ಬ್ರೇಕಿಂಗ್ ನ್ಯೂಸ್
02-03-25 09:39 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 02: ಯಾವ ನಟನಿಗೆ, ಯಾವ ನಟಿಗೆ ಎಲ್ಲೆಲ್ಲಿ ನಟ್ಟು, ಬೋಲ್ಟು ಟೈಟ್ ಮಾಡಬೇಕು ಅಂತ ನನಗೆ ಗೊತ್ತಿದೆ. ಇನ್ಮುಂದೆಯಾದರೂ ನಿಮ್ಮಿಂದ ಉತ್ತಮ ಸ್ಪಂದನೆ ನೀಡುವಂತಾಗಲಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಾ. 1ರಂದು ವಿಧಾನಸೌಧದಲ್ಲಿ ಬೆಂಗಳೂರು ಚಲನಚಿತ್ರೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಆದರೆ, ಈ ಸಮಾರಂಭಕ್ಕೆ ಸಿನಿಮಾ ರಂಗದ ಅನೇಕರು ಗೈರಾಗಿದ್ದರು. ಇಡೀ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದವರು ಅಥವಾ ವೇದಿಕೆ ಮುಂದೆ ಆಸನಗಳಲ್ಲಿ ಕುಳಿತಿದ್ದವರಲ್ಲಿ ಸುಮಾರು 20 ಮಂದಿ ಮಾತ್ರ ಚಿತ್ರರಂಗದವರಿದ್ದರು. ಇದನ್ನು ನೋಡಿ ಡಿಕೆ ಬೇಸರ ವ್ಯಕ್ತಪಡಿಸಿದರು.
“ಇತ್ತೀಚೆಗೆ ನನಗೆ ಚಲನಚಿತ್ರರಂಗದ ಮೇಲೆ, ಫಿಲ್ಮ್ ಚೇಂಬರ್ ಮೇಲೆ, ನಟ- ನಟಿಯರ ಮೇಲೆ ಕೋಪ ಬಂದುಬಿಟ್ಟಿದೆ’’ ಎನ್ನುತ್ತಲೇ ಕ್ಲಾಸ್ ಆರಂಭಿಸಿದ ಡಿಕೆಶಿಯವರು, “ಇದು ಕನ್ನಡ ಚಿತ್ರರಂಗ ಮನೆಯ ಹಬ್ಬ. ಈ ಹಬ್ಬಕ್ಕೆ ಮನೆಯವರೆಲ್ಲರೂ ಬರಬೇಕು. ಆದರೆ, ಹುಡುಕಿ ನೋಡಿದರೆ 20ರಷ್ಟೂ ಜನರು ಬಂದಿಲ್ಲ. ಸಿನಿಮಾಕ್ಕಾಗಿ ಸರ್ಕಾರ ಮಾಡುತ್ತಿರುವ ಈ ಕಾರ್ಯಕ್ರಮಕ್ಕೆ ಬರಬೇಕಲ್ಲವೇ?’’ ಎಂದು ಹೇಳಿದರು.
ಇದೇ ವೇಳೆ, ನಟ - ನಟಿಯರ ವಿರುದ್ಧವೂ ಆಕ್ರೋಶ ಹೊರಹಾಕಿದ ಡಿಕೆಶಿ, “ನಟ, ನಟಿಯರ ನಡವಳಿಕೆ ಬಗ್ಗೆ ನನಗೆ ಬೇಸರವಾಗ್ತಿದೆ. ಏನಾದರೂ ಕೆಲಸ ಇದ್ದರೆ ಬಂದು ಭೇಟಿ ಮಾಡಿ ಕೆಲಸ ಮಾಡಿಕೊಂಡು ಹೋಗ್ತೀರಿ. ಆದರೆ, ಸರ್ಕಾರದ ಕರೆಗಳಿಗೆ ಓಗೊಡುವುದಿಲ್ಲ. ಹಿಂದೆ, ಕಾಂಗ್ರೆಸ್ ಪಕ್ಷ ಕುಡಿಯುವ ನೀರಿಗಾಗಿ ಅಭಿಯಾನ ಮಾಡಿದ್ದೆವು. ನಾವು ನಡೆಸಿದ ಪಾದಯಾತ್ರೆಗೆ ಚಿತ್ರರಂಗದ ಬೆಂಬಲ ಕೋರಿದ್ದೆವು. ಆದರೆ, ಸಾಧು ಕೋಕಿಲ ಹಾಗೂ ನಟ ದುನಿಯಾ ವಿಜಯ್ ಮಾತ್ರ ನಮ್ಮ ಜೊತೆ ಬಂದರು. ಹಾಗಾಗಿಯೇ, ನಮಗೆ ಗೌರವ ಕೊಟ್ಟವರಿಗೆ ನಾವು ಏನಾದರೂ ಮಾಡಬೇಕು ಎಂದು ಸಾಧು ಕೋಕಿಲ ಅವರನ್ನು ನಾವು ಮಾಧ್ಯಮ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದು ಹೇಳಿದರು.
“ನಾನು ಬೇರೆ ನಟ, ನಟಿಯರ ಚಲನವಲನ, ಸರ್ಕಾರದ ಕರೆಗಳಿಗೆ ನೀವು ಯಾವ ರೀತಿ ಗೌರವ ಕೊಡ್ತೀರಿ ಎಂಬದನ್ನು ನಾನು ಗಮನಿಸಿದ್ದೇನೆ. ಎಲ್ಲರ ಚಲನವಲನಗಳನ್ನು ಗಮನಿಸುತ್ತಿದ್ದೇನೆ. ನನ್ನನ್ನು ಎಲ್ಲರೂ ಬಳಸಿಕೊಳ್ತಾರೆ. ಆಮೇಲೆ ಬಿಸಾಕಿದ್ದಾರೆ. ಇನ್ನು ಮುಂದೆ ಹಾಗಾಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಎಲ್ಲಾ ನಟರ, ನಟಿಯರ ಚಲನವಲನಗಳನ್ನು ಗಮನಿಸಿದ್ದೇನೆ. ನೀವು ಸರ್ಕಾರದ ಕರೆಗಳಿಗೆ ಸಹಕಾರ ಕೊಡಲಿಲ್ಲ ಎಂದರೆ ನಿಮಗೂ ನಾವು ಸಹಕಾರ ಕೊಡೋದಿಲ್ಲ. ನಾವು ಮನಸ್ಸು ಮಾಡಿದರೆ ಕೆಲವು ಸ್ಥಳಗಳಿಗೆ ನಿಮ್ಮ ಸಿನಿಮಾಗಳ ಚಿತ್ರೀಕರಣ ನಡೆಯದಂತೆ ಮಾಡಬಹುದು. ಹಾಗೆ ಮಾಡಿದರೆ ನಿಮ್ಮ ಸಿನಿಮಾಕ್ಕೂ ಪೆಟ್ಟು ಬೀಳುತ್ತದೆ. ಇದನ್ನು ಎಚ್ಚರಿಕೆಯನ್ನಾಗಿಯಾದರೂ ತಗೆದುಕೊಳ್ಳಿ ಅಥವಾ ಮನವಿಯೆಂದಾದರೂ ತೆಗೆದುಕೊಳ್ಳಿ’’ ಎಂದು ಎಚ್ಚರಿಸಿದರು.
ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು - ಎಲ್ಲರೂ ಸೇರಿ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದೀರಿ. ಅದರ ಬಗ್ಗೆ ನಮಗೆ ಖುಷಿಯಿದೆ. ಆದರೆ, ಚಲನಚಿತ್ರೋತ್ಸವ ಮತ್ತಿತರ ಸರ್ಕಾರಿ ಕಾರ್ಯಕ್ರಮಗಳನ್ನು ಜನರತ್ತ ಕೊಂಡೊಯ್ಯಲೂ ನಿಮಗೆ ಜವಾಬ್ದಾರಿಯಿದೆ ಎಂದು ಅವರು ಹೇಳಿದರು.
ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಗರಂ ;
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ನಟ ನಿಖಿಲ್ ಕುಮಾರಸ್ವಾಮಿ ಕೂಡ ವಾಗ್ದಾಳಿ ನಡೆಸಿದ್ರು. ಡಿಕೆ ಶಿವಕುಮಾರ್ ವಾರ್ನಿಂಗ್‌ಗೆ ಯಾರೂ ಹೆದರಿ ಕೂರೋದಿಲ್ಲ ಎಂದು ನಟ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಡಿಕೆಶಿ ಅವರ ಹೇಳಿಕೆಯಿಂದ ಕಲಾವಿದರು, ನಿರ್ಮಾಪಕ, ನಿರ್ದೇಶಕರು, ಟೆಕ್ನೀಷನ್ಸ್‌ಗಳ ಮನಸಿಗೆ ನೋವಾಗಿದೆ. ಕಲಾವಿದರು ಬಹಳ ಸೂಕ್ಷ್ಮ ಸ್ವಭಾವದ ವ್ಯಕ್ತಿಗಳು ಎಂದು ಹೇಳಿದ್ರು.
Shivakumar recently expressed his disappointment over the Kannada film industry's glaring absence at the event. Speaking to the gathered audience, he made it clear that he was disappointed with the lack of support from local filmmakers, actors, and other key figures in the industry. His words served as a call to action and a subtle warning for the film fraternity to step up and actively engage in efforts to elevate the industry.
03-03-25 02:07 pm
Bangalore Correspondent
ನಟರಿಗೆ ನಮ್ಮ ಸರ್ಕಾರ ಪ್ರಶಸ್ತಿ ಕೊಟ್ರೆ ಬೇಡ ಅಂತೀರಿ...
03-03-25 12:33 pm
DK Shivakumar, Veerappa Moily: ಡಿಕೆಶಿ ಸಿಎಂ ಆಗ...
03-03-25 12:03 pm
ರಾಜ್ ಕುಮಾರ್, ಶಂಕರ್ನಾಗ್, ವಿಷ್ಣುವರ್ಧನ್ ಅಂತವರು...
02-03-25 10:24 pm
DK Shivakumar, Kannada film industry: ಸಿನಿಮಾ...
02-03-25 09:39 pm
01-03-25 10:39 pm
HK News Desk
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
ಪಾಕಿಸ್ತಾನ ಮದ್ರಸಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ;...
28-02-25 07:46 pm
03-03-25 03:00 pm
Mangalore Correspondent
Udupi, DK Shivakumar: ಜಾತಿ ರಾಜಕಾರಣ, ಗುಂಪುಗಾರಿ...
02-03-25 11:08 pm
Puttur Bus Auto Accident: ಪತಿಯ ಆಟೋದಲ್ಲಿ ತೆರಳು...
02-03-25 11:01 pm
CM Siddaramaiah, BJP BY Vijayendra, Udupi: ರಾ...
02-03-25 09:36 pm
Dk Shivakumar, Udupi: ತ್ರಿವೇಣಿ ಸಂಗಮದಲ್ಲಿ ನೀರಿ...
02-03-25 06:10 pm
03-03-25 01:51 pm
HK News Desk
Bangalore Falcon Ponzi scheme, Fraud: ಇನ್ ವಾಯ...
02-03-25 06:37 pm
Bangalore KR Puram Police, Bike Robbery, Crim...
01-03-25 05:54 pm
Bike Robbery, Mangalore Police, Crime, TD Nag...
01-03-25 02:40 pm
5 ವರ್ಷದ ಹೆಣ್ಣು ಮಗುವಿಗೆ ಕ್ರೂರ ಹಿಂಸೆ ನೀಡಿ ಅತ್ಯಾ...
28-02-25 02:37 pm