ಬ್ರೇಕಿಂಗ್ ನ್ಯೂಸ್
05-02-25 04:44 pm HK News Desk ಕರ್ನಾಟಕ
ಹುಬ್ಬಳ್ಳಿ, ಫೆ.5: ಡಾಲರ್ ಮುಂದೆ ರೂಪಾಯಿ ದಿನದಿಂದ ದಿನಕ್ಕೆ ಕುಸೀತಾ ಇದೆ. ದೇಶದ ಸಾಲ ಎಷ್ಟಾಗಿದೆ ಅಂತ ಯಾಕೆ ಕೇಳಬಾರದು. 70 ವರ್ಷದಲ್ಲಿ ಆಗಿರೋ ಸಾಲಕ್ಕೆ 3 ಪಟ್ಟು ಕಳೆದ 10 ವರ್ಷದಲ್ಲಿ ಆಗಿದೆ. ಪ್ರಧಾನ ಮಂತ್ರಿ ಮೋದಿ ಒಬ್ಬ ಮನುಷ್ಯನ ತಲೆ ಮೇಲೆ 1 ಲಕ್ಷ ಸಾಲ ಹೊರಿಸಿದ್ದಾರೆ. ಇದು ಸಾಧನೆ ಅಲ್ವಾ? ಎಲ್ಲರಿಗಿಂತ ದೊಡ್ಡ ಸಾಧನೆ ಆಲ್ವಾ ಇದು. ಬಲಿಷ್ಠ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ, ಈಗ ಹೊರ ಬಿದ್ದಿದೆ. ಥೈಲ್ಯಾಂಡ್ ಗೆ ವೀಸಾ ಫ್ರೀ ಅಂದ್ರೆ ಪವರ ಫುಲ್ ಏನ್ರಿ? ಪವರ್ ಫುಲ್ ಇದ್ರೆ ಡಾಲರ್ ಯಾಕೆ ಬೀಳ್ತಾ ಇದೆ, ಕೇಳಿ ಅವರನ್ನ. ಬಿಜೆಪಿ ಹಾಗೂ ಮೋದಿ ತಮ್ಮ ಪಬ್ಲಿಸಿಟಿ ತಗೊಂಡು ದೇಶ ಹಾಳಾಗ್ತಿದೆ. ಪ್ರಲ್ಹಾದ್ ಜೋಶಿ ಅವರನ್ನ ಕರೀರಿ, ಚರ್ಚೆ ಮಾಡೋಣ.. ಹೀಗೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸವಾಲು ಹಾಕಿದ್ದಾರೆ.
ನಮ್ಮ ದೇಶದ ಸಾಲಕ್ಕಿಂತ 20% ಬಡ್ಡಿ ಕಟ್ಟುತ್ತಾ ಇದ್ದೇವೆ. ಬೆಳಗ್ಗೆ ಎದ್ರೆ ಕೇವಲ ಧರ್ಮ, ಜಾತಿ ಬಗ್ಗೆ ಮಾತನಾಡ್ತಾರೆ. ನಾವು ತಲೆ ಕೂದಲು ಎಷ್ಟಿವೆ, ಅಷ್ಟು ದೇವಸ್ಥಾನಗಳನ್ನ ಕಟ್ಟಿದ್ದೇವೆ. 57 ಲಕ್ಷ ಕೋಟಿ ಇದ್ದಿದ್ದ ಸಾಲ ಈಗ 225 ಕೋಟಿ ಲಕ್ಷಕ್ಕೆ ಏರಿಕೆಯಾಗಿದೆ. ಟ್ಯಾಕ್ಸ್ ಕಡಿಮೆ ಮಾಡಿದ್ರಿ ಒಪ್ಕೋಳೋಣ, ಆದ್ರೆ ಜಿಎಸ್ ಟಿ ಯಾಕೆ ಕಮ್ಮಿ ಮಾಡಬಾರದು. ದೇಶದಲ್ಲಿ 60% ಬಡವರೇ ಇದ್ದಾರೆ. ಕೇಂದ್ರ ಸರ್ಕಾರಿ ಅಧೀನದ 27 ಕಂಪನಿಗಳನ್ನು ಮಾರಾಟ ಮಾಡಿದ್ದಾರೆ, ಅವರ ಹತ್ತಿರ ದುಡ್ಡೇ ಇಲ್ಲಾ. ಈಗ ಎಲ್ಲಾ ಖಾಸಗಿ ಕಂಪನಿಗಳಾಗಿವೆ.
ಸತ್ಯ ಹೇಳಬೇಕಂದ್ರೆ ದೆಹಲಿ ಚುನಾವಣೆಯಲ್ಲಿ ನಮ್ಮ ಸರ್ವೇ ಪ್ರಕಾರ ಕಾಂಗ್ರೆಸ್ ಪಕ್ಷ 5-10 ಸ್ಥಾನ ಗೆಲ್ಲುತ್ತೆ. ಆಪ್ ಪಕ್ಷ ಮೊದಲು, ಸೆಕೆಂಡ್ ಬಿಜೆಪಿ ಇದೆ. ರಾಹುಲ್ ಗಾಂಧಿ ಅವರನ್ನ ಇನ್ನೂ ದೇಶದ ಜನ ಅರ್ಥ ಮಾಡ್ಕೊಂಡಿಲ್ಲ. ಅವರ ಫಿಲಾಸಫಿ ಜನರಿಗೆ ಮುಟ್ಟಿಸುವ ಕೆಲಸ ನಾವು ಮಾಡ್ತಿಲ್ಲ. ಪಾರ್ಲಿಮೆಂಟ್ ನಲ್ಲಿ ಬಹಳ ಚೆನ್ನಾಗಿ ಮಾತಾಡಿದ್ದಾರೆ. ಆದ್ರೆ ಅದನ್ನ ತೋರಿಸಲ್ಲ, ಅದರ ಬಗ್ಗೆ ಎಲ್ಲೂ ಚರ್ಚೆ ಇಲ್ಲ. ಬಿಜೆಪಿಯವರ ದೇಶದಲ್ಲಿ ಎಐ ಯಾವ ಲೆವೆಲ್ ನಲ್ಲಿದ್ದೇವೆ. ಚೈನಾಗೆ ಹೋಲಿಸಿಕೊಳ್ಳೋಕೆ ಆಗಲ್ಲ, 10 ವರ್ಷದಲ್ಲಿ ಚೈನಾ ಏನೆಲ್ಲಾ ಮಾಡ್ತು ಎಂದು ನಾವು ಗಮನಿಸಬೇಕಾಗಿದೆ ಎಂದು ಹೇಳಿದರು.
ಬಿಜೆಪಿಯಲ್ಲೂ ಪ್ರಧಾನಿ ಮೋದಿ ಬದಲಾವಣೆ ಮಾತು ಕೇಳಿ ಬರುತ್ತಿದೆ. ದೆಹಲಿಯಲ್ಲಿ ಕೆಲ ಬಿಜೆಪಿ ಸ್ನೇಹಿತರು ನನ್ನ ಬಳಿ ಈ ವಿಚಾರ ಚರ್ಚೆ ಮಾಡಿದ್ದಾರೆ. ಪ್ರಧಾನಿ ಮೋದಿ ಬದಲಾವಣೆ ಮಾತು ಪ್ರಬಲವಾಗಿ ಚರ್ಚೆ ಆಗುತ್ತಿದೆ. ಆದರೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇದೆ, ಮೋದಿ ಪ್ರಶ್ನೆ ಮಾಡಲು ಧೈರ್ಯ ಇಲ್ಲ. ಬಿಜೆಪಿಯಲ್ಲಿ ಒಳಗೊಳಗೆ ಮೋದಿ ಬದಲಾವಣೆ ಬಗ್ಗೆ ಚರ್ಚೆ ಆಗ್ತಿದೆ ಎಂದು ಲಾಡ್ ಹೇಳಿದ್ದಾರೆ.
NDA ಅಂದ್ರೆ ನೋ ಡಾಟಾ ಅವೈಲೇಬಲ್ ಎಂದು ಹೊಸ ವ್ಯಾಖ್ಯಾನ ಕೊಟ್ಟ ಸಂತೋಷ್ ಲಾಡ್, ಕಳೆದ ಹತ್ತು ವರ್ಷಗಳಿಂದ ದೇಶದ ಜನರಿಗೆ ಯಾವ ಡಾಟಾನೂ ಇಲ್ಲದಂತಾಗಿದೆ ಎಂದರು. ಸಿಎಂ ಬಜೆಟ್ ತಯಾರಿ ಮಾಡ್ತಾ ಇದ್ದಾರೆ, ಎಲ್ಲಾ ಇಲಾಖೆ ಅವರನ್ನ ಕರೀತಾ ಇದ್ದಾರೆ. ಎಲ್ಲಾ ಸಚಿವರಿಗೂ ಅವಕಾಶ ಕೊಡ್ತಾ ಇದ್ದಾರೆ. ಅವರು ತಮ್ಮ ಕೆಲಸದಲ್ಲಿ ಬಿಝಿ ಇದ್ದಾರೆ ಎಂದು ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Minister Lad Slams on PM Modi says he's burdened every citizen with 1 lakh loan on head. Why shouldn't we ask what is the debt of the nation when the rupees rate has drastically fallen down he slammed.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm