ಬ್ರೇಕಿಂಗ್ ನ್ಯೂಸ್
15-01-25 06:37 pm Mangaluru Correspondent ಕರ್ನಾಟಕ
ಮಂಗಳೂರು, ಜ.16: ಜನವರಿ 18ರಿಂದ 22ರ ವರೆಗೆ ನಡೆಯಲಿರುವ ಮಂಗಳೂರು ಫುಡ್ ಫೆಸ್ಟಿವಲ್ ಗೆ ಸೋಶಿಯಲ್ ಮೀಡಿಯಾದಲ್ಲಿ ಹೆಸರು ಪಡೆದಿರುವ ನಾಗಪುರ ಮೂಲದ ಡಾಲಿ ಚಾಯ್ ವಾಲ ಆಗಮಿಸಲಿದ್ದಾರೆ.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಜನವರಿ 18 ರಿಂದ 22ರ ವರೆಗೆ ಐದು ದಿನಗಳ ಕಾಲ ನಗರದಲ್ಲಿ “ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ’ ನಡೆಯಲಿದೆ. ಮೊದಲ ದಿನದ ಆಕರ್ಷಣೆಯಾಗಿ ಡಾಲಿ ಚಾಯ್‌ವಾಲ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋ ವೈರಲ್ ಆಗಿದ್ದು, ಜನವರಿ 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. “ಮಜಾ ಕರೇಂಗೆ .. ಚಾಯ್ ಪಿಯೇಂಗೆ’ ಎಂದು ಪೋಸ್ಟ್ ಮಾಡಿದ್ದಾರೆ.
ಡಾಲಿ ಚಾಯ್ ವಾಲಾ ತನ್ನ ವಿಶಿಷ್ಟ ಶೈಲಿಯ ಚಹಾ ತಯಾರಿಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಕೋಲಿನಂತಿರುವ ಸಪೂರ ಶರೀರ, ಕೋಟ್ ಧರಿಸಿ ಕೊರಳಿಗೆ ಗೋಲ್ಡ್ ಚೈನ್ ಹಾಕಿ ಮಿರುಗುವ ಈತನ ಚುರುಕಿನ ನಡೆ, ಎತ್ತರದಿಂದ ಚಹಾವನ್ನು ಗ್ಲಾಸಿಗೆ ಸುರಿಯುವ ಶೈಲಿಗೆ ಜನ ಮಾರು ಹೋಗಿದ್ದಾರೆ. ಹಾಲಿನ ಪ್ಯಾಕೆಟ್ ಬಿಚ್ಚಿ ಒಲೆಯಲ್ಲಿಟ್ಟ ಟೀ ಪಾಟ್ ಗೆ ಸುರಿಯೋದು, ಅದನ್ನು ಎರಡು ಕೈಯಲ್ಲಿ ಗ್ರಾಹಕರಿಗೆ ಕೊಡುವುದು ಆಕರ್ಷಕ. ಇದೇ ಕಾರಣಕ್ಕೆ ಈತನ ವಿಡಿಯೋ ಫೇಸ್ಬುಕ್, ಇನ್ ಸ್ಟಾ ಸೇರಿದಂತೆ ಜಾಲತಾಣದಲ್ಲಿ ಸಕತ್ ಫೇಮಸ್.
ಅಂದಹಾಗೆ, ಈತನ ನಿಜ ಹೆಸರು ಸುನಿಲ್ ಪಟೇಲ್ ಅಂತ. ವಿಶಿಷ್ಟ ರೀತಿಯ ಚಹಾ ಸರ್ವ್ ನಿಂದಲೇ ಟ್ರೆಂಡ್ ಸೆಟ್ ಮಾಡಿರುವ ಈತ ಡಾಲಿ ಚಾಯ್ ವಾಲಾ ಎಂದೇ ಫೇಮಸ್ ಆಗಿದ್ದಾನೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಈತನ ಚಹಾಕ್ಕೆ ಫ್ಯಾನ್ ಆಗಿದ್ದಾರೆ. ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಡಾಲಿ ಅವರ ಚಹಾ ಅಂಗಡಿಗೆ ಭೇಟಿ ಕೊಟ್ಟು ಚಹಾ ಕುಡಿದು ಪೋಸ್ಟ್ ಹಾಕಿದ್ದರು. ಇದರ ಬಳಿಕ ಡಾಲಿ ಚಾಯ್‌ವಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರು ತನ್ನ ಚಹಾ ತಯಾರಿಸುವ ಬಗ್ಗೆ ಫೇಸ್ಬುಕ್ ವಿಡಿಯೋ ಹಾಕುತ್ತಿದ್ದು ಭಾರೀ ಸಂಖ್ಯೆಯಲ್ಲಿ ಜನರು ಫಾಲೋ ಮಾಡುತ್ತಿದ್ದಾರೆ.
Dolly Chaiwala from Nagpur to visit Mangalore on 18th of jan 22nd for food festival that will be held in the city.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm