ಬ್ರೇಕಿಂಗ್ ನ್ಯೂಸ್
15-03-25 09:18 pm HK News Desk ಕರ್ನಾಟಕ
ಕೊಪ್ಪಳ, ಮಾ.15 : ಕನಕಗಿರಿ ಕ್ಷೇತ್ರದ ಮಾಜಿ ಶಾಸಕ, ಹಾಲಿ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸೂಗೂರು ಸರ್ಕಾರದ ಮಹಿಳಾ ಅಧಿಕಾರಿಯನ್ನು ಎರಡನೇ ಮದುವೆಯಾಗಿದ್ದಾರೆಯೇ ಎಂಬ ಗುಸು ಗುಸು ಜಿಲ್ಲೆಯಲ್ಲಿ ಹಬ್ಬಿದೆ.
ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ಕೊಟ್ಟಾಗ ಅಲ್ಲಿದ್ದ ಉಪ ನಿರ್ದೇಶಕಿ ಶ್ವೇತಾ ಅವರನ್ನು ನಿನ್ನ ಗಂಡ ಯಾರಮ್ಮಾ.. ಏನ್ ಮಾಡ್ತಾರೆ ಅವರು ಅಂತ ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ನನ್ನ ಪತಿ Politician, ಕನಕಗಿರಿಯ ಮಾಜಿ ಶಾಸಕರು, ಬಸವರಾಜ್ ದಡೆಸೂಗೂರ್ ಅಂತ ಒಪ್ಪಿಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಧ್ಯಮದವರ ಎದುರಲ್ಲೇ ಈ ರೀತಿ ಉತ್ತರ ಕೊಟ್ಟಿದ್ದು ಮಾಜಿ ಶಾಸಕ ದಡೇಸುಗೂರು ಮತ್ತೊಂದು ಮದುವೆಯಾಗಿದ್ದಾರೆಯೇ ಎಂಬ ವದಂತಿ ಹಬ್ಬುವಂತಾಗಿದೆ.
ಈ ಹಿಂದೆ ದಡೇಸೂಗೂರ್ ಶಾಸಕರಾಗಿದ್ದ ವೇಳೆ ಈ ಮಹಿಳಾ ಅಧಿಕಾರಿಯ ಜೊತೆಗಿನ ಮಾತುಗಳ ಆಡಿಯೋ ವೈರಲ್ ಆಗಿತ್ತು. ಇದರಿಂದ ಇವರ ನಡುವಿನ ಸಂಬಂಧ ಬಗ್ಗೆ ಗುಸು ಗುಸು ಹರಡಿತ್ತು. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೇ ತನ್ನ ಗಂಡ ಮಾಜಿ ಶಾಸಕರು ಅಂತ ಹೇಳಿಕೊಂಡಿದ್ದಾರೆ.
ಹೊಸಪೇಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಉಪ ಲೋಕಾಯುಕ್ತ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಬಸವರಾಜ ದಡೇಸೂಗೂರು ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದು ಸದ್ಯ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದಾರೆ.
A woman officer has made a startling disclosure that she is married to BJP former #MLA from #Kanakagiri, #BasavarajDadesugur, who is currently the #Koppal district president of the party. This has now led to speculation that the BJP leader may have married a second time secretly. pic.twitter.com/CsOlejfj6T
— Headline Karnataka (@hknewsonline) March 15, 2025
A woman officer has made a startling disclosure that she is married to BJP former MLA from Kanakagiri, Basavaraj Dadesugur, who is currently the Koppal district president of the party. This has now led to speculation that the BJP leader may have married a second time secretly.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm