ಸಂಘ ಪರಿವಾರದವರು ಬುರ್ಖಾ ಹಾಕಿಕೊಂಡು ಗಲಾಟೆ ಮಾಡೋಕೆ ಹೋಗ್ತಾರೆ, ನನ್ನಲ್ಲಿ ವಿಡಿಯೋ ಇದೆ ; ಬಿಕೆ ಹರಿಪ್ರಸಾದ್ 

16-02-25 06:44 pm       HK News Desk   ಕರ್ನಾಟಕ

ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಹಾಕಿಕೊಂಡು ಗಲಾಟೆ ಮಾಡೋಕೆ ಹೋಗ್ತಾರೆ. ಇದೇನು ಹೊಸದಲ್ಲ, ನನ್ನ ಬಳಿ ಅಂತಹ ವಿಡಿಯೋಗಳಿವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಕಲಬುರಗಿ, ಫೆ.16: ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಹಾಕಿಕೊಂಡು ಗಲಾಟೆ ಮಾಡೋಕೆ ಹೋಗ್ತಾರೆ. ಇದೇನು ಹೊಸದಲ್ಲ, ನನ್ನ ಬಳಿ ಅಂತಹ ವಿಡಿಯೋಗಳಿವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಗೆ ನೂರು ವರ್ಷ ತುಂಬುತ್ತಿದೆ. ಹಾಗಾಗಿ ಅವರೇ ಈ ರೀತಿ ಮಾಡ್ತಾರೆ. ಆರ್ ಎಸ್ ಎಸ್ ವರ ಎಲ್ಲಾ ಚಿಂತನೆಗಳನ್ನು ಅನುಷ್ಟಾನಕ್ಕೆ ತರಲು ಪ್ರಯತ್ನ ಮಾಡ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅದು ಸಾಧ್ಯವಿಲ್ಲ. ನನ್ನ ಹತ್ರ ವಿಡಿಯೋ ಇದೆ. ಶಾಂತಿ ಕದಡುವ ಯತ್ನವನ್ನು ಅವರೇ ಮಾಡ್ತಿದ್ದಾರೆ. ತನಿಖೆ ಮಾಡಿಸಿ ಎಲ್ಲಾ ಕಡೆ ಶಾಂತಿ ಕದಡಿಸಲು ಪ್ರಯತ್ನ ಮಾಡ್ತಿದ್ದಾರೆ. ವಿಜಯಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದವನು ಸಂಘ ಪರಿವಾರದವನು ಎಂದರು.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹೇಳಿದ್ದೇವೆ. ಯಾರೇ ಆಗಲಿ ಯಾವುದೇ ಧರ್ಮ ಜಾತಿ ಭಾಷೆ ಹೆಸರಲ್ಲಿ ಶಾಂತಿ ಕದಡಿದ್ರೆ ಕಾನೂನಿನ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾನು ಗೃಹ ಸಚಿವರಿಗೆ ಹೇಳೋದು ಇಷ್ಟೆ. ಶಾಂತಿ ಕದಡಲು ಬಹಳ ಪ್ರಯತ್ನ ಮಾಡ್ತಿದ್ದಾರೆ. ಬಿಜೆಪಿ ಅಧಿಕಾರ ಇದ್ದಾಗ ಸೃಷ್ಟಿಯಾದ ಅಶಾಂತಿಯ ವಾತಾವರಣ ಶೇ. 90 ರಷ್ಟು ಎರಡೇ ತಿಂಗಳಲ್ಲಿ ಕಮ್ಮಿ ಆಗಿದೆ. ಮೈಸೂರಿನ ಉದಯಗಿರಿ ಗಲಾಟೆ ಬಿಜೆಪಿ ಆರ್ ಎಸ್ ಎಸ್ ಕೃಪಾಪೋಷಿತ ಕೃತ್ಯಗಳು ಎಂದು ಆರೋಪಿಸಿದರು. 

ಇದೆ ವೇಳೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು, ಮಂತ್ರಿಗಳ ಬದಲಾವಣೆ ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಈಗ ಕಲಬುರಗಿಯಲ್ಲೆ ಇದೆ. ಅವರು ಬಂದಾಗ ಕೇಳಿ.‌ ಸರ್ಕಾರ ಬಂದಾಗಿನಿಂದಲೂ ಈ ರೀತಿಯ ಎಲ್ಲಾ ಚರ್ಚೆ ಆಗ್ತಿದೆ. ರಾಜಕೀಯದಲ್ಲಿ ಇವೆಲ್ಲಾ ಚರ್ಚೆಗಳು ನಡೆಯುತ್ತಲೆ ಇರುತ್ತೆ‌. ನನ್ನ ವಿಚಾರದಲ್ಲಿ ಯಾವ ಶ್ರೀಗಳು ಮಾತಾಡಬಾರದು.‌ ಅದರಲ್ಲೂ ರಾಜಕೀಯವಂತೂ ಸ್ವಾಮೀಜಿಗಳು ಮಾತಾಡಲೇಬಾರದು ಎಂದು ಹೇಳಿದರು.

Senior Congress leader B.K. Hariprasad said that Sangh Parivar members go to some places wearing burqas and create ruckus. This is not new, I have such videos.