Bangalore Suicide, Crime: ಗಂಡನಿಗೆ ಬುದ್ದಿ ಕಲಿಸಲು 1 ವರ್ಷದ ಮಗು, 6 ವರ್ಷದ ಮಗನನ್ನ ಉಸಿರುಗಟ್ಟಿಸಿ ಕೊಂದ ಪಾಪಿ ತಾಯಿ ;  'Congrats your ego wins' ಎಂಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪತ್ನಿ ! 

12-12-24 07:23 pm       Bangalore Correspondent   ಕರ್ನಾಟಕ

ಗಂಡನಿಗೆ ಬುದ್ದಿ ಕಲಿಸಲು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು, ಡಿ.12: ಗಂಡನಿಗೆ ಬುದ್ದಿ ಕಲಿಸಲು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೋಡಿಗೆಹಳ್ಳಿ ಗೇಟ್ ಬಳಿ ತುಮಕೂರು ಮೂಲದ ಸುರೇಶ್ ಹಾಗೂ ಬೆಂಗಳೂರಿನ ಮತ್ತಿಕೆರೆ ಮೂಲದ ಕುಸುಮಾ ದಂಪತಿ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಇದ್ದರು.

ವೈಟ್ ಫೀಲ್ಡ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸುರೇಶ್ ತಾಯಿ ನಿಧನರಾದ ಮಾರನೇ ದಿನವೇ ಪತ್ನಿ ಕುಸುಮಾ (25) ತನ್ನ ಇಬ್ಬರು ಮಕ್ಕಳಾದ ಶ್ರೀಯಾನ್ (6) ಹಾಗೂ ಮಗಳು ಚಾರ್ವಿ (1 ವರ್ಷ) ಅವರನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸುರೇಶ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದ್ದಾನೆ. ಇದರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುಸುಮಾ ನನ್ನನ್ನು ಕಡೆಗಣಿಸಿದ್ದಾರೆ ಎಂದು ಅಸಮಾಧಾನಕ್ಕೆ ಒಳಗಾಗಿದ್ದಾರೆ.

ಗಂಡನಿಗೆ ಹೆಂಡತಿ ಮಕ್ಕಳು ಇಲ್ಲದಿದ್ದರೆ ಹೇಗೆ ಎಂದು ಬುದ್ದಿ ಕಲಿಸಲು ಈ ವಿಪರೀತದ ನಿರ್ಧಾರಕ್ಕೆ ಹೋಗಿದ್ದಾಳೆ ಎಂದು ಪೊಲೀಸರು ಹೇಳಿದ್ದು, ಮೃತರ ಶವಗಳನ್ನು ಮೃಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕುಸಮಾ ಬರೆದಿಟ್ಟ ಡೆತ್ ನೋಟ್‌ನಲ್ಲಿ 'Congrats your ego wins' ಎಂದು ಉಲ್ಲೇಖ ಮಾಡಿದ್ದಾಳೆ. ಅಂದರೆ, ಗಂಡನಿಗೆ ನಿನ್ನ ಇಗೋ ಗೆದ್ದಿದೆ ಎಂದು ಹೇಳಿದ್ದಾಳೆ. ಜೊತೆಗೆ, ಗಂಡನಿಗೆ ಬುದ್ಧಿ ಕಲಿಸಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅತ್ತೆ ಸತ್ತ ದಿನವೇ ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ.

Bangalore wife kills two of her children and commits suicide to teach husband a lesson of not caring wife and children says death note.