ಬ್ರೇಕಿಂಗ್ ನ್ಯೂಸ್
31-01-25 08:03 pm HK News Desk ಕರ್ನಾಟಕ
ಚಿತ್ರದುರ್ಗ, ಜ.31: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ದಿನೇ ದಿನೇ ಜೋರಾಗ್ತಾ ಇದ್ದು, ಇದೀಗ ಸಂಸದ ಡಾ. ಕೆ ಸುಧಾಕರ್ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಾತಿ ಬಳಿಕ ಬಿವೈ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಬಗ್ಗೆ ಬಿಜೆಪಿಯ ಯತ್ನಾಳ್ ಬಣ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿದಾಗಿನಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಅಲ್ಲದೇ ವಿವಿಧ ಸಮಾಜದ ಮುಖಂಡರು ಕೂಡಾ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಧ್ವನಿಯೆತ್ತುತ್ತಲೇ ಇದ್ದರು. ಇದೀಗ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವಿನ ಜಟಾಪಟಿ ಕೂಡಾ ತಣ್ಣಗಾಗಿದ್ದು ಮಾಧ್ಯಮದ ಮುಂದೆ ಬಿಜೆಪಿ ಪಕ್ಷದ ಬಗ್ಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ.
ಚಿತ್ರದುರ್ಗದಲ್ಲಿ ಮಾಜಿ ಸಚಿವ ಶ್ರೀರಾಮುಲು ಮಾತನಾಡಿದ್ದು, ಈ ವೇಳೆ ಶ್ರೀರಾಮುಲು ದೆಹಲಿ ಹೈಕಮಾಂಡ್ ಭೇಟಿ ವಿಚಾರ, ರಾಜ್ಯಾಧ್ಯಕ್ಷ ಸ್ಥಾನ, ಬಿಜೆಪಿ ಬಿಟ್ಟು ಹೋಗುತ್ತಾರಾ? ಇಲ್ವಾ? ಎಂಬ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ BJP ಪಕ್ಷ ಬಿಡಲ್ಲ;
ದೆಹಲಿ ಹೈಕಮಾಂಡ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ್ದು, ದೆಹಲಿ ಚುನಾವಣೆ ಇರುವ ಕಾರಣ ಹೈಕಮಾಂಡ್ ಭೇಟಿ ತಡವಾಗಿದೆ. ಪಾರ್ಲಿಮೆಂಟ್ ಕೂಡಾ ಆರಂಭವಾಗಿರುವ ಕಾರಣ ತಡವಾಗಿದೆ. ಸಮಯ ನೋಡಿಕೊಂಡು ಹೋಗಿ ಎಲ್ಲಾ ವಿಚಾರ ತಿಳಿಸುತ್ತೇನೆ. ಬಿಜೆಪಿಯಲ್ಲಿ ನಾನು ತುಂಬಾ ವರ್ಷ ಸೀನಿಯರ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಈ ವೇಳೆ ಚಾಮರಾಜನಗರದಿಂದ ಬೀದರ್ ವರೆಗೂ ಜನ ತುಂಬಾನೇ ಪ್ರೀತಿ ತೋರಿದ್ದಾರೆ. ಮೊನ್ನೆ ಸಣ್ಣ ಘಟನೆ ನಡೆದಾಗ ಕೂಡಾ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರು ಬೆಂಬಲ ಸೂಚಿಸಿ, ರಾಮುಲು ಅವರು ಅಧಿಕಾರ ಇಲ್ಲ ಎಂಬ ಕಾರಣಕ್ಕೆ ಬಿಟ್ಟು ಕೊಡಬಾರ್ದು ಎಂದು ಬೆಂಬಲಿಸಿದ್ದಾರೆ. ರಾಜಕಾರಣದಲ್ಲಿ ನಾನು BJP ಯಲ್ಲಿ ಇದ್ದೇನೆ. ಒಬ್ಬರಿಗೆ ನೋವಾದಾಗ ಬೇರೆ ಪಕ್ಷದವರು ಕರೆಯೋದು ಸಹಜ, ಎಲ್ಲಾ ಸ್ನೇಹಿತರು ಕೂಡಾ ಆಹ್ವಾನಿಸಿದ್ದಾರೆ, ಅದು ಅವರ ದೊಡ್ಡ ಗುಣ. ಆದರೆ ನಾನು ಯಾವುದೇ ಕಾರಣಕ್ಕೂ BJP ಪಕ್ಷ ಬಿಡಲ್ಲ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಪಕ್ಷ ಗಟ್ಟಿಯಾಗಬೇಕಿದೆ. ಜನರ ಜೊತೆ ಇದ್ದು ರಾಜಕಾರಣ ಮಾಡುವುದು ಮುಖ್ಯವಾಗಿದೆ. ಇವತ್ತು ನನಗೆ ಕೆಲಸ ಇಲ್ಲ, ಆದರೆ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದೇನೆ. ಇನ್ನು ನನಗೆ ಯಾವುದೇ ಸ್ಥಾನ ಕೊಟ್ಟರು ಕೆಲಸ ಮಾಡುತ್ತೇನೆ. ಯಾರ್ಯಾರ ಶಕ್ತಿ ಎಷ್ಟು ಸಾಮರ್ಥ್ಯ ಎಂದು ಪಕ್ಷದಲ್ಲಿ ತೂಕ ಹಾಕಿದ್ದಾರೆ. ಅದೇ ರೀತಿ ರಾಮುಲು ಶಕ್ತಿ ಕೂಡ ಎಷ್ಟು ತೂಕ ಎಂದು ಫಿಕ್ಸ್ ಆಗಿದೆ. ರಾಜ್ಯಾಧ್ಯಕ್ಷ ಹುದ್ದೆ ಯತ್ನಾಳ್ ಆಗಬೇಕು, ರಾಮುಲು ಆಗಬೇಕು, ವಿಜಯೇಂದ್ರ ಆಗಬೇಕು ಎಂದಿದ್ದಾರೆ. ಈ ಎಲ್ಲ ಶಕ್ತಿ ಕುರಿತು ಚರ್ಚೆ ನಡೆಯುತ್ತಿದೆ, ನಾನು ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡುತ್ತೇನೆ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ಯಾವುದೇ ಸ್ಥಾನ ಕೊಟ್ಟರೂ ಕೆಲಸ ಮಾಡುತ್ತೇನೆ ;
ಇನ್ನು ಬಿಜೆಪಿ ಪಕ್ಷದಲ್ಲಿ ಯಾವುದೇ ಸ್ಥಾನ ಕೊಟ್ಟರೂ ಕೆಲಸ ಮಾಡುತ್ತೇನೆ, ಆಕಸ್ಮಿಕವಾಗಿ ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕರೂ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ರಾಜಕಾರಣದಲ್ಲಿ ಲೈಮ್ ಲೈಟ್‌ನಲ್ಲಿ ಇರ್ಬೇಕು. ನನಗೆ ಅವಕಾಶ ಇದ್ದರೆ ಕೆಲಸ ಕೊಡಿ ಎಂದು ಕೇಳುತ್ತೇನೆ.
Sriramulu targets on BJP president post, says will work gretaly if given. I can manage any post well also I can greatly manage president post of BJP, no matter what but will not quit BJP party he added.
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
13-03-25 09:20 pm
Mangalore Correspondent
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
Diganth Missing case, Reunite with family: 17...
12-03-25 10:16 pm
13-03-25 06:44 pm
Mangalore Correspondent
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm