ಬ್ರೇಕಿಂಗ್ ನ್ಯೂಸ್
11-03-25 03:41 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.11 : ಕಿರು ಫೈನಾನ್ಸ್ ಸಂಸ್ಥೆಗಳು ರಾಜ್ಯದಲ್ಲಿ ಕಪ್ಪು ಹಣವನ್ನು ಬಿಳಿಯಾಗಿಸುವ ಕೂಪಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು ವರ್ಷದಲ್ಲಿ 40 ಸಾವಿರ ಕೋಟಿಯಷ್ಟು ಕಪ್ಪು ಹಣವನ್ನು ಪಡೆದು ಬಿಳಿಯಾಗಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಮೈಕ್ರೋ ಫೈನಾನ್ಸ್) ನಿಯಂತ್ರಣ ಮಸೂದೆಗೆ ವಿಧಾನಸಭೆಯಲ್ಲಿ ಸೋಮವಾರ ಅನುಮೋದನೆ ಸಿಕ್ಕಿದೆ. ವಿಧೇಯಕದ ಕುರಿತು ಮಾತನಾಡಿದ ಸಚಿವ ಎಚ್.ಕೆ ಪಾಟೀಲ್, ನೋಂದಾಯಿತವಲ್ಲದ ಲೇವಾದೇವಿದಾರರನ್ನು ನಿಯಂತ್ರಿಸುವುದು, ಜನಸಾಮಾನ್ಯರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುವುದು ಈ ಕಾಯಿದೆಯ ಉದ್ದೇಶ. ಕಾನೂನು ಬದ್ಧ ಲೇವಾದೇವಿಯನ್ನು ಕಾಯಿದೆ ನಿಷೇಧಿಸುವುದಿಲ್ಲ. ಆದರೆ ಬಲವಂತದ ಸಾಲ ವಸೂಲಾತಿಯನ್ನು ಕಾಯ್ದೆ ನಿರ್ಬಂಧಿಸಲಿದೆ. ಅಧಿಕ ಬಡ್ಡಿಯಿಂದಾಗಿ ಸಾಲಗಾರರು ಬೀದಿಗೆ ಬರುವಂತಹ ಮತ್ತು ಆತಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ದೂಡುವುದನ್ನು ತಡೆಯಲು ಹಾಗೂ ತಪ್ಪಿತಸ್ಥರಿಗೆ 10 ವರ್ಷ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲು ಕಾಯ್ದೆ ತರಲಾಗಿದೆ ಎಂದು ಹೇಳಿದರು.
ಕಿರು ಸಾಲ ಮತ್ತು ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿ ಮಾಫಿಯಾಗಳು, ಬಡ ಗ್ರಾಮೀಣ ನಿರ್ಗತಿಕರು, ನಗರ ಕಾರ್ಮಿಕರು, ಸಮಾಜದ ಅಶಕ್ತ ಮತ್ತು ದುರ್ಬಲದವರನ್ನು ಪೀಡಿಸುವಂತಹ ಪ್ರಕರಣಗಳು ವರದಿಯಾಗಿವೆ. ದುಪ್ಪಟ್ಟು ಬಡ್ಡಿ ವಿಧಿಸಿ ಸಾಲಗಾರರನ್ನು ತೊಂದರೆಗೆ ಸಿಲುಕಿಸುವುದನ್ನು ತಡೆಯಲು ಈ ವಿಧೇಯಕ ತರಲಾಗಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕುವುದು, ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಕಿರುಕುಳ ತಪ್ಪಿಸುವ ಉದ್ದೇಶವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ವ್ಯವಹಾರದಲ್ಲಿ ಸುಮಾರು 40 ಸಾವಿರ ಕೋಟಿ ರೂ. ನಗದು ವಹಿವಾಟು ಚಲಾವಣೆಯಲ್ಲಿದೆ. ಇದು ಯಾರ ಹಣ? ಸರಕಾರದ ಅನುದಾನವಿಲ್ಲದೆ, ಆರ್‌ಬಿಐ ಸಹಾಯ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿರುವುದರ ಅರ್ಥವೇನು? ಇದೆಲ್ಲವೂ ಕಪ್ಪು ಹಣ ಎಂಬುದರಲ್ಲಿ ಅನುಮಾನ ಬೇಡ. ಬೇರೆ ಯಾವುದೇ ಪ್ರಾಮಾಣಿಕ ವ್ಯವಹಾರವು ಈ ರೀತಿಯ ಲಾಭವನ್ನು ಗಳಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಕಪ್ಪು ಹಣವನ್ನು ಹೂಡಿಕೆ ಮಾಡುತ್ತಾನೆ. ಇದಕ್ಕೆ ಪ್ರತಿಯಾಗಿ ಶೇ.40-50ರಷ್ಟು ಲಾಭವನ್ನು ಪಡೆಯುತ್ತಾನೆ ಅಂದರೆ ಇದೆಲ್ಲ ಕಾನೂನು ರೀತ್ಯ ಅಪರಾಧ. ಇಲ್ಲಿ ಹಣ ಸಾಲ ನೀಡುವವರು ಶ್ರೀಮಂತರಷ್ಟೇ ಅಲ್ಲ, ಅಕ್ರಮವಾಗಿ ಸಂಪತ್ತು ಗಳಿಸುತ್ತಿರುವುದಕ್ಕೆ ಮೈಕ್ರೋ ಫೈನಾನ್ಸ್ ಕಾರಣವಾಗುತ್ತಿದೆ ಎಂದು ಎಚ್.ಕೆ ಪಾಟೀಲ್ ಹೇಳಿದರು.
According to Karnataka's Law & Parliamentary Affairs Minister H K Patil, the business being done by unregistered money lenders in the state amounted to Rs 40,000 crore in 'black money'. He was speaking at the current Karanataka Assembly session where...
28-10-25 07:18 pm
Bangalore Correspondent
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm