ಸಿಐಡಿ ಡಿವೈಎಸ್ಪಿ ಲಕ್ಷ್ಮೀ ನೇಣಿಗೆ ಶರಣು, ಸ್ನೇಹಿತರ ಮನೆಯಲ್ಲಿ ಕೃತ್ಯ !!

17-12-20 11:09 am       Bangalore Correspondent   ಕರ್ನಾಟಕ

ಡಿವೈಎಸ್ಪಿ ಪಿ.ವಿ. ಲಕ್ಷ್ಮೀ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

ಬೆಂಗಳೂರು, ಡಿ.17 : ಸಿಐಡಿ ವಿಭಾಗದ ಡಿವೈಎಸ್ಪಿ ಆಗಿದ್ದ ಪಿ.ವಿ. ಲಕ್ಷ್ಮೀ (33) ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

ಅನ್ನಪೂರ್ಣೇಶ್ವರಿ ನಗರದಲ್ಲಿ ಪರಿಚಯಸ್ಥರ ಮನೆಗೆ ಊಟಕ್ಕೆಂದು ಹೋಗಿದ್ದ ಲಕ್ಷ್ಮೀ ಅಲ್ಲಿಯೇ ಕೊಠಡಿ ಒಂದರಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ 10.30ರ ಹೊತ್ತಿಗೆ ನೇಣು ಬಿಗಿದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸ್ಪಷ್ಟ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.

ಲಕ್ಷ್ಮೀ ಅವರು 2014ರ ಬ್ಯಾಚ್ ಕೆಪಿಎಸ್ಸಿ ಅಧಿಕಾರಿಯಾಗಿದ್ದು, 2017ರಲ್ಲಿ ಸಿಐಡಿ ವಿಭಾಗಕ್ಕೆ ಡಿವೈಎಸ್ಪಿ ನೇಮಕವಾಗಿದ್ದರು.  ಲಕ್ಷ್ಮೀ ಪ್ರೊಬೇಷನರಿ ಬಳಿಕ ಮೊದಲ ಬಾರಿಗೆ ಸಿಐಡಿಗೆ ಡಿವೈಎಸ್ಪಿ ಆಗಿ ಪೋಸ್ಟಿಂಗ್ ಆಗಿದ್ದರು. ತನಿಖೆ ಮುಂದುವರಿದಿದ್ದು ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. 

ಮಾನಸಿಕವಾಗಿ ಖಿನ್ನರಾಗಿದ್ದರೇ ಮೇಲಧಿಕಾರಿಗಳ ಕಿರುಕುಳ ಇತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಮೂರು ವರ್ಷಗಳಿಂದ ಒಂದೇ ಕಡೆ ಇದ್ದು ಬೇರೆ ಪೋಸ್ಟಿಂಗ್ ಮಾಡದಿರುವುದು ಚಿಂತೆಗೆ ಕಾರಣ ಆಗಿತ್ತು ಎನ್ನಲಾಗಿದೆ.

ದಂಪತಿ ನಡುವೆ ಹೊಂದಾಣಿಕೆ ಇರಲಿಲ್ಲ..! 

ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಲಕ್ಷ್ಮೀಗೆ ಮಕ್ಕಳಾಗಿರಲಿಲ್ಲ ಎಂಬ ಚಿಂತೆ ಇತ್ತು. ಜೊತೆಗೆ, ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದ ಪತಿಯ ಜೊತೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಸ್ನೇಹಿತೆಯ ಜೊತೆ ಹೇಳಿಕೊಂಡು ಕೊರಗುತ್ತಿದ್ದರು. ನಿನ್ನೆ ರಾತ್ರಿ ಅನ್ನಪೂರ್ಣೇಶ್ವರಿ ನಗರದ ಸ್ನೇಹಿತೆಯ ಮನೆಗೆ ತೆರಳಿ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿದ ಬಳಿಕ ಕೊಠಡಿಗೆ ತೆರಳಿದ ಲಕ್ಷ್ಮೀ ಹೊರಗೆ ಬಾರದೆ ಬಾಗಿಲು ಹಾಕ್ಕೊಂಡಿದ್ದರು. ಬಾಗಿಲು ತೆರೆಯದ್ದರಿಂದ ಸಂಶಯ ಬಂದು ಬಾಗಿಲು ಒಡೆದು ನೋಡಿದಾಗ, ಕೃತ್ಯ ಬೆಳಕಿಗೆ ಬಂದಿದೆ. ಲಕ್ಷ್ಮೀ ಮೂಲತಃ ಕೋಲಾರ ಜಿಲ್ಲೆಯ ಮೂಲದವರಾಗಿದ್ದರು.

A lady CID officer in Bengaluru committed suicide on Wednesday night. She has been identified as PV Laxmi. The DSP-rank official was posted in the Criminal Investigation Department here.