ಬ್ರೇಕಿಂಗ್ ನ್ಯೂಸ್
09-03-25 09:51 pm HK News Desk ಕರ್ನಾಟಕ
ಚಿತ್ರದುರ್ಗ, ಮಾ.9 : ಜಗತ್ತು ಹಲವು ರೀತಿಯ ವಿಸ್ಮಯಗಳಿಗೆ ಸಾಕ್ಷಿಯಾಗಿದ್ದಿದೆ. ಪ್ರತಿ ಬಾರಿಯೂ ಜನರೂ ಅಷ್ಟೇ ಅಚ್ಚರಿ ಪಟ್ಟುಕೊಂಡದ್ದೂ ಇದೆ. ಕರು ಹಾಕಿದ ಕೂಡಲೇ ಹಸು ಹಾಲು ನೀಡುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಇಲ್ಲೊಂದು ಕರು ಜನಿಸಿದ ಮೂರೇ ದಿನದಲ್ಲಿ ತನ್ನ ಕೆಚ್ಚಲಿನಿಂದ ಹಾಲು ಇಳಿಸಿದೆ. ಹಾಲು ಕುಡಿಯುವುದಕ್ಕೇ ಪರದಾಡಬೇಕಾದ ಹೊತ್ತಿನಲ್ಲಿ ರೈತ ಹಾಲು ಕರೆಯುವಾಗ ಸ್ವತಃ ಹಾಲು ಇಳಿಸಿ ಜನರನ್ನು ಅಚ್ಚರಿಗೊಳಿಸಿದೆ.
ಹೀಗಾಗಿ, ಇದೇನೋ ಪವಾಡ ಘಟಿಸಿದೆ ಎಂದು ಸ್ಥಳೀಯರು ಕರುವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದ್ದಾರೆ. ಇದೇ ವೇಳೆ, ಈ ವಿಶಿಷ್ಟ ಕರುವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ. ಚಿತ್ರದುರ್ಗ ತಾಲೂಕಿನ ಅನ್ನೇಹಾಳ ಗ್ರಾಮದಲ್ಲಿ ಇಂಥದ್ದೊಂದು ಪವಾಡ ನಡೆದಿದ್ದು ಅಚ್ಚರಿ ಸೃಷ್ಟಿಸಿದೆ. ಅನ್ನೇಹಾಳ ಗ್ರಾಮದ ನಿರಂಜನ ಮೂರ್ತಿ ಎಂಬವರ ಮನೆಯಲ್ಲಿ ಡೈರಿ ಹಸು ಮರಿ ಹಾಕಿದ್ದು ಆ ಕರು ಜನಿಸಿದ ಮೂರೇ ದಿನಕ್ಕೆ ಹಾಲು ಕೊಡಲು ಪ್ರಾರಂಭಿಸಿದೆ. ಕರುವಿನ ಕೆಚ್ಚಲಿನಿಂದ ಹಾಲು ಸುರಿಯುತ್ತಿದ್ದುದನ್ನ ಕಂಡ ನಿರಂಜನ ಮೂರ್ತಿ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ತಾಯಿ ಹಸುವಿನ ಹಾಲು ಕುಡಿದು ಸುತ್ತಾಡಿಕೊಂಡಿರಬೇಕಾದ ಕರು 31 ದಿನಗಳಿಂದ ಸ್ವತಃ ಹಾಲು ಕೊಡ್ತಿರೋದು ಅಚ್ಚರಿಗೆ ಕಾರಣವಾಗಿದೆ.
ನಿರಂಜನ ಮೂರ್ತಿ 6 ತಿಂಗಳ ಹಿಂದೆ ಹಸು ಖರೀದಿಸಿದ್ದರು. ಈಗಾಗಲೇ ಆ ಹಸು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಆದ್ರೆ ಆ ಎರಡೂ ಹೆಣ್ಣು ಕರುಗಳು ಸಹಜವಾಗಿದ್ದವು. ಆದ್ರೆ ಈ ಮೂರನೇಯದ್ದು ಮಾತ್ರ ಕಾಮಧೇನುವಿನಂತೆ ಹುಟ್ಟಿದ ಮೂರೇ ದಿನಕ್ಕೆ ಹಾಲು ನೀಡುತ್ತಿದೆ. ದಿನಕ್ಕೆ ಅರ್ಧ ಲೀಟರ್ಗೂ ಹೆಚ್ಚು ಹಾಲು ಕರೆಯುವ ಕರುವನ್ನು ಗ್ರಾಮಸ್ಥರು ಕಾಮಧೇನು ಅಂತ ಪೂಜೆ ಮಾಡುತ್ತಿದ್ದಾರೆ.
ಹಸು ಗರ್ಭ ಧರಿಸಿ ಕರು ಹಾಕಿದರೆ ಮಾತ್ರ ಹಾಲು ನೀಡುತ್ತವೆ. ಅದರಲ್ಲೂ ಕರುವನ್ನೇ ಮೊದಲು ಜಗಿಯುವಂತೆ ಮಾಡಿ ಕೆಚ್ಚಲಿನಲ್ಲಿ ಹಾಲು ಇಳಿಸಬೇಕಾದ ಪದ್ಧತಿ ಇದೆ. ಈಗೆಲ್ಲ ಹೈಬ್ರೀಡ್ ದನಗಳು ಬಂದಿದ್ದು ಹಾಲಿನ ಉದ್ದೇಶಕ್ಕಾಗಿಯೇ ಸಾಕುತ್ತಾರೆ. ಆದರೆ, ಇದ್ಯಾವುದೂ ಇಲ್ಲದೆ ಕರುವೊಂದು ಹಾಲು ಕೊಡುವುದು ಜಗದ ಸೋಜಿಗಕ್ಕೆ ಸಾಕ್ಷಿಯಾಗಿದೆ.
A calf has begun producing milk just three days after its birth, captivating the hearts and minds of residents in Chitradurga. The miraculous occurrence has drawn crowds of curious locals eager to witness this extraordinary phenomenon.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm