ಬ್ರೇಕಿಂಗ್ ನ್ಯೂಸ್
14-02-25 07:44 pm HK News Desk ಕರ್ನಾಟಕ
ಬೆಳಗಾವಿ, ಫೆ.14: ಪಾರ್ಲಿಮೆಂಟ್ ನಲ್ಲಿ ನಿನ್ನೆ ವಕ್ಫ್ ಬೋರ್ಡ್ ನಲ್ಲಿ ಚರ್ಚೆ ನೋಡಿದ್ರೆ ವಿರೋಧ ಪಕ್ಷದ ನಾಯಕರಿಗೆ ರೈತರು ಬೇಕಾಗಿಲ್ಲ, ಹಿಂದೂಗಳು ಬೇಕಾಗಿಲ್ಲ, ಭಾರತ ಸುರಕ್ಷತೆ ಬೇಕಾಗಿಲ್ಲ. ಇವರಿಗೆ ಮುಸ್ಲಿಮರ ಸುರಕ್ಷತೆ ಅಷ್ಟೇ ಬೇಕಾಗಿದೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆಗೆ ಬೇಕಾಗಿರೋದು ಮುಸ್ಲಿಂ ತುಷ್ಟಿಕರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟಿಗೂ ವಕ್ಫ ಬೋರ್ಡ್ ಗೂ ಸಂಬಂಧವಿಲ್ಲ. ಅದನ್ನ ತಿದ್ದುಪಡಿ ಮಾಡಿದ್ದಕ್ಕೆ ಇವರು ವಿರೋಧಿಸುತ್ತಾರೆ. ಇವರಿಗೆ ಬೇಕಾಗಿರೋದು ಮುಸ್ಲಿಂರ ತುಷ್ಟಿಕರಣ ಮಾತ್ರ. ಇಬ್ಬರು ಮುಸ್ಲಿಂ ಸಂಸದರು, 10 ಜನ ಇತರೆ ಪಕ್ಷದ ಹಿಂದೂ ಸಂಸದರು ವಿರೋಧ ಮಾಡಿದ್ರು. ವಕ್ಫ್ ಬೋರ್ಡ್ ಗೆ ವಿರೋಧಿಸುವವರು ದೇಶದ್ರೋಹಿಗಳು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಸಿಎಂ ಅವರೇ ವಕ್ಫ್ ಬೋರ್ಡ್ ನಿಂದ ಇನ್ನು ಮುಂದೆ ನೋಟಿಸ್ ಕೊಡಬಾರದು ಅಂತಾ ಹೇಳಿದ್ರು. ಇಷ್ಟಾದ್ರು ಪೀರನವಾಡಿಯಲ್ಲಿ ರೈತರಿಗೆ ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ ಎಂದ ಮುತಾಲಿಕ್, ಪಾರ್ಲಿಮೆಂಟ್ ಮತ್ತು ರಾಜ್ಯಸಭಾದಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಕಾಯ್ದೆ ನೂರಕ್ಕೆ ನೂರರಷ್ಟು ಅಂಗೀಕಾರ ಆಗಲಿದೆ. ಮುಸ್ಲಿಮರು ವಿರೋಧ ಮಾಡ್ತಾರೆ, ಆದ್ರೆ ಮುಸ್ಲಿಮರಿಗೆ ಹುಟ್ಟಿದವರಂತೆ ಕೆಲವು ಹಿಂದೂ ಸಂಸದರು ವರ್ತಿಸುತ್ತಿದ್ದಾರೆ. ಮುಸ್ಲಿಮರಿಗೆ ಸಂವಿಧಾನ ಮೀರಿ ವಕ್ಫ್ ಬೋರ್ಡ್ ರಚನೆ ಮಾಡಿದ್ದು ಕಾಂಗ್ರೆಸ್ ಎಂದರು.
ಕಾಂಗ್ರೆಸ್ ಮುಸ್ಲಿಂ ತುಷ್ಟಿಕರಣದಿಂದ ಉದಯಗಿರಿ ಘಟನೆ ಸಂಭವಿಸಿದೆ. ಮೈಸೂರಿನ ಉದಯಗಿರಿ ಗಲಾಟೆ ಮೊದಲನೇಯದ್ದು ಅಲ್ಲಾ ಕೊನೆಯದೂ ಅಲ್ಲಾ. ಮುಸ್ಲಿಂ ತುಷ್ಟೀಕರಣ ಮಾಡೋವರೆಗೂ ಇರುತ್ತದೆ. ನಾಳೆ ಸಿಎಂ ಇದರ ಬಗ್ಗೆ ಸಭೆ ಮಾಡ್ತಾರಂತೆ. ಸಿಎಂ ಏನು ಸಭೆ ತಗೊತೀರಿ, ಯಾರನ್ನ ಬಚಾವ್ ಮಾಡೋದಕ್ಕೆ ಸಭೆ ಮಾಡ್ತಿರಿ. ಸಭೆ ಯಾಕ್ರೀ ಪೊಲೀಸರಿಗೆ ಮುಕ್ತವಾದ ಅಧಿಕಾರ ಕೊಡ್ರೀ. ಪೊಲೀಸ್ ಮೇಲೆ ಕಲ್ಲು ಎಸೆದಿದ್ದಾರೆ. 19 ಜನ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ.
ಪೊಲೀಸರು ತಡ ಮಾಡಿದ್ದರಿಂದ ಘಟನೆ ಆಗಿದೆ ಅಂತಾ ತನ್ವಿರ್ ಸೇಠ್ ಹೇಳ್ತಾರೆ. ಹಾಗಾದ್ರೆ ಅದು ಪಾಕಿಸ್ತಾನ ಅಥವಾ ಅಪಘಾನಿಸ್ತಾನವಾ ಎಂದು ತನ್ವೀರ್ ಸೇಠಗೆ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. ಗಲಭೆಗೆ ಕಾಂಗ್ರೆಸ್ ಪಕ್ಷವೇ ಕಾರಣ. ಪೊಲೀಸ್ ಠಾಣೆ ಸುಟ್ಟವರ ಕೇಸ್ ವಾಪಸ್ ಪಡೆಯುತ್ತಾರೆ ಅಂದ್ರೆ ಕಾಂಗ್ರೆಸ್ ನವರೇ ಕುಮ್ಮಕ್ಕು ಕೊಡ್ತಿದ್ದಾರೆ ಎಂದರ್ಥ. ಪೊಲೀಸ್ ಇಲಾಖೆ ಜೊತೆಗೆ ನಾವು ಇದ್ದೇವೆ. ಆರೋಪಿಗಳನ್ನ ಒದ್ದು ಒಳಗೆ ಹಾಕಿ ಎಂದು ಒತ್ತಾಯ ಮಾಡಿದರು.
In a recent statement made in Belagavi, Pramod Mutalik expressed strong disapproval of the ongoing opposition to the Waqf Board, asserting that such resistance is a reflection of anti-national sentiment.
14-02-25 10:48 pm
HK News Desk
Home Minister Parameshwara, Udayagiri, Mysur...
14-02-25 08:44 pm
Pramod Mutalik, Waqf Board, Belagavi; ವಕ್ಫ್ ಬ...
14-02-25 07:44 pm
ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನವನ್ನು ಒದ್ದು ಕಿತ್ಕೋ...
14-02-25 06:16 pm
Praveen Subhash, Navy Jawan, Misfire: ಆಕಸ್ಮಿಕ...
14-02-25 05:45 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
14-02-25 10:22 pm
Mangalore Correspondent
Accident Mangalore, Roshan Moras; ಬೋಳಿಯಾರಿನಲ್...
13-02-25 09:40 pm
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
14-02-25 05:19 pm
HK News Desk
Ragging Horror At Kerala: ಬೆತ್ತಲೆ ನಿಲ್ಲಿಸಿ ಮರ...
13-02-25 10:20 pm
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm