Mla Ravi Ganiga, Rashmika Mandanna: ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದವರು ; ಈಗ ನಂಗೆ ಕರ್ನಾಟಕ ಎಲ್ಲಿದೆ ಅಂತಾ ಗೊತ್ತಿಲ್ಲ, ಟೈಂ ಇಲ್ಲ ಅಂತಾಳೆ, ಇವರಿಗೆ ಬುದ್ದಿ ಕಲಿಸಬೇಕಲ್ವಾ? ; ಶಾಸಕ‌ ರವಿ ಗಣಿಗ ನಿಗಿನಿಗಿ ಕೆಂಡ

03-03-25 11:03 pm       Bangalore Correspondent   ಕರ್ನಾಟಕ

ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಲು ಹೋದಾಗ, ನನ್ನ ಮನೆ ಇರೋದು ಹೈದರಾಬಾದ್‌ನಲ್ಲಿ, ಕರ್ನಾಟಕ ಎಲ್ಲಿದೆ ಅಂತ ಗೊತ್ತಿಲ್ಲ ಅಂದಿದ್ರು ಎಂದು ಶಾಸಕ ಗಣಿಗ ರವಿಕುಮಾರ್ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರು, ಮಾ 03: ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಲು ಹೋದಾಗ, ನನ್ನ ಮನೆ ಇರೋದು ಹೈದರಾಬಾದ್‌ನಲ್ಲಿ, ಕರ್ನಾಟಕ ಎಲ್ಲಿದೆ ಅಂತ ಗೊತ್ತಿಲ್ಲ ಅಂದಿದ್ರು ಎಂದು ಶಾಸಕ ಗಣಿಗ ರವಿಕುಮಾರ್ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿನಿಮಾದವರು ಬಾಯಿಮುಚ್ಚಿಕೊಂಡು ಇರ್ಬೇಕು. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದವರು. ಅವರನ್ನು ಕಳೆದ ವರ್ಷ ಚಲನಚಿತ್ರೋತ್ಸವಕ್ಕೆ ಆಹ್ವಾನ ಮಾಡಿದ್ವಿ. ಆದರೆ ನಾನು ಹೈದರಾಬಾದ್‌ನಲ್ಲಿ ಇರೋದು, ನನಗೆ ಕರ್ನಾಟಕ ಎಲ್ಲಿದೆ ಅಂತಾ ಗೊತ್ತಿಲ್ಲ, ಟೈಂ ಇಲ್ಲ, ಬರಲ್ಲ ಎಂದು ಹೇಳಿದ್ದರು. ಇವರಿಗೆ ಬುದ್ದಿ ಕಲಿಸಬೇಕಲ್ವಾ? ಎಂದು ಕೆಂಡಕಾರಿದರು.

ನಾನು ಸಿಎಂ- ಡಿಸಿಎಂಗೆ ಪತ್ರ ಬರೆಯುತ್ತೇನೆ. ಸಿನಿಮಾ ಸಬ್ಸಿಡಿಗಳನ್ನು ನಿಲ್ಲಿಸುವ ಬಗ್ಗೆ ಯೋಚಿಸಬೇಕು. ಆಂಧ್ರದ ನರಸಿಂಹಲು ಡಿಕೆಶಿ ವಿರುದ್ಧ ಮಾತನಾಡುತ್ತಾನೆ. ಆಂಧ್ರಪ್ರದೇಶದಿಂದ ಬಂದು ದುಡ್ಡು ದೋಚಿಕೊಂಡು ಹೋಗಿ, ನಮ್ಮ ಬಗ್ಗೆ ಮಾತನಾಡುತ್ತಾನೆ. ಮೊನ್ನೆ ಸಿಸಿಎಲ್ ಮ್ಯಾಚ್ ನಡೀತು ಅಲ್ವಾ, ಆಗ ನಿಲ್ಲಿಸಬೇಕಿತ್ತು. ಇದು ಲಾಸ್ಟ್ ವಾರ್ನಿಂಗ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

Congress MLA wants Rashmika Mandanna taught a lesson for 'disregarding' Kannada