BY Vijayendra: ನಾನೇ ಮತ್ತೆ ಅಧ್ಯಕ್ಷನಾಗುತ್ತೇನೆ, 8-10 ದಿನಗಳಲ್ಲಿ ಅಸಮಾಧಾನ ಎಲ್ಲ ಸರಿಯಾಗಲಿದೆ ; ಬಣ ಬಡಿದಾಟದ ಬಗ್ಗೆ ವಿಜಯೇಂದ್ರ 

03-02-25 08:36 pm       HK News Desk   ಕರ್ನಾಟಕ

ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಾನೇ ಮತ್ತೆ ಅಧ್ಯಕ್ಷನಾಗುತ್ತೇನೆ, ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಶಿವಮೊಗ್ಗ, ಫೆ.3: ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಾನೇ ಮತ್ತೆ ಅಧ್ಯಕ್ಷನಾಗುತ್ತೇನೆ, ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಬಿಜೆಪಿಯಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಬೇರೆ ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ. ವ್ಯವಸ್ಥಿತವಾಗಿ ಸಂಘಟನೆ, ಚುನಾವಣೆ ನಡೆಯುತ್ತದೆ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ. ಮಂಡಲ ಮಟ್ಟದಿಂದ ರಾಜ್ಯ ಮಟ್ಟದ ವರೆಗೂ ಆಂತರಿಕ ಚುನಾವಣೆ ನಡೆಯುತ್ತದೆ. ರಾಜ್ಯ, ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಚುನಾವಣೆ ವ್ಯವಸ್ಥಿತವಾಗಿ ನಡೆಯುತ್ತದೆ. ಪಕ್ಷದ ಕಾರ್ಯಕರ್ತರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕಳೆದ ಒಂದು ವರ್ಷದಿಂದ ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಾನು ಯಾವ ರೀತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂಬುದು ಕಾರ್ಯಕರ್ತರಿಗೆ ಮತ್ತು ಪಕ್ಷದ ಮುಖಂಡರಿಗೆ ಗೊತ್ತಿದೆ. 

ನಾನು ಮತ್ತೆ ರಾಜ್ಯದ ಬಿಜೆಪಿ ಅಧ್ಯಕ್ಷನಾಗುತ್ತೇನೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಪಕ್ಷದ ಸಂಘಟನೆಯಲ್ಲಿ ಜಿಲ್ಲಾಧ್ಯಕ್ಷ ಚುನಾವಣೆಗೂ ಪೈಪೋಟಿ ಇತ್ತು. ರಾಜ್ಯಾಧ್ಯಕ್ಷ ಸ್ಥಾನಕ್ಕೂ ಅದೇ ರೀತಿ ಪೈಪೋಟಿ ಇದೆ. ಎಲ್ಲವನ್ನೂ ಕೇಂದ್ರದ ವರಿಷ್ಠರು ಗಮನಿಸುತ್ತಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದು ವಿಜಯೇಂದ್ರ ಹೇಳಿದರು. 

Lok Sabha Elections 2024 news: Sadananda Gowda may quit BJP, confirms he's  got feelers from Congress

ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂಬ ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಏನೇನು ಡ್ಯಾಮೇಜ್ ಆಗಬೇಕೋ ಅವೆಲ್ಲವೂ ಆಗಿ ಹೋಗಿದೆ‌. ಒಂದು ವಾರದಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬುದಕ್ಕೆ ಉತ್ತರವೂ ಸಿಗುತ್ತದೆ. ಅದಾದ ನಂತರ ಎಲ್ಲವೂ ಸರಿಯಾಗಲಿದೆ. ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಯಾರ ವಿರುದ್ಧವೂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಯಾರು ಏನೇ ಹೇಳಿದರೂ ಯಾರ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ಪಕ್ಷದ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ರಾಜ್ಯದ ಅಧ್ಯಕ್ಷನಾಗಿ ಕರ್ತವ್ಯದ ಅರಿವು ನನಗಿದೆ. 8-10 ದಿನಗಳಲ್ಲಿ ರಾಜ್ಯದ ಅಧ್ಯಕ್ಷ ಯಾರೆಂಬುದಕ್ಕೆ ಉತ್ತರ ಸಿಗಲಿದೆ. ಬಳಿಕ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ ಎಂದು ಹೇಳಿದರು. 

ಡೆಪಾಜಿಟ್ ಕಳೆದುಕೊಳ್ಳೋನು ಕೂಡ ತಾನೇ ಗೆಲ್ತೀನಿ ಎನ್ನುತ್ತಾನೆ ! 

Basanagouda Patil Yatnal, senior MLA has been issued a show-cause notice by  BJP Central Disciplinary Committee - The Hindu

ವಿಜಯೇಂದ್ರ ಹೇಳಿಕೆಗೆ ರೆಬಲ್ ಶಾಸಕ ಬಸವನಗೌಡ ಯತ್ನಾಳ್ ಕೌಂಟರ್ ನೀಡಿದ್ದು, ಡೆಪಾಜಿಟ್ ಕಳೆದುಕೊಳ್ಳುವವನು ತಾನೇ ಗೆಲ್ತೀನಿ ಎನ್ನುತ್ತಾನೆ.‌ ನಾವು ನಿಯೋಗ ಸಮೇತ ದೆಹಲಿಗೆ ಹೊರಟಿದ್ದೇವೆ. ತಟಸ್ಥ ಇದ್ದವರು ನಿಷ್ಠಾವಂತ ಆಗಿದ್ದಾರೆ. ತಟಸ್ಥ ಅಂತ ಹೇಳಿ ಎರಡು ಕಡೆಗೆ ಆಟ ಆಡ್ತಾ ಇದ್ದರು. ಅವರೀಗ ಮತಾಂತರ ಆಗಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಮುಂದುವರೆಸಿದ್ರೆ ರಾಜ್ಯದಲ್ಲಿ ಬಿಜೆಪಿ ಉಳಿಯಲ್ಲ ಅಂತ ಗೊತ್ತಾಗಿದೆ ಎಂದು ಹೇಳಿದ್ದಾರೆ. 

DK Shivakumar announces '5 point programme' to improve Bengaluru's  infrastructure | Bengaluru - Hindustan Times

ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಇದೆ. ಡಿಕೆಶಿ ಹೀನಾಯವಾಗಿ ಬೈದರೂ ವಿಜಯೇಂದ್ರ ಪ್ರತಿಕ್ರಿಯೆ ಕೊಡಲಿಲ್ಲ. ಶಾಸಕ ಸ್ಥಾನ ನಾನು ಕೊಟ್ಟ ಭಿಕ್ಷೆ ಎಂದು ಡಿಕೆಶಿ ಹೇಳಿದ್ದಾನೆ. ಯಡಿಯೂರಪ್ಪ ಹಾಗೂ ಮಗನಿಗೆ ಭಯ ಪಡಿಸಿ ಬಿಟ್ಟಿದ್ದಾರೆ. ಹಗರಣ ಹೊರಗೆ ತೆಗೆದರೆ ಪೋಕ್ಸೋ ಇದೆ, ನಕಲಿ ಸೈನ್ ಇದೆ ಎಂದು ಹೆದರಿಸಿದ್ದಾರೆ ಎಂದ ಯತ್ನಾಳ್, ಯಡಿಯೂರಪ್ಪ ಮಗನ ಕರ್ಮಕಾಂಡ ಬಯಲು ಮಾಡಲು ದೆಹಲಿ ಹೊರಟಿದ್ದೇವೆ. ಭ್ರಷ್ಟಾಚಾರಿ ಕುಟುಂಬ ಬೇಕೆ..? ಪ್ರಾಮಾಣಿಕರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಬೇಕೆ..? ಎಂದು ಕೇಳುತ್ತೇವೆ. ಕುಟುಂಬಶಾಹಿ ಬಿಜೆಪಿಯಲ್ಲಿ ಅಂತ್ಯವಾಗಬೇಕು. ಹಿಂದುತ್ವ ಇರುವ ವ್ಯಕ್ತಿಗಳ ಕೈಯ್ಯಲ್ಲಿ ರಾಜ್ಯ ಬಿಜೆಪಿ ನಾಯಕತ್ವ ಕೊಡಬೇಕು ಎಂದು ಹೇಳಿದ್ದಾರೆ.

Amid a factional rift within the party, Karnataka BJP chief BY Vijayendra on Monday expressed confidence about continuing to helm the state unit. He also hoped for a 'happy ending' in the outcome of the state presidential polls