ಬ್ರೇಕಿಂಗ್ ನ್ಯೂಸ್
17-12-20 01:37 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.17: ಪ್ರೇಮ ವಿವಾಹ, ಒಳ್ಳೆಯ ಹುದ್ದೆ, ಕೈತುಂಬಾ ಸಂಬಳ, ಸ್ನೇಹಿತರ ಒಡನಾಟ ಇಷ್ಟೆಲ್ಲಾ ಇದ್ದರೂ, ಆ ಮಹಿಳಾ ಅಧಿಕಾರಿಗೆ ಇನ್ನೇನು ಬೇಕಿತ್ತೋ.. ಸಿಐಡಿ ವಿಭಾಗದಲ್ಲಿ ಡಿವೈಎಸ್ಪಿ ಆಗಿದ್ದ ಪಿ.ವಿ.ಲಕ್ಷ್ಮೀ ಸಾವಿಗೆ ಶರಣಾಗಿರುವ ಹಿಂದಿನ ವಿಚಾರಗಳನ್ನು ಬೆನ್ನತ್ತಿ ಹೋದರೆ ಸ್ವಯಂಕೃತ ಅಪರಾಧಗಳೇ ಹೆಚ್ಚಾಗಿ ಎದ್ದು ಕಾಣುತ್ತಿವೆ. ಇಷ್ಟಕ್ಕೂ ಆಕೆ, ಇದು ಮೊದಲ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಲ್ಲ. ಈ ಹಿಂದೆ ಎರಡು ಬಾರಿ ಸಾವು ತಂದುಕೊಳ್ಳಲು ಪ್ರಯತ್ನ ಪಟ್ಟಿದ್ದಳು. ಅಷ್ಟೇ ಅಲ್ಲ, ಆಬಳಿಕ ತೀವ್ರವಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನೋ ವಿಚಾರವೂ ತಿಳಿದುಬರುತ್ತಿದೆ.
2012ರಲ್ಲಿ ನವೀನ್ ಎಂಬವರನ್ನು ಪ್ರೀತಿಸಿ, ವಿವಾಹವಾಗಿದ್ದ ಲಕ್ಷ್ಮೀ, ಆರಂಭದಲ್ಲಿ ಗಂಡನ ಜೊತೆ ಭಾರೀ ಅನ್ಯೋನ್ಯವಾಗಿದ್ದರು. ಅಧಿಕಾರಿಯಾಗಬೇಕೆಂದು ಕನಸು ಹೊತ್ತಿದ್ದ ಆಕೆ, ಮದುವೆಯ ಬಳಿಕವೇ ಗಂಡನ ಸಹಕಾರದಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದು ಪೊಲೀಸ್ ಅಧಿಕಾರಿಯಾಗಿದ್ದರು. 2014ರಲ್ಲಿ ಪರೀಕ್ಷೆ ಬರೆದು ಪಾಸಾಗಿದ್ದ ಲಕ್ಷ್ಮೀ ಪ್ರೊಬೇಶನರಿ ಅವಧಿ ಮುಗಿಸಿಕೊಂಡು 2017ರಲ್ಲಿ ನೇರವಾಗಿ ಸಿಐಡಿ ವಿಭಾಗಕ್ಕೆ ಡಿಎಸ್ಪಿ ಆಗಿ ಸೇರ್ಪಡೆಯಾಗಿದ್ದರು.
ದಾಂಪತ್ಯ ಸಂಬಂಧ ಹಳಸಿತ್ತು
ಆದರೆ, ಲಕ್ಷ್ಮೀ ಯಾವತ್ತು ಅಧಿಕಾರಿಯಾಗಿ ಕರ್ತವ್ಯಕ್ಕೆ ಸೇರಿದ್ಲೋ ಆವತ್ತಿನಿಂದಲೇ ಮನೆಯ ವಾತಾವರಣ ಬದಲಾಗಿತ್ತು. ನವೀನ್, ಅಮೆಝಾನ್ ಅನ್ನುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಕ್ಕೋ, ಕೈಹಿಡಿದ ಪತ್ನಿ ಅಧಿಕಾರಿಯಾಗಿ ಹೆಚ್ಚು ಸಂಬಳ ತರುತ್ತಿದ್ದಾಳೆಂಬ ಕೀಳರಿಮೆ ಹುಟ್ಟಿತ್ತೋ ಏನೋ, ಗಂಡ- ಹೆಂಡತಿ ನಡುವಿನ ಸಂಬಂಧವೇ ಹಳಸಿತ್ತು. ಅಧಿಕಾರಿ ಪತ್ನಿಯ ಜೊತೆಗೆ ಏಗುವುದಕ್ಕಾಗದೇ ನವೀನ್, ಎರಡು ವರ್ಷಗಳ ಹಿಂದೆಯೇ ಹೈದರಾಬಾದ್ ಗೆ ಹಾರಿದ್ದ. ಅಲ್ಲಿ ಅಮೆಝಾನ್ ಕಂಪನಿಯಲ್ಲೇ ಹುದ್ದೆ ಗಿಟ್ಟಿಸಿಕೊಂಡಿದ್ದ. ಆದರೆ, ನವೀನ್ ಬೆಂಗಳೂರಿನಲ್ಲೇ ಇರುವಂತೆ ಆವತ್ತು ಲಕ್ಷ್ಮೀ ತುಂಬ ಪ್ರಯತ್ನ ಪಟ್ಟಿದ್ದಳು. ಸಂಬಂಧ ಹಳಸಿದ್ದು, ದಂಪತಿಯ ನಡುವೆ ನಂಬಿಕೆ ಕಳಕೊಂಡಿದ್ದು, ಇನ್ನೇನೇನೋ ವಿಚಾರಗಳು ಅವರೊಳಗೆ ಬಿರುಕೊಡೆದು ದೊಡ್ಡ ಕಂದಕ ಆಗುವಂತೆ ಮಾಡಿತ್ತು.
ಕುಡಿಯಬೇಡ ಎಂದಿದ್ದರು ವೈದ್ಯರು
ಈ ನಡುವೆ, ಲಕ್ಷ್ಮೀ ಮಾನಸಿಕವಾಗಿ ಖುದ್ದು ಹೋಗಿದ್ದಳು. ಒಂದೆಡೆ ಗಂಡನ ಸುಖ ಇಲ್ಲದೆ, ಇನ್ನೊಂದೆಡೆ ಎಂಟು ವರ್ಷ ಕಳೆದರೂ ಮಕ್ಕಳಾಗದ ಕೊರಗು ಆಕೆಯನ್ನು ಆವರಿಸಿತ್ತು. ಗಂಡನ ಸಾಹಚರ್ಯ ಇಲ್ಲದ್ದನ್ನು ನೇಪಥ್ಯಕ್ಕೆ ಸರಿಸಲೆಂದೇ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುವುದಕ್ಕೆ ಆರಂಭಿಸಿದ್ದಳು. ಕುಡಿಯುವುದನ್ನೂ ಆರಂಭಿಸಿದ್ದಳು. ಇದರ ಮಧ್ಯೆಯೇ ಆಕೆ, ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದೂ ಆಗಿತ್ತು. ಆನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ವೈದ್ಯರು ಇನ್ಯಾವತ್ತೂ ಕುಡಿಯಲು ಹೋಗಬಾರದು ಎಂದು ಉಪದೇಶ ನೀಡಿದ್ದೂ ಆಗಿತ್ತು. ಆದರೆ, ಮಾನಸಿಕವಾಗಿ ಖಿನ್ನತೆ ಆವರಿಸಿಕೊಂಡಿದ್ದ ಲಕ್ಷ್ಮೀ ಇತ್ತ ಕೆಲಸದ ಬಗ್ಗೆಯೂ ಆಸಕ್ತಿ ಕಳಕೊಂಡಿದ್ದಳು. ಕಳೆದ ನಾಲ್ಕೈದು ತಿಂಗಳಿಂದ ಕೆಲಸಕ್ಕೆ ಸರಿಯಾಗಿ ಬರುತ್ತಿರಲಿಲ್ಲ ಎನ್ನುತ್ತಿದ್ದಾರೆ, ಆಕೆಯ ಜೊತೆಗಿದ್ದ ಸಿಬಂದಿ. ಕಾಲು ನೋವು ಅಂತ ನಾಲ್ಕು ತಿಂಗಳಿಂದ ಕರ್ತವ್ಯಕ್ಕೆ ರಜೆ ಹಾಕಿದ್ದರು ಎನ್ನುತ್ತಾರೆ, ಸಹೋದ್ಯೋಗಿ ಮಿತ್ರರು. ಆದರೆ, ಇವೆಲ್ಲದರ ಮಧ್ಯೆ ಕೆಲವು ಆಪ್ತ ಸ್ನೇಹಿತರ ಜೊತೆ ಪಾರ್ಟಿ ಮಾಡುವುದನ್ನು ಮಾತ್ರ ತಪ್ಪಿಸಿಕೊಂಡಿರಲಿಲ್ಲ.
ಸ್ನೇಹಿತರ ಜೊತೆ ಪಾರ್ಟಿ
ಬುಧವಾರ ರಾತ್ರಿ ಬಿಬಿಎಂಪಿಯ ಎ1 ಕಂಟ್ರಾಕ್ಟರ್ ಆಗಿರುವ ಮನೋಹರ್ ಎಂಬಾತನ ಜೊತೆ ನಾಲ್ಕೈದು ಮಂದಿ ಸೇರಿ ಪಾರ್ಟಿ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ನಗರದಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ಮನೋಹರ್ ಫ್ಲಾಟ್ ಹೊಂದಿದ್ದು ಅಲ್ಲಿ ಲಕ್ಷ್ಮೀ ಸೇರಿಕೊಂಡು ಪಾರ್ಟಿ ಮಾಡಿದ್ದಾರೆ. ಜೊತೆಗೆ ಇನ್ನೂ ನಾಲ್ಕು ಮಂದಿ ಇದ್ದರು ಎನ್ನಲಾಗುತ್ತಿದೆ. ಪಾರ್ಟಿ ಮುಗಿಸಿ, ಲಕ್ಷ್ಮೀ ಫ್ಲಾಟಿನ ರೂಮಿಗೆ ಹೋಗಿ ಬಾಗಿಲು ಹಾಕ್ಕೊಂಡಿದ್ದಳು. ಆದರೆ, ಕೆಲಹೊತ್ತಿನ ಬಳಿಕ ಜೊತೆಗಿದ್ದವರು ಸಂಶಯ ಬಂದು ಬಾಗಿಲು ಬಡಿದಿದ್ದಾರೆ. ಮೊದಲೇ ಮಾನಸಿಕ ನೋವಿನಿಂದ ಬಳಲುತ್ತಿದ್ದ 33 ವರ್ಷದ ಯುವತಿ ಲಕ್ಷ್ಮೀ ಅಲ್ಲಿ ಫ್ಯಾನಿಗೆ ನೇಣು ಹಾಕ್ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಹೀಗಂತಾ ಆಕೆಯ ಜೊತೆಗೆ ಪಾರ್ಟಿ ಮಾಡಿದ್ದವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಪಾರ್ಟಿ ಮಾಡಿದ್ದವರ ಬಗ್ಗೆಯೇ ಸಂಶಯ
ಆದರೆ, ಈ ಪಾರ್ಟಿ ನಡೆಸಿದ್ದು, ಅಲ್ಲಿ ಆಕೆಯ ಜೊತೆಗೆ ಪಾರ್ಟಿಯಲ್ಲಿ ಸಾಥ್ ಕೊಟ್ಟವರು ಹೀಗೆ ಎಲ್ಲದರ ಬಗ್ಗೆಯೂ ಸಂಶಯ ಕಂಡುಬರ್ತಿದೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಮನೋಹರ್, ಪ್ರಜ್ವಲ್ ಮತ್ತು ಧರ್ಮೇಂದ್ರ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರು ಹೇಳಿದಾಗೇ, ಆಕೆ ಸ್ವತಃ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾ ಅಥವಾ ಅಲ್ಲಿ ಬೇರೇನಾದ್ರೂ ನಡೆದಿದ್ಯಾ ಅನ್ನೋದ್ರ ಬಗ್ಗೆ ಪೊಲೀಸರೇ ತನಿಖೆ ನಡೆಸಬೇಕು. ಈ ನಡುವೆ, ಲಕ್ಷ್ಮೀಯ ತಂದೆ ಕೋಲಾರ ಮೂಲದ ವೆಂಕಟೇಶಪ್ಪ ಪಾರ್ಟಿಯಲ್ಲಿ ಪಾಲ್ಗೊಂಡವರ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
ಮನೆಯವರನ್ನು ಲೆಕ್ಕಿಸದೆ ಮದುವೆ !
ಡಿಸಿಸಿ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ನಿವೃತ್ತಿಯಾಗಿದ್ದ ವೆಂಕಟೇಶಪ್ಪ ಮಗಳ ಸಾವಿನಲ್ಲಿ ಇನ್ಯಾರದ್ದೋ ಕೈವಾಡ ಇಡೆ ಅನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ. ಆಕೆ, ಎಂಟು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗುವ ವೇಳೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಲಕ್ಷ್ಮೀ ಮನೆಯವರ ಮಾತು ಲೆಕ್ಕಿಸದೆ ನವೀನ್ ಜೊತೆ ಮದುವೆಯಾಗಿ ಬೆಂಗಳೂರಿನಲ್ಲೇ ಮನೆ ಮಾಡಿಕೊಂಡಿದ್ದಳು. ಮನೆಯ ಕಡೆಗೆ ಹೋಗುವುದನ್ನೇ ನಿಲ್ಲಿಸಿದ್ದಳು. ಹೀಗಿದ್ದರೂ, ಮಗಳ ಬಗ್ಗೆ ಮನೆಯವರು ಕಾಳಜಿ ಇಟ್ಟುಕೊಂಡಿದ್ದರು. ಡಿಎಸ್ಪಿ ದರ್ಜೆಯ ಅಧಿಕಾರಿಯಾಗಿದ್ದ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದರು. ಆದರೆ, ಇದೀಗ ಮಗಳ ಸ್ಥಿತಿ ಈ ಪರಿ ಅಂತ್ಯವಾಗಿದ್ದನ್ನು ಕಂಡು ತುಂಬ ಬೇಸರ ಪಟ್ಟುಕೊಂಡಿದ್ದಾರೆ.
A 33-year-old CID DYSP Lakshmi was found hanging at her friend’s residence in Bangalore. Detailed Report by Headline Karnataka.
14-02-25 10:48 pm
HK News Desk
Home Minister Parameshwara, Udayagiri, Mysur...
14-02-25 08:44 pm
Pramod Mutalik, Waqf Board, Belagavi; ವಕ್ಫ್ ಬ...
14-02-25 07:44 pm
ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನವನ್ನು ಒದ್ದು ಕಿತ್ಕೋ...
14-02-25 06:16 pm
Praveen Subhash, Navy Jawan, Misfire: ಆಕಸ್ಮಿಕ...
14-02-25 05:45 pm
13-02-25 02:45 pm
HK News Desk
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
14-02-25 10:22 pm
Mangalore Correspondent
Accident Mangalore, Roshan Moras; ಬೋಳಿಯಾರಿನಲ್...
13-02-25 09:40 pm
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
Bomb Threat, School, Mangalore: ಮಂಗಳೂರಿನಲ್ಲಿ...
12-02-25 10:58 pm
14-02-25 05:19 pm
HK News Desk
Ragging Horror At Kerala: ಬೆತ್ತಲೆ ನಿಲ್ಲಿಸಿ ಮರ...
13-02-25 10:20 pm
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm
Mangalore, Sieal Residency Bar Valachil, Crim...
12-02-25 10:28 pm