ಬ್ರೇಕಿಂಗ್ ನ್ಯೂಸ್
10-03-25 02:07 pm HK News Desk ಕರ್ನಾಟಕ
ಮೈಸೂರು, ಮಾ.10 : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮ ಸೈಟುಗಳನ್ನು ಪಡೆದ ಆರೋಪ ಕೇಳಿಬಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ, ಅವರ ಪತ್ನಿ ಬಿಎಂ ಪಾರ್ವತಿಯವರ ಹೆಸರಿನಲ್ಲಿದ್ದ ಸೈಟುಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಆದರೆ, ಪ್ರಕರಣದಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಗುತ್ತಿದ್ದಂತೆ ಹಿಂದಕ್ಕೆ ನೀಡಿರುವ ಮುಡಾ ಸೈಟುಗಳನ್ನು ಮತ್ತೆ ಪಡೆಯಲು ಮುಂದಾಗಿದ್ದಾರೆ.
ಈ ಬಗ್ಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಸೈಟು ಹಂಚಿಕೆಯಲ್ಲಿ ಅಕ್ರಮ ಕೇಳಿಬಂದಿದ್ದರಿಂದ ಮುಡಾ ಸೈಟುಗಳನ್ನು ತಾಯಿ ಹಿಂದಕ್ಕೆ ನೀಡಿದ್ದರು. ಈಗ ನಮ್ಮ ಕಡೆಯಿಂದ ಅಕ್ರಮ ಆಗಿಲ್ಲವೆಂದು ವರದಿ ಬಂದಿರುವುದರಿಂದ ಮುಡಾಕ್ಕೆ ಹಿಂದಿರುಗಿಸಿದ್ದ ಸೈಟುಗಳನ್ನು ಮತ್ತೆ ಕ್ಲೈಮ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಟುಗಳಿಗೆ ಸಂಬಂಧಿಸಿ ಯಾವುದೇ ಅಕ್ರಮವಾಗಿಲ್ಲ. ಈಗಾಗಲೇ ತನಿಖೆ ಆಗಿದ್ದು ನಮ್ಮ ಕುಟುಂಬ ಆರೋಪ ಮುಕ್ತವಾಗಲಿದೆ. ಆಗ ಮುಡಾಕ್ಕೆ ಹಿಂದಿರುಗಿಸಲಾಗಿದ್ದ ಸೈಟುಗಳನ್ನು ಮತ್ತೆ ನಮ್ಮ ತಾಯಿ ಬಿಎಂ ಪಾರ್ವತಿಯವರು ಹಿಂದಕ್ಕೆ ಪಡೆಯಲಿದ್ದಾರೆ ಎಂದು ಯತೀಂದ್ರ ತಿಳಿಸಿದ್ದಾರೆ.
ಕಾನೂನಾತ್ಮಕವಾಗಿ ನಾವು ಈಗಲೂ ಮುಡಾ ಸೈಟುಗಳ ಮೇಲೆ ಅಧಿಕಾರ ಹೊಂದಿದ್ದೇವೆ. ಆದರೆ, ತನಿಖೆಗೆ ಸಹಕರಿಸುವ ಉದ್ದೇಶದಿಂದ ವಿವಾದಕ್ಕೆ ಒಳಗಾಗಿದ್ದ ಸೈಟುಗಳನ್ನು ಮುಡಾಕ್ಕೆ ಹಿಂದಿರುಗಿಸಿದ್ದೇವೆ. ತನಿಖೆ ಮುಗಿದ ನಂತರ ಸೈಟುಗಳನ್ನು ನಮ್ಮ ತಾಯಿ ಮರಳಿ ಪಡೆಯಲು ಪ್ರಯತ್ನಿಸಲಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ.
ಮುಡಾ ಸೈಟ್ ಬಗ್ಗೆ ತನಿಖೆ ನಡೆಯುತ್ತಿದ್ದು ಒಂದು ವೇಳೆ ಅಕ್ರಮ ಏನಾದರೂ ನಡೆದಿದ್ದರೆ ಅದು ಅಧಿಕಾರಿಗಳ ತಪ್ಪಿನಿಂದ ಆಗಿರುವಂಥದ್ದು ಎಂಬ ರೀತಿಯಲ್ಲಿ ಮಾತನಾಡಿದ ಯತೀಂದ್ರ, ಈಗಾಗಲೇ ಮುಡಾ ಶುದ್ಧೀಕರಣಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಾದರಿಯಲ್ಲಿ ಮುಡಾವನ್ನು ಬದಲಾವಣೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಮುಂದೆ, ಮುಡಾ ಆಡಳಿತ ಮಂಡಳಿಯಲ್ಲಿ ಯಾವುದೇ ಜನಪ್ರತಿನಿಧಿಗಳು ಇರುವುದಿಲ್ಲ. ಕೇವಲ ಸರ್ಕಾರದಿಂದ ನಾಮನಿರ್ದೇಶನಗೊಂಡವರು ಮಾತ್ರ ಇರುತ್ತಾರೆ. ಮುಡಾ ಅಕ್ರಮಗಳ ಬಗ್ಗೆ ಈಗಾಗಲೇ ಸ್ವತಂತ್ರ್ಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುತ್ತಿದ್ದು, ಅದರ ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
Chief Minister Siddaramaiah’s son and MLC Yathindra said a decision on whether or not to reclaim the surrendered Mysuru Urban Development Authority (MUDA) sites through the court will be taken by his mother Parvathi after the ongoing investigation in the matter concludes.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm