ಬ್ರೇಕಿಂಗ್ ನ್ಯೂಸ್
04-01-25 01:28 pm HK News Desk ಕರ್ನಾಟಕ
ಗದಗ, ಜ 03: ಹೈಸ್ಕೂಲ್ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ SUV ಕಾರು ಅಪಘಾತವಾಗಿ ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಗದಗ ತಾಲೂಕಿನ ಹುಲಕೋಟಿ ರೂರಲ್ ಇಂಜಿನಿಯರಿಂಗ್ ಕಾಲೇಜ್ ಬಳಿ ಘಟನೆ ನಡೆದಿದೆ.
ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಲ್ಲಿ ಓರ್ವ ಕಾರು ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ವೇಗವಾಗಿ ಕಾರು ಚಲಿಸುತ್ತಿದ್ದ ಪರಿಣಾಮ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಮಹಮ್ಮದ್ ಮುಜಾವರ್ (16), ಸಂಜೀವ್ ಗಿರಡ್ಡಿ (16) ಮೃತಪಟ್ಟಿದ್ದಾರೆ. ಆಶಿಸ್ ಗುಂಡುರ್ (16) ಸೇರಿದಂತೆ ಮತ್ತೋರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿ ತಡರಾತ್ರಿ ಬರುವ ವೇಳೆ ಅಪಘಾತ ಸಂಭವಿಸಿದೆ. ನಾಲ್ಕು ಜನ ವಿದ್ಯಾರ್ಥಿಗಳು ಮಾತ್ರ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಸ್ಕೂಲ್ ಗ್ಯಾದರಿಂಗ್ ಡ್ಯಾನ್ಸ್ ಮುಗಿಸಿಕೊಂಡು ಜೋಶ್‌ನಲ್ಲಿ ವಾಪಸ್ ಆಗುತ್ತಿದ್ದರು. ಅತಿಯಾದ ವೇಗವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಮೃತರ ದೇಹಗಳು ಹಾಗೂ ಓರ್ವ ಗಾಯಾಳು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೋರ್ವ ಗಾಯಾಳು ವಿದ್ಯಾರ್ಥಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ ಕಾರು ಅಪ್ಪಚ್ಚಿಯಾಗಿದೆ.
ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Gadag Car accident, two Minor students of SSLC killed on spot. Two other friends have been injured. The deceased have been identified as Mohammed Mujamar and Sanjeev Giradi.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am