ಬ್ರೇಕಿಂಗ್ ನ್ಯೂಸ್
14-02-25 06:16 pm HK News Desk ಕರ್ನಾಟಕ
ಹಾಸನ, ಫೆ.14 : ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನವನ್ನು ಒದ್ದು ಕಿತ್ಕೊಳೋದು ಹೇಗೆ ಅಂತ ಗೊತ್ತಿದೆ. ಆ ಕಲೆ ಅವರಿಗೆ ಕರಗತವಾಗಿ ಬಂದಿದೆ. ಡಿ.ಕೆ.ಶಿವಕುಮಾರ್ ಸಮಯ ಕಾದು ಒದ್ದು ಕಿತ್ಕೋತಾರೆ. ಸಿಎಂ ಬದಲಾವಣೆ ವಿಚಾರದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಈ ರೀತಿ ಲೇವಡಿ ಮಾಡಿದ್ದಾರೆ.
ಸಕಲೇಶಪುರದಲ್ಲಿ ಮಾತನಾಡಿದ ಅವರು, ಸರ್ಕಾರ ಎಲ್ಲಿದೆ, ಸರ್ಕಾರ ಪಾಪರ್ ಆಗಿದೆ. ಪ್ರತಿದಿನ ಸಿಎಂ ಇರ್ತಾರೋ, ಹೋಗ್ತಾರೋ. ಒಂದು ವರ್ಷದಿಂದ ಇದು ನಡೆಯುತ್ತನೇ ಇದೆ. ವಿರೋಧ ಪಕ್ಷದ ನಾಯಕನಾಗಿ ನನಗೆ ಮಾಹಿತಿ ಇದೆ. ನವೆಂಬರ್ ಡೆಡ್‌ಲೈನ್, ನವೆಂಬರ್ 15, 16 ರೊಳಗೆ ಬದಲಾವಣೆ ಆಗುತ್ತೆ. ಆಗಿಲ್ಲ ಅಂದರೆ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋಟ ಆಗುತ್ತೆ. ಬೆಂಕಿ ಆರಿಸಲು ಅಗ್ನಿಶಾಮಕ ವಾಹನ ಸಾಕಾಗಲ್ಲ. ಅಗ್ನಿಶಾಮಕ ವಾಹನ ಹುಡುಕಿ, ಎಲ್ಲೆಲ್ಲಿವೆ ತರಿಸಿಕೊಂಡು ಈಗಲೇ ರೆಡಿ ಮಾಡಿಕೊಳ್ಳಿ. ಪ್ರಳಯವಂತೂ ಆಗೇ ಆಗುತ್ತೆ, ಜ್ವಾಲಾಮುಖಿ ಸಿಡಿಯುತ್ತೆ. ಆ ಸಂದರ್ಭದಲ್ಲಿ ಅಗ್ನಿಶಾಮಕ ವಾಹನ ಅವಶ್ಯಕತೆ ಇರುತ್ತೆ, ಎಲ್ಲಾ ಈಗಲೇ ಬುಕ್ಕಿಂಗ್ ಮಾಡ್ಕಳಿ ಎಂದು ವ್ಯಂಗ್ಯ ಮಾಡಿದ್ದಾರೆ.
ಹೂಡಿಕೆದಾರರ ಸಮಾವೇಶ ವಿಚಾರದ ಬಗ್ಗೆ, ನಮ್ಮ ರಾಜ್ಯ ಸಮೃದ್ಧಿಯ ಆಗಿತ್ತು. ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪಾಪರ್ ಆಗಿದೆ. ಇಡೀ ಪ್ರಪಂಚದಲ್ಲಿ ಇರುವ ಜನಕ್ಕೆ ಬೆಂಗಳೂರು ಬೇಕು, ಕರ್ನಾಟಕನೇ ಬೇಕು. ಆದರೆ ಇಲ್ಲಿ ಅಭಿವೃದ್ಧಿಯೇ ಇಲ್ವಲ್ಲ. ಬೆಂಗಳೂರು ರಸ್ತೆಗಳೆಲ್ಲಾ ಹಾಳಾಗಿ ಹೋಗಿವೆ, ಗುಂಡಿ ಬಿದ್ದಿವೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತೆ. ಈಗಾಗಲೇ ಹಲವಾರು ಜನ ಖಾಲಿ ಮಾಡಿಕೊಂಡು ಹೈದರಾಬಾದ್, ಚೆನ್ನೈಗೆ ಹೊರಟಿದ್ದಾರೆ.
ಬೆಂಗಳೂರು ಮುಳುಗಿ ಹೋಗಿದೆ, ಇಲ್ಲಿಗೆ ಬನ್ನಿ ಎಂದು ಕೇರಳದವರು ಜಾಹೀರಾತು ಹಾಕಿದ್ದಾರೆ. ಅಭಿವೃದ್ಧಿ ಮಾಡಿದ್ರೆ ಜನ ಬಂದೇ ಬರ್ತಾರೆ. ಕರ್ನಾಟಕದ ಪರವಾಗಿ ಜನ ಬರ್ತಾ ಇದ್ದಾರೆ. ನಾಗರಿಕ ಸೌಲಭ್ಯ ಸರಿಯಾಗಿ ಕೊಡಿ, ಜನ ಬಂದೇ ಬರ್ತಾರೆ. ಇಲ್ಲ ಅಂದರೆ ಇರೋರು ಹೊರಟು ಹೋಗ್ತಾರೆ ಎಂದರು.
ಹಾಸನ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಹಾಗೂ ಅರ್ಜುನನ ಪ್ರತಿಮೆ ಅನಾವರಣ ಮುಂದೂಡಿಕೆ ವಿಚಾರದ ಬಗ್ಗೆ, ಈ ಸರ್ಕಾರದಲ್ಲಿ ಹಣ ಇಲ್ಲ, ನಮ್ಮ ಸರ್ಕಾರ ಇದ್ದಾಗ ರೈಲ್ವೆ ಬ್ಯಾರಿಕೇಡ್ ಹಾಕಲು ಹಣ ನೀಡಿತ್ತು. ಇವರು ಬಂದ ಮೇಲೆ ಉಳಿದ ಹಣ ಬಿಡುಗಡೆ ಮಾಡಿಲ್ಲ. ಸತ್ತವರಿಗೆ ಪರಿಹಾರ ಕೊಡಲು ಹಿಂದೆ, ಮುಂದೆ ನೋಡುವ ಸ್ಥಿತಿ ಇದೆ. ಕೇರಳದಲ್ಲಿ ಯಾರಾದರೂ ಸತ್ತರೆ ಕೂಡಲೇ ಬುಲೆಟ್ ಟ್ರೈನ್ ರೀತಿ ಹೋಗಿ ಕೊಡ್ತಾರೆ. ಇಲ್ಲಿ ಅರ್ಜುನನ ಪ್ರತಿಮೆ ಮಾಡಲು ದುಡ್ಡು ಕೊಡಲು ಆಗಿಲ್ಲ. ಅರಣ್ಯದಲ್ಲಿ ಫೈಬರ್ ಪ್ರತಿಮೆ ನಿಲ್ಲಿಸಿದ್ದಾರೆ. ಅರ್ಜುನನ ಪ್ರತಿಮೆಗೆ ಕೊಡಲು ಹಣವಿಲ್ಲ. ಭಿಕ್ಷೆ ಬೇಡಿಯಾದರೂ ಉದ್ಘಾಟನೆ ಮಾಡು ಎಂದು ನಮ್ಮ ಎಂಎಲ್‌ಎಗೆ ಹೇಳಿದ್ದೇನೆ. ಎಂಟು ಬಾರಿ ಚಾಮುಂಡೇಶ್ವರಿ ತಾಯಿ ಹೊತ್ತಿದೆ, ಅದಕ್ಕೆ ಪಾವಿತ್ರತೆ ಇದೆ. ಅದಕ್ಕೆ ಪ್ಲಾಸ್ಟಿಕ್, ಫೈಬರ್‌ನಿಂದ ಪ್ರತಿಮೆ ಮಾಡಬಾರದು. ಮಾಡುವುದಾದರೆ ಪರಿಸರ ಪ್ರೇಮಿ ಕಂಚಿನ ಪ್ರತಿಮೆ ಮಾಡಲಿ ಎಂದು ಹೇಳಿದರು.
D.K. Shivakumar knows how to kick and kick the CM's post. He has mastered that art. D.K. Shivakumar will wait for the right time and kick and kick. Opposition leader R. Ashok has made this joke about the CM change issue.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm