ಬ್ರೇಕಿಂಗ್ ನ್ಯೂಸ್
18-02-25 02:59 pm HK News Desk ಕರ್ನಾಟಕ
ಮೈಸೂರು, ಫೆ 19: ಐಪಿಎಲ್ ಹಾಗೂ ಆನ್ಲೈನ್ ಬೆಟ್ಟಿಂಗ್ಗೆ ಚಟಕ್ಕೆ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಬಳಿ ನಡೆದಿದೆ. ಜೋಶಿ ಆಂಥೋನಿ, ಜೋಬಿ ಆಂಥೋನಿ ಹಾಗು ಶರ್ಮಿಳಾ ಅಲಿಯಾಸ್ ಸ್ವಾತಿ ಮೃತ ದುರ್ದೈವಿಗಳು. ಜೋಬಿ ಹಾಗೂ ಜೋಷಿ ಅವಳಿ ಜವಳಿ ಸಹೋದರರು.
ಜೋಶಿ ಆಂಥೋನಿ ತನ್ನ ತಮ್ಮನಾದ ಜೋಬಿಗೆ ಮತ್ತು ನಾದಿನಿ ಶರ್ಮಿಳಾ ಆಲಿಯಾಸಿ ಸ್ವಾತಿ ಮೇಲೆ ಮೋಸದ ಆರೋಪ ಹೊರಿಸಿ ಸೋಮವಾರ (ಫೆ.17) ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಜೋಶಿ ವಿಡಿಯೋ ಮಾಡಿದ್ದು, “ಸಹೋದರ ಜೋಬಿ, ಆತನ ಪತ್ನಿ ಶರ್ಮಿಳಾ ಮೋಸದಿಂದ ನನ್ನ ಸಹೋದರಿ ಮೂಲಕ ಊರು ತುಂಬ ಸಾಲ ಪಡೆದು ಮೋಸ ಮಾಡಿದ್ದಾರೆ. ನನ್ನ ಸಹೋದರಿಗೆ ಗಂಡ ಇಲ್ಲ, ಅವರು ಮೋಸ ಮಾಡಿದ್ದಾರೆ. ನನ್ನ ಸಾವಿಗೆ ತಮ್ಮ ಜೋಬಿ ಆಂಥೋನಿ ಮತ್ತು ಆತನ ಪತ್ನಿ ಶರ್ಮಿಳಾ ಕಾರಣ ಅವರಿಗೆ ಶಿಕ್ಷೆ ಕೊಡಿಸಿ” ಎಂದು ಹೇಳಿ ನೇಣಿಗೆ ಶರಣದಾಗಿದ್ದಾರೆ.
ಜೋಶಿ ಆಂಥೋನಿ ಸಾವಿನ ವಿಚಾರ ತಿಳಿದು ತಮ್ಮ ಜೋಬಿ l ಹಾಗೂ ಪತ್ನಿ ಶರ್ಮಿಳಾ ಅಲಿಯಾಸ್ ಸ್ವಾತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೋಬಿ ಹಾಗೂ ಶರ್ಮಿಳಾ ಐಪಿಎಲ್ ಹಾಗೂ ಆನ್ ಲೈನ್ ಗೇಮ್ ಗಾಗಿ ಸುಮಾರು 91 ಲಕ್ಷಾ ರೂ. ಸಾಲ ಮಾಡಿಕೊಂಡಿದ್ದರು, ಸಾಲಗಾರರು ಪ್ರತಿ ನಿತ್ಯ ಮನೆಯ ಬಳಿ ಬಂದು ಗಲಾಟೆ ಮಾಡ್ತಿದ್ರು. ಇದರಿಂದ ಮನನೊಂದ ಜೋಷಿ ಆಂಥೋನಿ ಸೋಮವಾರ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು (ಫೆ.18) ಜೋಬಿ ಹಾಗೂ ಶರ್ಮಿಳಾ ವಿಜಯನಗರದ ಕ್ರೀಡಾ ಮೈದಾನದ ಬಳಿ ನೇಣಿಗೆ ಶರಣಾಗಿದ್ದಾರೆ.
ತಂಗಿ ಮೇರಿ ಶರ್ಲೈನ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಾರಣಕ್ಕೆ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಂಪತಿಗಳ ವಿರುದ್ಧ ಕೇಸ್ ದಾಖಲಿಸಿದ್ದರು. ಹೀಗಾಗಿ ಕೇಸ್‌ಗೆ ಭಯಪಟ್ಟು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Three members of a family ended their lives, allegedly after losing money in online gambling in Karnataka's Mysuru district on Tuesday. The incident took place near Hanchya village, close to Mysuru. The deceased were identified as Josh Anthony, his brother Joby Anthony, and Joby's wife Sharmila, also known as Swathi.
18-02-25 10:25 pm
Bangalore Correspondent
Mysuru Suicide, online Gambling, Betting: ಐಪಿ...
18-02-25 02:59 pm
Mandya crime, Boy Shoot brothers: ಕಳ್ಳ ಪೊಲೀಸ್...
17-02-25 01:38 pm
Amazon Web Services, Bangalore, Adarsh Builde...
17-02-25 10:43 am
ಸಂಘ ಪರಿವಾರದವರು ಬುರ್ಖಾ ಹಾಕಿಕೊಂಡು ಗಲಾಟೆ ಮಾಡೋಕೆ...
16-02-25 06:44 pm
18-02-25 10:49 pm
HK News Desk
Hindu idols Bishop House, Pala diocese, Kera...
18-02-25 10:45 pm
DK Shivakumar, Kasaragod, congress: ಕೇರಳದ ಕಾಂ...
17-02-25 10:42 pm
New Rules 2025; FASTag ಹೊಸ ನಿಯಮ ಜಾರಿ ; ಬ್ಯಾ...
17-02-25 08:23 pm
Delhi Railway station stampede, 18 Dead: ದೆಹಲ...
16-02-25 01:04 pm
18-02-25 12:36 pm
Mangalore Correspondent
Dinesh Gundurao, Munner katipalla, Sand Mafia...
17-02-25 10:56 pm
Sterlite Power, Protest, 400kv Power, Mangalo...
17-02-25 09:20 pm
Mangalore, Dinesh Gundurao, Mines Krishnaveni...
17-02-25 09:14 pm
Mangalore, KDP Meeting, Dinesh Gundurao, MLA...
17-02-25 01:41 pm
18-02-25 07:19 pm
Mangalore Correspondent
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm
Mysuru family suicide, Crime: ಮೈಸೂರು ; ಅಪಾರ್ಟ...
17-02-25 12:49 pm
Shivamogga crime, Kidnap, Blackmail: ಹೋಟೆಲ್ ಗ...
17-02-25 12:05 pm