ಬ್ರೇಕಿಂಗ್ ನ್ಯೂಸ್
15-01-25 12:19 pm HK News Desk ಕರ್ನಾಟಕ
ಬೆಂಗಳೂರು, ಜ.15: ಕಿಯೋನಿಕ್ಸ್ ಹಗರಣದ ಬಗ್ಗೆ ತನಿಖೆ ನಡೆಸಲಾಗುವುದು. ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಕಿಯೋನಿಕ್ಸ್ ವೆಂಡರ್ಸ್ ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅಕೌಂಟೆಂಟ್ ಜನರಲ್ ವರದಿಯಲ್ಲಿ ಸರ್ಕಾರದ ಖಜಾನೆಗೆ ನೂರಾರು ಕೋಟಿ ನಷ್ಟ ಆಗಿರುವುದಾಗಿ ಮಾಹಿತಿ ಇದೆ. ಮಹೇಶ್ವರ್ ರಾವ್ ಕಮಿಟಿ ವರದಿ ಪಡೆದು ಬಿಲ್ ಕ್ಲಿಯರ್ ಮಾಡುತ್ತೇವೆ. ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿರುವುದು ಸಾಬೀತಾದರೆ ಕ್ರಮ ತೆಗೆದುಕೊಳ್ಳುತ್ತೇವೆ. ಬೆಲೆ ನಿಗದಿ ವಿಚಾರದಲ್ಲೂ ಮಾರ್ಕೆಟ್ ಬೆಲೆಗಿಂತ ಹೆಚ್ಚಿನ ಬೆಲೆಗೆ ಸಪ್ಲೈ ಮಾಡಿರುವ ಆರೋಪ ಇದೆ. 2021, 22, 23ನೇ ಸಾಲಿನ ಮೂರು ವರ್ಷದ ಖರ್ಚು ವೆಚ್ಚಗಳ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು ವರದಿ ಪಡೆಯುತ್ತೇನೆ ಎಂದು ತಿಳಿಸಿದರು.
ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಅಕೌಂಟೆಂಟ್ ಜನರಲ್ ಅವರು ಯಾವುದೇ ಮಾನದಂಡ ಪಾಲಿಸದೇ ಪರ್ಚೇಸಿಂಗ್ ಬಿಲ್ಲಿಂಗ್ ಟೆಂಡರ್ ಮಾಡಿದ್ದಾರೆ ಮತ್ತು ಡೂಪ್ಲಿಕೇಟ್ ಬಿಲ್, ಮಾರ್ಕೆಟ್ ರೇಟ್‌ಗಿಂತ ಹೆಚ್ಚಿನ ದರಕ್ಕೆ ಮೆಟಿರಿಯಲ್ ಸಪ್ಲೈ ಆರೋಪ ಇದೆ. ಅಂದಾಜು 500 ಕೋಟಿ ರೂ. ಅವ್ಯವಹಾರ ಕಂಡು ಬಂದಿದೆ. ಆಡಿಟ್ ರಿಪೋರ್ಟ್ನಲ್ಲಿ 300 ಕೋಟಿ ರೂ. ಆಡಿಟ್ ಅಬ್‌ಜಕ್ಷನ್ ಇದೆ. ನಾಲ್ಕು ವರ್ಷದ ಆಡಿಟ್ ರಿಪೋರ್ಟ್ ಮಾಡಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಿದ್ದು, ರಿಪೋರ್ಟ್ ಆಧಾರದ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡರೆ ಇವರೇ ಕಾರಣ..!
ದಯಾಮರಣ ಕೋರಿ ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಸದಸ್ಯರು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ, ವೆಂಡರ್ಸ್‌ಗಳ ಬಾಕಿ ಬಿಲ್ ಪಾವತಿ ಮಾಡುತ್ತಿಲ್ಲ. ಒಂದು ವರ್ಷದಿಂದ ತನಿಖೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. 400 ರಿಂದ 500 ವೆಂಡರ್ಸ್‌ಗಳಿಗೆ ಬಿಲ್ ಪಾವತಿ ಬಾಕಿ ಇಡಲಾಗಿದೆ. ನಮ್ಮ ಕಷ್ಟವನ್ನು ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಆಲಿಸುತ್ತಿಲ್ಲ. ಯಾರಾದರೂ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡರೆ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ, ಕಿಯೋನಿಕ್ಸ್ ಸಿಇಓ ಪವನ್ ಕುಮಾರ್, ಕಿಯೋನಿಕ್ಸ್ ಹಣಕಾಸು ವಿಭಾಗದ ನಿಶ್ಚಿತ್ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
In what could snowball into another controversy involving IT-BT minister Priyank Kharge, vendors associated with state-run Karnataka State Electronics Development Corporation (Keonics) have written to President Droupadi Murmu, Prime Minister Narendra Modi and governor Thaawar Chand Ghelot, requesting permission to be ‘euthanised' since dues have not been paid for 18 months now.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm