟಾಗ್ರಾಮ್ ನ...
17-01-25 10:58 pm
Ullal News, Mangalore: ಸೋಮೇಶ್ವರ ; ಬಾಡಿಗೆ ಮನೆಯ...
17-01-25 10:50 pm
19-01-25 12:13 pm
HK News Desk
Mangalore Kotekar bank robbery, Update, Crime...
18-01-25 10:47 pm
Sullia, Mangalore crime: ಸುಳ್ಯ ; ಕುಡಿದ ಅಮಲಿನಲ...
18-01-25 10:28 am
Kotekar Bank Robbery, Latest Update, Mangalor...
17-01-25 07:58 pm
Kotekar Bank Robbery, Mangalore Crime; ಬೀದರ್...
17-01-25 03:02 pm