Amazon Web Services, Bangalore, Adarsh Builders: ಅಮೆಜಾನ್ ವೆಬ್ ಸರ್ವೀಸ್ ಎಡವಟ್ಟು ; ಬೆಂಗಳೂರಿನ ಬಿಲ್ಡರ್ ಗೆ 150 ಕೋಟಿ ರೂ. ಲಾಸು, ಸಂಸ್ಥೆ ವಿರುದ್ಧ ಕೇಸು 

17-02-25 10:43 am       Bangalore Correspondent   ಕರ್ನಾಟಕ

ಬೆಂಗಳೂರಿನ ಆದರ್ಶ್ ಡೆವಲಪರ್ಸ್‌ನ  ಮಾಲಕ ಶ್ರೀಧ‌ರ್ ರಾಜೇಂದ್ರನ್ ನೀಡಿರುವ ದೂರು ಆಧರಿಸಿ, ಅಮೆಜಾನ್ ವೆಬ್ ಸರ್ವೀಸ್, ರೆಡಿಂಗ್ಟನ್ ಗ್ರೂಪ್‌ ಸೇರಿದಂತೆ ಮೂರು ಸಂಸ್ಥೆಗಳ ವಿರುದ್ಧ ಕೇಸ್ ದಾಖಲಾಗಿದೆ.

ಬೆಂಗಳೂರು ಫೆ.17: ಬೆಂಗಳೂರಿನ ಆದರ್ಶ್ ಡೆವಲಪರ್ಸ್‌ನ  ಮಾಲಕ ಶ್ರೀಧ‌ರ್ ರಾಜೇಂದ್ರನ್ ನೀಡಿರುವ ದೂರು ಆಧರಿಸಿ, ಅಮೆಜಾನ್ ವೆಬ್ ಸರ್ವೀಸ್, ರೆಡಿಂಗ್ಟನ್ ಗ್ರೂಪ್‌ ಸೇರಿದಂತೆ ಮೂರು ಸಂಸ್ಥೆಗಳ ವಿರುದ್ಧ ಕೇಸ್ ದಾಖಲಾಗಿದೆ.

36 ವರ್ಷಗಳಿಂದ ಆದರ್ಶ್ ಡೆವಲಪರ್ಸ್ ಕಂಪನಿ ಬೆಂಗಳೂರು ನಗರದಲ್ಲಿ ವಸತಿ ಕಟ್ಟಡಗಳ ನಿರ್ಮಾಣ ಹಾಗೂ ಸೌಲಭ್ಯ ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡಿದೆ. ಕಂಪನಿಯ ಹಣಕಾಸು ವ್ಯವಹಾರ ಹಾಗೂ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಅಮೆಜಾನ್ ಕೌಡ್ ಸರ್ವರ್  ನಲ್ಲಿ  ಸಂಗ್ರಹಿಸಿ ಇಡಲಾಗಿತ್ತು. ಆದ್ರೆ ಈಗ ಅಳಿಸಿಹೋಗಿದ್ದು, ಕಂಪನಿಗೆ ಸಾಕಷ್ಟು ನಷ್ಟವಾಗಿದೆ ಎಂದು ಬಿಲ್ಡರ್  ರಾಜೇಂದ್ರನ್ ದೂರು ದಾಖಲಿಸಿದ್ದಾರೆ.

What are Amazon Web Services?. Welcome to Day 3 of #100DaysofAWS! | by  Aditi Dhepe | Medium

2023ರ ಮೇನಲ್ಲಿ ಅಮೆಜಾನ್ ಕೌಡ್ ಸರ್ವೀಸ್‌ನ ವಾಣಿಜ್ಯ ವಿಭಾಗದ ಪ್ರತಿನಿಧಿಯೊಬ್ಬರು ಕಂಪನಿಯನ್ನು ಸಂಪರ್ಕಿಸಿ, ಕೌಡ್ ಸರ್ವೀಸ್‌ ಉಪಯೋಗಿಸುವಂತೆ ಕೋರಿದ್ದರು. ಸೈಬ‌ರ್ ದಾಳಿ, ವಿಧ್ವಂಸಕ ಕೃತ್ಯ, ಮಿಂಚು-ಗುಡುಗು, ಭೂಕಂಪ ಹಾಗೂ ಚಂಡಮಾರುತದಂತಹ ಸಂದರ್ಭದಲ್ಲೂ ಯಾವುದೇ ರೀತಿ ನಿಮ್ಮ ಸಂಸ್ಥೆಯ ಡೇಟಾಗೆ ತೊಂದರೆ ಆಗೋದಿಲ್ಲ, ಅದನ್ನ ಮರಳಿ ಪಡೆಯಬಹುದು ಎಂದು ಶ್ರೀಧ‌ರ್ ಗೆ ಅಮೆಜಾಜ್ ಸಂಸ್ಥೆ ಭರವಸೆ ನೀಡಿತ್ತು.  ಅಮೆಜಾನ್‌ ವೆಬ್ ಸರ್ವೀಸ್ ಜತೆಗೆ 2027ರ ನವೆಂಬರ್‌ವರೆಗೆ ಒಪ್ಪಂದ ಮಾಡಿಕೊಂಡು, ದತ್ತಾಂಶವನ್ನು ಸುರಕ್ಷಿತವಾಗಿ ಇಡುವಂತೆ ಆದೇಶ ನೀಡಲಾಗಿತ್ತು. ಜಿಎಸ್‌ಟಿ ಸಹಿತ 88.59 ಲಕ್ಷ ಪಾವತಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. 

ದತ್ತಾಂಶ ಅಳಿಸಿಹೋಗಿದೆ ಎಂಬುದು ಜನವರಿ 9ರಂದು ಗೊತ್ತಾಗಿದೆ. ಕಂಪನಿಯ ದತ್ತಾಂಶ ಸಂಗ್ರಹಿಸಿದ್ದ ಮೂಲ ಸ್ಥಳದಲ್ಲೇ ಅಳಿಸಿ ಹಾಕಿದ್ದಾರೆ. ಅಲ್ಲದೇ ಖಾತೆಯನ್ನೂ ಡಿಲೀಟ್ ಮಾಡಿದ್ದಾರೆ. ಇದರಿಂದ ಕಂಪನಿಯ ಆರು ವರ್ಷದ ವಹಿವಾಟಿನ ಮಾಹಿತಿ, ಗ್ರಾಹಕರ ವಿವರ ಅಳಿಸಿ ಹೋಗಿ ಜ.9ರಿಂದ ಪ್ರತಿದಿನ 5 ಕೋಟಿಯಷ್ಟು ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದತ್ತಾಂಶ ಮರು ಸಂಗ್ರಹಿಸಲು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸಿದ್ದರೂ ಯಶಸ್ಸು ಸಿಕ್ಕಿಲ್ಲ ಎಂಬುದಾಗಿ ಅಮೆಜಾನ್ ವೆಬ್ ಸರ್ವೀಸ್‌ನ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.

Case filed by Bangalore Adarsh builders owner Sridhar Rajendra against Amazon Web Services over losing 150 crore data of their customers.