ಬ್ರೇಕಿಂಗ್ ನ್ಯೂಸ್
07-02-25 11:00 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.8: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಶತಪ್ರಯತ್ನ ನಡೆಸುತ್ತಿರುವ ಬಂಡಾಯ ನಾಯಕರಿಗೆ ದೆಹಲಿ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಕೇಂದ್ರ ನಾಯಕರನ್ನು ಭೇಟಿಯಾಗಿ ದೂರು ಕೊಡುತ್ತೇವೆಂದು ಹೋದವರಿಗೆ ದೊಡ್ಡಣ್ಣಂದಿರು ಭೇಟಿಗೆ ಸಿಕ್ಕಿಲ್ಲ. ಹೀಗಾಗಿ ರೆಬೆಲ್ ನಾಯಕರು ದೆಹಲಿಯಲ್ಲೇ ಠಿಕಾಣಿ ಹೂಡಿದ್ದು ಫೆ.10ರಂದು ಸಚಿವ ಸೋಮಣ್ಣ ನೇತೃತ್ವದಲ್ಲಿ ಲಿಂಗಾಯತ ನಾಯಕರ ಸಭೆ ನಡೆಸಲು ಮುಂದಾಗಿದ್ದಾರೆ.
ಲಿಂಗಾಯತ ಸಮುದಾಯದ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊರಗಿಟ್ಟು ನವದೆಹಲಿಯಲ್ಲಿ ಪಕ್ಷದ ಪ್ರಮುಖ ನಾಯಕರನ್ನು ಒಟ್ಟು ಸೇರಿಸಿ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಅವರ ಸರ್ಕಾರಿ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ಫೆ.10ರಂದು ದೆಹಲಿಯಲ್ಲಿ ನಿಗದಿಯಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ರೆಬೆಲ್ ಬಣದಲ್ಲಿ ಗುರುತಿಸಿಕೊಂಡ ಲಿಂಗಾಯತ ನಾಯಕರು ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಆಮೂಲಕ ರೆಬೆಲ್ ನಾಯಕರ ಗುಂಪಿಗೆ ಸೋಮಣ್ಣ ಅವರನ್ನು ಸೆಳೆಯುವುದಕ್ಕೂ ಪ್ರಯತ್ನ ನಡೆದಿದೆ.
ಈ ಹಿಂದೆ ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೇರುವ ಮುನ್ನ ಸೋಮಣ್ಣ ಕೂಡ ರಾಜ್ಯಾಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದರು. ಅಲ್ಲದೆ, ಯಡಿಯೂರಪ್ಪ ಅವರೊಂದಿಗೂ ವೈಮನಸ್ಸು ಹೊಂದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದರಿಂದ ತನ್ನ ಸೋಲಿಗೆ ಪಕ್ಷದ ನಾಯಕರೇ ಕಾರಣ ಎಂದೂ ಟೀಕೆ ಮಾಡಿದ್ದರು. ಆನಂತರ ಸಂಸತ್ ಚುನಾವಣೆ ಸ್ಪರ್ಧಿಸಿ ಗೆಲ್ಲುವ ಮೂಲಕ ಕೇಂದ್ರ ನಾಯಕರ ಗಮನ ಸೆಳೆದಿದ್ದರು. ಯಡಿಯೂರಪ್ಪ ವಿರೋಧಿ ಎನ್ನುವ ಅಸ್ತ್ರವನ್ನೇ ಮುಂದಿಟ್ಟು ಸೋಮಣ್ಣ ಅವರನ್ನು ತಮ್ಮತ್ತ ಸೆಳೆಯಲು ಬಂಡಾಯ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ.
ಧಾರ್ಮಿಕ ಮಠಗಳ ಬೆಂಬಲದ ಜೊತೆಗೆ ಲಿಂಗಾಯತ ಸಮುದಾಯದಲ್ಲಿ ಪ್ರಬಲ ನಾಯಕರೂ ಆಗಿರುವ ಸೋಮಣ್ಣ ಅವರನ್ನು ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಮನವೊಲಿಸುವ ಸಾಧ್ಯತೆಗಳಿವೆ. ಇದೇ ಕಾರಣಕ್ಕೆ ಯತ್ನಾಳ್ ಸೇರಿದಂತೆ ಲಿಂಗಾಯತ ನಾಯಕರು ದೆಹಲಿ ಮಟ್ಟದಲ್ಲೇ ಮತ್ತೊಂದು ಸುತ್ತಿನ ಗೆರಿಲ್ಲಾ ಯುದ್ಧಕ್ಕೆ ರಣತಂತ್ರ ಹೂಡಿದ್ದಾರೆಂದು ಹೇಳಲಾಗುತ್ತಿದೆ. ಇದರ ಭಾಗ ಎನ್ನುವಂತೆ, ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿದ್ದ ರೆಬಲ್ ನಾಯಕರು ಪಕ್ಷದ ಬೆಳವಣಿಗೆ ಬಗ್ಗೆ ಮಾತುಕತೆ ನಡೆಸಿದ್ದರು.
ಒಂದು ವೇಳೆ, ಸೋಮಣ್ಣ ರಾಜ್ಯ ಘಟಕದ ಅಧ್ಯಕ್ಷರಾಗಲು ಒಪ್ಪಿದರೆ, ಬೊಮ್ಮಾಯಿ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಬಹುದು ಎಂದೂ ಬೊಮ್ಮಾಯಿ ಕಿವಿ ತುಂಬಿದ್ದಾರೆ. ಆದರೆ ಕೇಂದ್ರ ಸಚಿವ ಸ್ಥಾನದಲ್ಲಿರುವ ಸೋಮಣ್ಣ ಪಕ್ಷದ ರಾಜ್ಯ ಉಸ್ತುವಾರಿಯ ಕಿರಿ ಕಿರಿಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಇದೇ ವೇಳೆ, ಮಾಧ್ಯಮದ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿರುವ ಸೋಮಣ್ಣ, ಕಚೇರಿ ಉದ್ಘಾಟನೆಗೆ ಪಕ್ಷದ ನಾಯಕರನ್ನು ಆಹ್ವಾನಿಸಿದ್ದೇನೆ. ಬಂಡಾಯ ನಾಯಕರಿಗೆ ಆಹ್ವಾನ ನೀಡಿದ್ದೇನೆಂಬುದು ತಪ್ಪು ಕಲ್ಪನೆ. ಪಕ್ಷದ ಹೈಕಮಾಂಡ್ ಏನು ಹೇಳಿದರೂ, ಪಾಲಿಸುತ್ತೇನೆಂದು ಹೇಳಿದ್ದಾರೆ. ಆಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೂ ರೆಡಿ ಎನ್ನುವ ಸುಳಿವು ನೀಡಿದ್ದಾರೆಯೇ ಎಂಬ ಗುಮಾನಿ ಹರಡಿದೆ.
In an effort to challenge the leadership of Karnataka Bharatiya Janata Party (BJP) president BY Vijayendra, the rebel faction within the party is aggressively mobilising support. Leaders aligned with the rebel camp have been frequenting New Delhi to sway Union Minister of State for Railways and Jal Shakti V Somanna, to their cause. Rebel leaders are now looking to Union Minister V Somanna for support, with a crucial meeting planned in New Delhi on February 10.
27-11-25 10:23 pm
HK News Desk
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗೆ ರೆಡಿಯಾಗುತ್ತಿದ...
27-11-25 08:14 pm
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ; ಕುಟುಂಬಸ...
27-11-25 06:30 pm
ಕಾಂಗ್ರೆಸ್ ಕಚ್ಚಾಟದಲ್ಲಿ ಯಾರು ಹೊರಬಂದರೂ ಬಿಜೆಪಿ ಬೆ...
27-11-25 04:27 pm
ಹೊಸಕೋಟೆ ಬಳಿ KSRTC ಬಸ್ ಹಾಗೂ ಕ್ಯಾಂಟರ್ ನಡುವೆ ಭೀ...
27-11-25 12:56 pm
26-11-25 07:16 pm
HK News Desk
ಅಯೋಧ್ಯೆಯಲ್ಲಿ ಹತ್ತಡಿ ಎತ್ತರದ ಬೃಹತ್ ಭಗವಾಧ್ವಜ ಅನಾ...
25-11-25 04:30 pm
ಚೆನ್ನೈ ; ಎರಡು ಖಾಸಗಿ ಬಸ್ಗಳ ನಡುವೆ ಅಪಘಾತ, 6 ಮಂದ...
24-11-25 10:04 pm
ಬಾಲಿವುಡ್ ಚಿತ್ರರಂಗದ ದಂತಕಥೆ, 'ಹೀ ಮ್ಯಾನ್' ಖ್ಯಾತ...
24-11-25 03:37 pm
Explosives Gelatin Sticks, High Alert in Utta...
23-11-25 09:21 pm
26-11-25 07:21 pm
Mangalore Correspondent
ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ ವರೆಗೆ ಮೋದಿ ರೋಡ್ ಶ...
26-11-25 03:34 pm
ಪ್ರಧಾನಿ ಮೋದಿ ಆಗಮನದಿಂದ ಸಂಚಾರ ತೊಡಕು ; ನ.28ರಂದು...
25-11-25 10:51 pm
ಪುಸ್ತಕ ಮೇಳದಲ್ಲಿ ಸಾಹಿತಿಗಳ ಗೌರವಕ್ಕಾಗಿ 25 ಸಾವಿರದ...
25-11-25 10:07 pm
ಕ್ಯಾಂಪ್ಕೋ ಆಡಳಿತ ಮಂಡಳಿಗೆ ಚುನಾವಣೆ ; ಸಹಕಾರ ಭಾರತಿ...
25-11-25 09:53 pm
27-11-25 09:14 pm
Mangalore Correspondent
ಹೊರ ಗುತ್ತಿಗೆ ಸಿಬಂದಿ ಸಂಬಳ ಪಾವತಿಗೆ 30 ಸಾವಿರ ಲಂಚ...
27-11-25 09:07 pm
ಧರ್ಮಸ್ಥಳದಲ್ಲಿ ಭಕ್ತರ ಬ್ಯಾಗ್ ನಿಂದ ಚಿನ್ನಾಭರಣ ಕಳವ...
26-11-25 10:43 pm
Mangalore Crime, Ullal Police: 916 ಹಾಲ್ ಮಾರ್ಕ...
26-11-25 06:26 pm
ಲಂಡನ್ ಲೇಡಿಯೆಂದು ಹೇಳಿ ವಂಚನೆ ; 30 ಲಕ್ಷದ ಪೌಂಡ್ಸ್...
26-11-25 02:39 pm