ಬ್ರೇಕಿಂಗ್ ನ್ಯೂಸ್
16-01-25 05:30 pm HK News Desk ಕರ್ನಾಟಕ
ಗದಗ, ಜ 16: ಪ್ರೀತಿ, ಪ್ರೇಮ ವಿಚಾರವಾಗಿ 15 ವರ್ಷದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಣಗಾರ ಕಾಲೋನಿಯಲ್ಲಿ ನಡೆದಿದೆ.
9ನೇ ತರಗತಿ ಓದುತ್ತಿದ್ದ ಖುಷಿ ಆತ್ಮಹತ್ಯೆಗೆ ಶರಣಾದ ಬಾಲಕಿ. ಯಾರು ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿದ್ಯಾರ್ಥಿಗಳಾದ 18 ವರ್ಷದ ಮುತ್ತುರಾಜ್ ಮ್ಯಾಗೇರಿ ಹಾಗೂ 19 ವರ್ಷದ ಜುನೇದಸಾಬ್ ಕಂದಗಲ್ ಇವರಿಬ್ಬರ ಲವ್ ಕಿರುಕುಳದಿಂದ ಖುಷಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಇಬ್ಬರು ಸೇರಿ ಖುಷಿಯನ್ನ ಲವ್ ಮಾಡ್ತಿದ್ದರು. ಈ ವಿಷಯ ಗೊತ್ತಾಗಿ ಇಬ್ಬರಿಗೂ ತಾಕೀತು ಮಾಡಲಾಗಿತ್ತು. ಆದರೂ ಇಬ್ಬರು ಆಗಾಗ ಭೇಟಿಯಾಗಿ ಮಾತನಾಡಿ ಟಾರ್ಚರ್ ನೀಡುತ್ತಿದ್ದರು. ಈ ಟಾರ್ಚರ್‌ನಿಂದ ಬೇಸತ್ತು ಬಾಲಕಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ.
ವಿದ್ಯಾರ್ಥಿಗಳಾದ ಜಿನೇದಸಾಬ್ ಹಾಗೂ ಮುತ್ತುರಾಜ್ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ರೋಣ ಸಿಪಿಐ ಹಾಗೂ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಕಳಕಪ್ಪ ಬಂಡಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಒಟ್ಟಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
A 15-year-old girl committed suicide by hanging herself at home over a love issue in Banagara Colony in Gajendragad town of the district.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
16-01-25 03:54 pm
Mangalore Correspondent
Mangalore, MP Brijesh Chowta: ಪಾಕಿಸ್ತಾನಕ್ಕೆ ಜ...
16-01-25 12:58 pm
Udupi Yakshagana News, Police ಅನುಮತಿ ಇಲ್ಲದೆ ರ...
15-01-25 10:47 pm
Banner, Nalin Kumar Kateel, D V Sadananda Gow...
15-01-25 08:01 pm
Mangalore crime, Jail; ಮಂಗಳೂರಿನ ಜೈಲಿನಲ್ಲಿ ಕೈದ...
15-01-25 12:09 pm
16-01-25 03:10 pm
HK News Desk
Fake Stock Market scam, Mangalore, Police: ನಕ...
15-01-25 11:06 pm
Kerala rape News: ಇನ್ಸ್ಟಾಗ್ರಾಂನಲ್ಲಿ ಪರಿಚಯ, ರ...
14-01-25 10:40 pm
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm