ಬ್ರೇಕಿಂಗ್ ನ್ಯೂಸ್
19-03-25 12:44 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.19 : ''ಹೆಂಗಸರಿಗೆ ಮಾಸಿಕ 2 ಸಾವಿರ, ಓಡಾಟಕ್ಕೆ ಬಸ್ ಫ್ರೀ ಎಲ್ಲವನ್ನೂ ಕೊಟ್ಟಿದ್ದೀರಿ. ಇದಕ್ಕೆ ಕೊಡುತ್ತಿರುವುದು ಖಜಾನೆ ದುಡ್ಡು ಅಲ್ಲವೇ? ಹೆಂಗಸರಿಗೆ ಖುಷಿಪಡಿಸುವಂತೆ ಕುಡಿಯುವ ಗಂಡಸರಿಗೂ ವಾರಕ್ಕೆ ಎರಡು ಬಾಟಲಿ ಮದ್ಯ ಫ್ರೀ ಕೊಡಿ. ಸೊಸೈಟಿಗಳ ಮೂಲಕ ಇದನ್ನು ಹಂಚಿಕೆ ಮಾಡಿ. ಹೀಗೆಂದು ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಸರಕಾರ ಮದ್ಯ ಮಾರಾಟದ ಟಾರ್ಗೆಟ್ ಹೆಚ್ಚಿಸಿ, ಅಬಕಾರಿ ಆದಾಯವನ್ನು 40 ಸಾವಿರ ಕೋಟಿಗೆ ನಿಗದಿ ಮಾಡಿರುವುದು ಪಾಪದ ಕೆಲಸವಲ್ಲವೇ? ಹೆಂಗಸರಿಗೆ ಫ್ರೀ ಕೊಟ್ಟು ಗಂಡಸರಿಂದ ಹಣ ಪೀಕುವುದು ತಪ್ಪಲ್ಲವೇ? ಸಂಪೂರ್ಣ ಪಾನ ನಿಷೇಧ ಜಾರಿ ಏಕೆ ಸಾಧ್ಯವಿಲ್ಲ? ಇಂತಹ ಹಲವು ವಾದ -ಪ್ರತಿವಾದಗಳಿಗೆ ವಿಧಾನಸಭೆ ಸಾಕ್ಷಿಯಾಯ್ತು. ಈ ವೇಳೆ, ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ ಮತ್ತು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಅಬಕಾರಿ ಸುಂಕ ಹೆಚ್ಚಿಸಿ ಮದ್ಯದ ಮೂಲಕ ಆದಾಯ ಸಂಗ್ರಹಕ್ಕಿಳಿದಿರುವುದನ್ನು ವಿರೋಧಿಸಿದರು. ಅಲ್ಲದೆ, ಸಂಪೂರ್ಣ ಮದ್ಯ ನಿಷೇಧ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಕೃಷ್ಣಪ್ಪ ಮಾತಿಗೆ, ಮುಂದೆ ಚುನಾವಣೆಯಲ್ಲಿ ಗೆದ್ದು ಬಂದು ಮದ್ಯ ನಿಷೇಧ ಮಾಡಿ ಎಂದು ಸಚಿವ ಕೆ.ಜೆ.ಜಾರ್ಜ್ ಸಲಹೆ ಮಾಡಿದರು. ''ಈಗಲೇ ಈ ಸ್ಥಿತಿಯಾಗಿದೆ, ಇನ್ನು ಫ್ರೀ ಮದ್ಯ ಕೊಟ್ಟರೆ ಏನಾಗಬಹುದು? ಎಂದು ಸ್ಪೀಕರ್ ಹಾಸ್ಯ ಚಟಾಕಿ ಹಾರಿಸಿದರು. ತಮ್ಮ ವಾದವನ್ನು ಬಿಟ್ಟುಕೊಡದ ಕೃಷ್ಣಪ್ಪ, ''ಈಗೇನಾಗಿದೆ? ನಮ್ಮ 224 ಶಾಸಕರಲ್ಲಿ ಯಾರು ಕುಡಿಯಲ್ಲಾ ಹೇಳಿಬಿಡಲಿ ಎಂದು ಮರು ಪ್ರಶ್ನೆ ಹಾಕಿದರು. ಈ ಮಾತಿಗೆ ಜೆಡಿಎಸ್ ಗುಂಪಿನ ಉಪನಾಯಕಿ ಶಾರದಾ ನಾಯಕ್, 224 ಶಾಸಕರು ಎಂದು ನಮ್ಮನ್ನೂ ಯಾಕೆ ಸೇರಿಸಿಕೊಳ್ತೀರಿ ಎಂದು ಆಕ್ಷೇಪಿಸಿದರು.
ಆಡಳಿತಾರೂಢ ಕಾಂಗ್ರೆಸ್‌ನ ಬಿ.ಆರ್.ಪಾಟೀಲ್ ಮಾತನಾಡಿ, ನಮ್ಮ ಭಾಗದ ಮಹಿಳೆಯರು ಅನ್ನಭಾಗ್ಯ, ಗೃಹಲಕ್ಷ್ಮೀ ಸೇರಿ ಯಾವ ಉಚಿತ ಯೋಜನೆಯೂ ಬೇಡ ಸ್ವಾಮಿ.. ಮದ್ಯ ಮಾರಾಟ ಬಂದ್ ಮಾಡಿ. ನಮ್ಮ ಸಂಸಾರ ಉಳಿಸಿ ಎಂದು ಬೇಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇನೆ. ಆದರೆ, ಕೇಳಿಲ್ಲ ಎಂದು ಅಲವತ್ತುಕೊಂಡರು. ''ನನಗೊಂದು ವೇಳೆ ಸರ್ವಾಧಿಕಾರಿಯಾಗುವ ಅವಕಾಶ ಸಿಕ್ಕರೆ ಎರಡು ತಾಸಿನಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿ ಮಾಡುತ್ತೇನೆ. ಪಾಪದ ಹಣದಿಂದ ಅಭಿವೃದ್ಧಿ ಮಾಡಬೇಕೇ? ಎಂದು ಪ್ರಶ್ನೆ ಮಾಡಿದರು.
Legislative Assembly Sparks Heated Debate Over Alcohol Ban. "Just like women are given free, give men two free bottles a week..." "Women are asking for no freebies, ban alcohol." Heated debate in the Legislative Assembly over alcohol ban. Make news tittle
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm