ಬ್ರೇಕಿಂಗ್ ನ್ಯೂಸ್
01-02-25 05:12 pm HK News Desk ಕರ್ನಾಟಕ
ಮೈಸೂರು, ಫೆ.1: ಕರ್ನಾಟಕದ ಹಿತದೃಷ್ಟಿಯಿಂದ ನಿರಾಶದಾಯಕ, ದೂರದೃಷ್ಟಿ ಇಲ್ಲದ ಬಜೆಟ್. ಆಂಧ್ರ, ಬಿಹಾರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮೋದಿ ಸರ್ಕಾರ ಕರ್ನಾಟಕಕ್ಕೆ ಖಾಲಿ ಚೆಂಬು ಕೊಡೋದನ್ನ ಮುಂದುವರೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಮೈಸೂರಿನ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಜೆಟ್ ಪೂರ್ವಭಾವಿ ಚರ್ಚೆಯಲ್ಲಿ ನನ್ನನ್ನು ಕರೆದಿದ್ದರು. ಕೃಷ್ಣ ಭೈರೇಗೌಡರನ್ನ ಕಳುಹಿಸಿದ್ದೆ. ಬಜೆಟ್ ನಲ್ಲಿ ಅನೇಕ ಬೇಡಿಕೆಗಳನ್ನು ಇಟ್ಟಿದ್ದೆವು. ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಇದ್ದಾವೇ ಹೊರತು ಒಂದನ್ನೂ ಈಡೇರಿಸಿಲ್ಲ. ಈ ವರ್ಷ 50 ಲಕ್ಷದ 65 ಸಾವಿರದ 345 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷ 48 ಲಕ್ಷದ 20 ಸಾವಿರ ಕೋಟಿ ಮಾಡಿದ್ದರು. 1 ಲಕ್ಷದ 4 ಸಾವಿರ ಕೋಟಿ ಕಡಿಮೆ ಬಜೆಟ್ ಮಂಡಿಸಿದ್ದಾರೆ. ತೆರಿಗೆ ಅಂದಾಜಿನಷ್ಟು ಕಲೆಕ್ಟ್ ಮಾಡಿದ್ರೆ ರಿವೈಜ್ ಬಜೆಟ್ ಆಗ್ತಾ ಇರಲಿಲ್ಲ. ಈ ಬಜೆಟ್ ಗಾತ್ರದಲ್ಲಿ ಹಿಂದಿಗಿಂತ ಕಿರಿದಾಗಿದೆ. ಕೇಂದ್ರ ಸಾಲ ತಗೊಂಡಿರೋದು 15 ಲಕ್ಷದ 68 ಸಾವಿರದ 936 ಕೋಟಿ ರೂಪಾಯಿ. 12 ಲಕ್ಷದ 70 ಸಾವಿರ ಕೋಟಿ ಬಡ್ಡಿ ಪಾವತಿಗೆ ಕೊಟ್ಟಿದ್ದಾರೆ. ದೇಶದ ಮೇಲೆ ಸಾಲ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿ ಸಾಲ ಆಗಿದೆ.
ಬಿಹಾರ, ಆಂಧ್ರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಕರ್ನಾಟಕದ ಮೇಕೆದಾಟು, ಅಪ್ಪರ್ ಭದ್ರಾ ಸೇರಿದಂತೆ ಹಲವು ಯೋಜನೆಗಳಿಗೆ ಹಣವನ್ನೇ ಕೊಟ್ಟಿಲ್ಲ.. ಅಪ್ಪರ್ ಭದ್ರಾಗೆ 5,300 ಕೋಟಿ ಕೊಡ್ತೀವಿ ಅಂತ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇಲ್ಲಿವರೆಗೆ ಒಂದು ರೂಪಾಯಿ ಬಂದಿಲ್ಲ. ಈ ಬಜೆಟ್ ನಲ್ಲೂ ಪ್ರಸ್ತಾಪ ಇಲ್ಲ. ಬಸವರಾಜ ಬೊಮ್ಮಾಯಿ ಬಜೆಟ್ ಮಾಡೋವಾಗ ಭದ್ರಾ ಮೇಲ್ಡಡೆ ಯೋಜನೆಯನ್ನ ರಾಷ್ಟೀಯ ಪ್ರಾಜೆಕ್ಟ್ ಆಗುತ್ತೆ ಅಂತಾ ಹೇಳಿದ್ರು. ಯಾಕೆ ಘೋಷಣೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಒಣ ಭೂಮಿ ಹೆಚ್ಚಿದೆ. ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ಲ, ನೀರಾವರಿ ಯೋಜನೆಗಳ ಪ್ರಸ್ತಾವನೆಯೂ ಇಲ್ಲ. ರಾಯಚೂರಿನಲ್ಲಿ ಏಮ್ಸ್ ಘೋಷಣೆ ಮಾಡ್ತಾರೆ ಅಂತಾ ಅಂದುಕೊಂಡಿದ್ದೆ. ಕೇಂದ್ರ ಸಚಿವರು ಭರವಸೆ ಕೊಟ್ಟಿದ್ದರು, ಆ ಪ್ರಸ್ತಾವನೆ ಕೂಡ ಇಲ್ಲ. ರಾಜ್ಯದ ನಗರಗಳ ಕುಡಿಯವ ನೀರಿನ ಯೋಜನೆ, ಗ್ರಾಮೀಣ ಪ್ರದೇಶಗಳಿಗೆ, ರೈಲ್ವೇ ಹೆದ್ದಾರಿಗೆ ಹಣ ಒದಗಿಸಲು ಕೇಳಿದ್ದೆವು. ಅದನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳಿಗೆ, ರಾಜಕಾಲುವೆ ನಿರ್ಮಾಣ, ಬ್ಯುಸಿನೆಸ್ ಕಾರಿಡಾರ್ ಮಾಡಲು ಹಣ ಕೇಳಿದ್ದೆವು. ಅವ್ರು ಕೊಟ್ಟಿರೋದು ಖಾಲಿ ಚೆಂಬು ಮಾತ್ರ.
ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಕೇಳಿದ್ದೇವು, ಒಂದು ರೂಪಾಯಿ ಕೊಟ್ಟಿಲ್ಲ. ವಸತಿ ಯೋಜನೆಗಳಿಗೆ ಕೇಂದ್ರ ಒಂದು ಲಕ್ಷ ಕೊಡ್ತಿದ್ದಾರೆ. 5 ಲಕ್ಷಕ್ಕೆ ಹೆಚ್ಚಿಸಲು ಕೇಳಿದ್ದೆವು, ಅದನ್ನ ಮಾಡಿಲ್ಲ. ಗ್ರಾಮೀಣ ಭಾಗದಲ್ಲಿ 72 ಸಾವಿರ ಕೊಡ್ತಾರೆ, 3 ಲಕ್ಷಕ್ಕೆ ಏರಿಕೆಗೆ ಕೇಳಿದ್ದೆವು, ಅದನ್ನೂ ಮಾಡಿಲ್ಲ ಎಂದು ಲೆಕ್ಕಪತ್ರ ಸಹಿತ ರಾಜ್ಯ ಹಣಕಾಸು ಸಚಿವರೂ ಸಿದ್ದರಾಮಯ್ಯ ಕೇಂದ್ರ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Ahead of the Budget presentation 2025, Karnataka Chief Minister Siddaramaiah has submitted state's list of demands to the Union Government.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm