ಬ್ರೇಕಿಂಗ್ ನ್ಯೂಸ್
27-02-25 03:28 pm HK News Desk ಕರ್ನಾಟಕ
ಹುಬ್ಬಳ್ಳಿ, ಫೆ.27 : ಡಿಕೆ ಶಿವಕುಮಾರ್ ನಿಮ್ಮ ಪಕ್ಷದ ತತ್ವದ ವಿರುದ್ದ ಇದ್ರೆ ಅವರನ್ನು ಸಸ್ಪೆಂಡ್ ಮಾಡಿಬಿಡಿ ಎಂದು ಬೆಳಗಾವಿ ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಅವರು ಕುಂಭಮೇಳಕ್ಕೆ ಹೋಗಿರೋದು, ಕೊಯಮತ್ತೂರಿಗೆ ಹೋಗಿರೋದು ಸಹಜ. ಇದರಲ್ಲಿ ದೊಡ್ಡಸ್ಥಿಕೆ ಏನಿಲ್ಲ. ಇದು ನಿಮ್ಮ ಪಕ್ಷಕ್ಕೆ ಸರಿ ಆಗಲ್ಲ ಅಂದ್ರೆ, ಡಿಕೆ ಶಿವಕುಮಾರ್ ಸಸ್ಪೆಂಡ್ ಮಾಡಿ. ಅವರು ನಿಮ್ಮ ಪಕ್ಷದ ತತ್ವ ಸಿದ್ದಾಂತಕ್ಕೆ ವಿರೋಧವಾಗಿದ್ರೆ ಅವರನ್ನು ಪಾರ್ಟಿಯಿಂದ ಹೊರಗೆ ಹಾಕಿ.
ಕಾಂಗ್ರೆಸ್ ಗೆ ಹಿಂದೂಗಳ ಬಗ್ಗೆ ದ್ವೇಷ ಇದೆ. ಇದರಿಂದ ಕಾಂಗ್ರೆಸ್ ಉದ್ದಾರ ಆಗಲ್ಲ. ಹಿಂದೂಗಳು ಇಲ್ಲದೆ ನೀವು ರಾಜಕಾರಣ ಮಾಡ್ತೀನಿ ಅಂದರೆ ಅದು ನಿಮ್ಮ ಹಣೆಬರಹ. ಹಿಂದೂಗಳನ್ನ ಕೀಳಾಗಿ ಕಾಣೋದೆ, ಅವರ ಅವನತಿಗೆ ಕಾರಣ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಿಂದೂ ವಿರೋಧಿಯಾಗಿವೆ. ಈ ದೇಶ ಹಿಂದೂಗಳ ದೇಶ, ಹಿಂದೂ ರಾಷ್ಟ್ರ ಅನ್ನೋ ಪರಂಪರೆ ಇದೆ. ಇದಕ್ಕೆ ಎಲ್ಲೂ ಅಡ್ಡಿಯಾಗಬಾರದು ಎಂದರು.
ಕಮ್ಯುನಿಸ್ಟರು ಕೂಡ ಹಿಂದೂ ದೇವಾಲಯಕ್ಕೆ ಹೋಗಿದ್ದಾರೆ. ಅವರು ಕೂಡಾ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಕಾಂಗ್ರೆಸ್ ನವರು ಎಷ್ಟು ಜನ ಕುಂಭಮೇಳಕ್ಕೆ ಹೋಗಿದ್ದಾರೆ. ರಾಜಕಾರಣವನ್ನು ಧರ್ಮಕ್ಕೆ ಥಳಕು ಹಾಕಬಾರದು ಎಂದು ಶೆಟ್ಟರ್ ಹೇಳಿದರು.
ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆಗೈದ ಪ್ರಕರಣ ಸಂಬಂಧಿಸಿ, ನಾನು ಬೆಳಗಾವಿ ಸಂಸದನಾಗಿ ಕೆಲಸ ಮಾಡತಿದೀನಿ. ಅಲ್ಲಿನ ಜನ ಎಲ್ಲರೂ ನಂಗೆ ಸಪೋರ್ಟ್ ಮಾಡಿದಾರೆ. ಹಿಂದೆ ಮರಾಠರು ಮತ್ತು ಕನ್ನಡಿಗರ ನಡುವೆ ಗ್ಯಾಪ್ ಇತ್ತು. ಎಲ್ಲರೂ ಅಣ್ಣ ತಮ್ಮಂದಿರ ತರಹ ಕೆಲಸ ಮಾಡತಿದಾರೆ. ಸಂಘರ್ಷ ಮಾಡಲಿಕ್ಕೆ ಹೋಗಬಾರದು. ಆ ಘಟನೆ ಆಗಬಾರದಿತ್ತು. ಹಲ್ಲೆ ಮಾಡಿದವರ ವಿರುದ್ದ ಕ್ರಮ ಆಗಬೇಕು. ಪೋಕ್ಸೊ ಕೇಸ್ ಹಾಕಿದ್ದು ಕೂಡ ತಪ್ಪು. ಪೋಕ್ಸೋ ಕೇಸ್ ಹಾಕಿರೋ ಕಾರಣಕ್ಕೆ ಅದು ಹೆಚ್ಚಿನ ಮಹತ್ವ ಬಂತು ಎಂದರು. ನಾವೆಲ್ಲರೂ ಭಾರತದಲ್ಲಿದ್ದೇವೆ. ಪಾಕಿಸ್ತಾನ ಇಂಡಿಯಾ ಅಲ್ಲ. ಸಹೋದರರ ರೀತಿಯಲ್ಲಿ ನಾವು ಬಾಳುತಿದೀವಿ. ಅದು ಡಿಸ್ಟರ್ಬ್ ಆಗಬಾರದು ಎಂದು ಶೆಟ್ಟರ್ ಹೇಳಿದರು.
Belgaum MP and former CM Jagadish Shettar said that if DK Shivakumar is against your party's principles, then suspend him.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm