Raichur Accident, Bike Lorry: ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ ; ರಸ್ತೆಯಲ್ಲಿ ಬಡಿದುಕೊಳ್ಳುತ್ತಿದ್ದ ಬೈಕ್ ಸವಾರನ ಹೃದಯ, ಬೆಚ್ಚಿಬಿದ್ದ ರಾಯಚೂರಿನ ಜನ 

19-03-25 04:42 pm       HK News Desk   ಕರ್ನಾಟಕ

ಲಾರಿ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಕುಳಿತಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್‌ಗೆ ರಸ್ತೆ ಸಂಪರ್ಕ ಕಲ್ಪಿಸುವ ಸ್ಟೇಷನ್ ರಸ್ತೆಯಲ್ಲಿನ ಶ್ರೀರಾಮಮಂದಿರ ಬಳಿ ಈ ಅವಘಡ ಸಂಭವಿಸಿದೆ.

ರಾಯಚೂರು, ಮಾ 19: ಲಾರಿ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಕುಳಿತಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್‌ಗೆ ರಸ್ತೆ ಸಂಪರ್ಕ ಕಲ್ಪಿಸುವ ಸ್ಟೇಷನ್ ರಸ್ತೆಯಲ್ಲಿನ ಶ್ರೀರಾಮಮಂದಿರ ಬಳಿ ಈ ಅವಘಡ ಸಂಭವಿಸಿದೆ.

ಉತ್ತರ ಪ್ರದೇಶ ನಿವಾಸಿ ಸುರೇಶ್(35) ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಇವರ ಮಗ ಬಾಲಕ ಶುಭಂ ಕಾಲು ಮುರಿದಿದೆ.

ರಸ್ತೆಯಲ್ಲಿ ಬಡಿದುಕೊಳ್ಳುತ್ತಿದ್ದ ಹೃದಯ!: 

ಸುರೇಶ್ ಗ್ರಾನೈಟ್ ಕೆಲಸ ಮಾಡುತ್ತಿದ್ದರು. ರಾಯಚೂರಿಗೆ ಗ್ರಾನೈಟ್ ಕೆಲಸಕ್ಕಾಗಿ ಬಂದಿದ್ದರು. ನಿನ್ನೆ‌‌ ರಾತ್ರಿ ಬೈಕ್ನಲ್ಲಿ ಸ್ಟೇಷನ್‌ ರಸ್ತೆ ಮೂಲಕ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುರೇಶ್ ಅವರ ಹೃದಯ ಹೊರಬಂದು ರಸ್ತೆಯಲ್ಲಿ ಬಡಿದುಕೊಳ್ಳುತ್ತಿತ್ತು. ದೇಹದ ಅಂಗಾಂಗಗಳು ಛಿದ್ರವಾಗಿ ಬಿದ್ದಿದ್ದವು. ಈ ದೃಶ್ಯ ಕರುಳು ಹಿಂಡುವಂತಿತ್ತು.

ರಾಯಚೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಗಾಯಾಳು ಬಾಲಕನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Tragic accident in Raichur, Lorry Hits Biker, Community in Shock as Heart Pounding Scene Unfolds.